ಬ್ರೇಕಿಂಗ್ ನ್ಯೂಸ್
30-01-22 04:37 pm HK Desk news ಕರ್ನಾಟಕ
ಬೆಂಗಳೂರು, ಜ.30 : ಟೋಯಿಂಗ್ ವಾಹನಕ್ಕೆ ಕಲ್ಲೆಸೆದ ನೆಪದಲ್ಲಿ ಅಂಗವಿಕಲ ಮಹಿಳೆಗೆ ಪೊಲೀಸರೊಬ್ಬರು ಬೂಟುಗಾಲಿನಲ್ಲಿ ಒದ್ದು ಅಮಾನವೀಯತೆ ತೋರಿದ ಘಟನೆ ಸಂಬಂಧಿಸಿ ಆರೋಪಿತ ಪೊಲೀಸ್ ಅಧಿಕಾರಿ ಎಎಸ್ಐ ನಾರಾಯಣ ಎಂಬವರನ್ನು ಅಮಾನತು ಮಾಡಲಾಗಿದೆ.
ವಾಹನಗಳ ಟೋಯಿಂಗ್ ಮಾಡುತ್ತಿದ್ದ ಪೊಲೀಸರ ಮೇಲೆ ಕಲ್ಲಿನಿಂದ ಹೊಡೆದರೆಂಬ ಕಾರಣಕ್ಕೆ ಅಲ್ಲಿದ್ದ ಎಎಸ್ಐ ಒಬ್ಬರು ಅಂಗವಿಕಲ ಮಹಿಳೆಗೆ ಬೂಟುಗಾಲಿನಿಂದ ಒದ್ದಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು ಭಾರೀ ವೈರಲ್ ಆಗಿತ್ತು. ವಿಡಿಯೋ ಆಧರಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಘಟನೆ ಬಗ್ಗೆ ತನಿಖೆಗೆ ಸೂಚನೆ ನೀಡಿದ್ದರು.
ಪ್ರಾಥಮಿಕ ತನಿಖೆ ನಡೆಸಿದ ಬೆಂಗಳೂರು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ, ಹಲಸೂರು ಗೇಟ್ ಸಂಚಾರ ಠಾಣೆ ಎಎಸ್ಐ ನಾರಾಯಣ ಅವರನ್ನು ಅಮಾನತು ಮಾಡಿದ್ದಾರೆ. ಆರೋಪಕ್ಕೀಡಾದ ಎಎಸ್ಐ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಅವರ ಮೇಲಿನ ಆರೋಪದ ಬಗ್ಗೆ ಇಲಾಖಾ ವಿಚಾರಣೆ ನಡೆಯಲಿದೆ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.
ಹಲಸೂರು ಗೇಟ್ ಬಳಿ ಘಟನೆ ನಡೆದಿದ್ದು ನೋ ಪಾರ್ಕಿಂಗ್ ಏರಿಯಾದಲ್ಲಿದ್ದ ಸ್ಕೂಟರನ್ನು ಟೋಯಿಂಗ್ ತಂಡ ವಶಕ್ಕೆ ಪಡೆದಿತ್ತು. ಈ ವೇಳೆ, ಸ್ಕೂಟರ್ ನಿಲ್ಲಿಸಿದ್ದ ಅಂಗವಿಕಲ ಮಹಿಳೆ ಸ್ಥಳಕ್ಕೆ ಬಂದಿದ್ದು ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದರು. ಬಳಿಕ ಜಗಳ ನಡೆಸಿ ಎಎಸ್ಐ ನಾರಾಯಣ ಎಂಬವರ ಮೇಲೆ ಕಲ್ಲೆಸೆದಿದ್ದು ಕೆನ್ನೆಗೆ ಏಟು ಬಿದ್ದಿತ್ತು. ಇದರಿಂದ ಕೋಪಗೊಂಡ ಎಎಸ್ಐ, ಮಹಿಳೆಯನ್ನು ತುಳಿದು ನೆಲಕ್ಕೆ ದೂಡಿದ್ದರು. ಇದನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ವಿಡಿಯೋ ಮಾಡಿದ್ದು ವೈರಲ್ ಆಗಿತ್ತು.
Dear All, after @republic published an article, ASI Mr Narayan who assaulted differently abled woman was suspended and pending enquiry. Thanks @JnanendraAraga @CPBlr @AddlCPTraffic on acting on this. https://t.co/gzIfzNDC6G
— Sagay Raj P || ಸಗಾಯ್ ರಾಜ್ ಪಿ (@sagayrajp) January 30, 2022
A traffic policeman was caught on camera assaulting and abusing a physically challenged woman on the busy J.C. Road after a stone that she was throwing at a towing vehicle hit him instead. The clip shows passers-by trying to intervene even as the policeman continued kicking her. He was later identified as Assistant Sub Inspector (ASI) R. Narayana attached to the Halasuru Gate traffic police.
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
07-02-25 05:27 pm
HK News Desk
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
07-02-25 10:13 pm
Mangalore Correspondent
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
Mangalore airport: ಮಂಗಳೂರು ಏರ್ಪೋರ್ಟ್ ರನ್ ವೇ ವ...
06-02-25 10:16 pm
Prasad Attavar, Saloon Attack, Mangalore: ಮಸಾ...
05-02-25 10:51 pm
07-02-25 11:55 am
Mangalore Correspondent
Mangalore crime, blackmail Temple priest: ಅರ್...
06-02-25 09:32 pm
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm