ಬ್ರೇಕಿಂಗ್ ನ್ಯೂಸ್
02-02-22 10:24 pm HK Desk news ಕರ್ನಾಟಕ
ಮೈಸೂರು, ಫೆ.2 : ಆಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಪ್ರಕರಣದಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ನಗರದ ಪೊಲೀಸ್ ಅಕಾಡೆಮಿ ಕವಾಯತು ಮೈದಾನದಲ್ಲಿ 45ನೇ ತಂಡದ ಪಿಎಸ್‌ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರ ಜೊತೆ ಮಾತನಾಡಿದರು. ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ಅವರಿಗೆ ವರ್ಗಾವಣೆ ಹಿಂಪಡೆದಿದ್ದು ಆಡಳಿತಾತ್ಮಕ ನಿರ್ಧಾರ ಎಂದು ಸ್ಪಷ್ಟನೆ ನೀಡಿದ ಸಚಿವರು, ಯಾರು ಯಾರ ಮೇಲೆ ಬೇಕಾದರೂ ಆರೋಪ ಮಾಡಬಹುದು. ಆದರೆ ಸತ್ಯಾಸತ್ಯತೆಯನ್ನು ತಿಳಿಯಲು ತನಿಖೆ ನಡೆಸಲಾಗುವುದು ಎಂದರು.
ಬಹಳಷ್ಟು ಮಂದಿ ಪೊಲೀಸ್ ಠಾಣೆಗಳು ಮರ್ಯಾದಸ್ಥರು ಹೋಗುವ ಸ್ಥಳವಲ್ಲ ಎನ್ನುತ್ತಾರೆ. ಆದರೆ ಇಲ್ಲಿ ಹಲವರು ಉನ್ನತ ಶಿಕ್ಷಣ ಪಡೆದವರಿದ್ದಾರೆ. ಈ ತರಬೇತಿ ನೀಡಿರುವುದು ಯಾರಿಗೂ ಹಿಂಸೆ ಕೊಡಲು ಅಲ್ಲ. ಇದು ಜನರ ರಕ್ಷಣೆಗೆ ನೀಡಿರುವ ತರಬೇತಿಯಾಗಿದೆ. ರಾಜ್ಯದಲ್ಲಿ ಸೈಬರ್ ವಿಂಗ್ (ಎಫ್‌ಎಸ್‌ಎಲ್) ವಿಭಾಗವನ್ನು ಬಲಪಡಿಸುತ್ತಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಎಫ್‌ಎಸ್‌ಎಲ್ ಲ್ಯಾಬ್ ಆರಂಭಿಸಲಿದ್ದೇವೆ, ಶಸ್ತ್ರಾಸ್ತ್ರ ಒದಗಿಸಲಿದ್ದೇವೆ ಎಂದರು.
ಸಾರ್ವಜನಿಕರನ್ನು ಬಂಧುಗಳಂತೆ ನೋಡಬೇಕು. ಕಾನೂನು ವಿರೋಧಿಸುವ ಕ್ರಿಮಿನಲ್‌ಗಳಿಗೆ ಭಯ ಹುಟ್ಟಿಸಬೇಕು. ನಾಗರಿಕರಿಗೆ ಸಜ್ಜನರಿಗೆ ಅಭಯವನ್ನು ನೀಡಬೇಕು. ಕೆಲವು ಪೊಲೀಸರು ಅನಿಷ್ಟತನ ನೋಡಿದಾಗ ಉತ್ತಮ ನಡವಳಿಕೆಯವರು ತಲೆ ತಗ್ಗಿಸಬೇಕಾಗಿದೆ. ಒಮ್ಮೆಯೂ ತಲೆ ತಗ್ಗಿಸುವ ಕೆಲಸ ಮಾಡಬಾರದು. ಯಾವುದೇ ಅಪಚಾರಗಳು ನಮ್ಮಿಂದ ಆಗಬಾರದು. ನಾವು ಅವರ ರಕ್ಷಕರಾಗಬೇಕು. ನಾವು ಯಾರ ಗುಲಾಮರಾಗಬಾರದು ಎಂದು ಹೇಳಿದರು.
Corruption allegation on Ravi D Channannavar, Home Minister says investigation is on after a Bangalore Based lawyer Jagadish exposed documents of properties acquired by Ips officer.
10-08-25 06:27 pm
Bangalore Correspondent
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
ಬೆಂಗಳೂರಿನಲ್ಲಿ ಮತ್ತೊಂದು ಹೊಸ ಸ್ಟೇಡಿಯಂ ; 80 ಸಾವಿ...
09-08-25 08:00 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm