ರಸ್ತೆ ಗುಂಡಿಗೆ ಕನ್ನಡ ಶಿಕ್ಷಕಿ ಬಲಿ ; ಪಾಲಿಕೆ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ ! 

30-01-22 10:15 pm       HK Desk news   ಕರ್ನಾಟಕ

ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ಆಯತಪ್ಪಿ ಬಿದ್ದ ಪರಿಣಾಮ ಶಿಕ್ಷಕಿಯೊಬ್ಬರ ಮೇಲೆ ಪಿಕಪ್ ವಾಹನ ಸಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 

ಬೆಂಗಳೂರು, ಜ 30 : ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ಆಯತಪ್ಪಿ ಬಿದ್ದ ಪರಿಣಾಮ ಶಿಕ್ಷಕಿಯೊಬ್ಬರ ಮೇಲೆ ಪಿಕಪ್ ವಾಹನ ಸಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 

ಬೆಂಗಳೂರಿನ ಮಾಗಡಿ‌ ಮುಖ್ಯರಸ್ತೆಯ ಬ್ಯಾಡರಹಳ್ಳಿ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ. ಖಾಸಗಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದ ಶರ್ಮಿಳಾ ಸಾವಿಗೀಡಾಗಿದ್ದು, ಅವರ ಪತಿ ಪ್ರಕಾಶ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶರ್ಮಿಳಾ-ಪ್ರಕಾಶ್ ದಂಪತಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಅಂಜನನಗರ ಬಳಿ ಈ ಅವಘಡ ಉಂಟಾಗಿದೆ. ರಸ್ತೆಯಲ್ಲಿ ಪೈಪ್​ಲೈನ್​ ಕಾಮಗಾರಿಗೆಂದು ಅಗೆದು ಗುಂಡಿ ಉಂಟಾಗಿದ್ದು, ಅದನ್ನು ದುರಸ್ತಿಗೊಳಿಸಿಲ್ಲ. ಇದರಿಂದಾಗಿ ದ್ವಿಚಕ್ರವಾಹನ ಆಯತಪ್ಪಿದ್ದು, ಕೆಳಕ್ಕೆ ಬಿದ್ದಿದ್ದಾರೆ. ಅವರ ಮೇಲೆ ಬೊಲೆರೊ ವಾಹನ ಸಾಗಿ, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಈಕೆ ವಿಜಯನಗರ ಸಮೀಪದ ಮೂಡಲ ಪಾಳ್ಯದಿಂದ ಮಾದನಾಯಕನಹಳ್ಳಿಯಲ್ಲಿರುವ ಸಹೋದರನ ಮನೆಗೆ ಪತಿಯೊಂದಿಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರಸ್ತೆಗುಂಡಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಿತ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

Kannada teacher dies of Accident avoiding a pothole, public rage on corporation officials. The deceased has been identified as Sharmila.