ಹಿಜಾಬ್ ವಿವಾದ ; ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಆಯಾ ಕಾಲೇಜುಗಳೇ ಸಮಸ್ಯೆ ಬಗೆಹರಿಸಲಿ ; ಸಚಿವ ಈಶ್ವರಪ್ಪ 

03-02-22 06:38 pm       HK Desk news   ಕರ್ನಾಟಕ

ರಾಜ್ಯದಲ್ಲಿ ಹಿಜಾಬ್ ಮತ್ತು  ಕೇಸರಿ ಶಾಲು ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ, ರಾಜ್ಯದಲ್ಲಿ  ಯಾವುದೋ ಒಂದು ವ್ಯವಸ್ಥೆ  ಗೊಂದಲ ಸೃಷ್ಟಿಸುತ್ತಿದೆ.

ಶಿವಮೊಗ್ಗ, ಫೆ.3 : ರಾಜ್ಯದಲ್ಲಿ ಹಿಜಾಬ್ ಮತ್ತು  ಕೇಸರಿ ಶಾಲು ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ, ರಾಜ್ಯದಲ್ಲಿ  ಯಾವುದೋ ಒಂದು ವ್ಯವಸ್ಥೆ  ಗೊಂದಲ ಸೃಷ್ಟಿಸುತ್ತಿದೆ. ಆಯಾ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಲಹೆ ಮಾಡಿದ್ದಾರೆ. 

ರಾಜ್ಯದಲ್ಲಿ ಹಿಂದು- ಮುಸ್ಲಿಮರು ಸಂತೋಷದಿಂದ  ಸಹೋದರರಂತೆ ಬದುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವರಿಂದ ಗೊಂದಲ ಸೃಷ್ಟಿಯಾಗಿದೆ. ಹಿಜಾಬ್ ಕುರಿತು ಆಯಾ ಶಾಲಾ ಆಡಳಿತಗಳು ಗಮನ ಹರಿಸಬೇಕು. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ  ಸಂಬಂಧಪಟ್ಟ ಶಾಲಾಡಳಿತಗಳು ಕ್ರಮ ವಹಿಸಬೇಕು. ಸರ್ಕಾರ ಈ ಕುರಿತು ಗಮನ ಹರಿಸುವ ಮೊದಲು ಆಯಾ ಶಾಲೆ, ಕಾಲೇಜು ಆಡಳಿತ ಮಂಡಳಿ  ತಮ್ಮ ಕರ್ತವ್ಯ ನಿಭಾಯಿಸಲಿ ಎಂದು ಸಲಹೆ ಮಾಡಿದ್ದಾರೆ. ‌

ಉಡುಪಿಯ ಬಳಿಕ ಈಗ ಕುಂದಾಪುರದ ಪದವಿಪೂರ್ವ ಕಾಲೇಜಿನಲ್ಲಿಯೂ ಹಿಜಾಬ್ ವಿವಾದ ಉಂಟಾಗಿದ್ದು ಇಂದು ತೀವ್ರ ತಿಕ್ಕಾಟಕ್ಕೆ ಕಾರಣವಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜು ಗೇಟ್ ಒಳಗಡೆ ಬರದಂತೆ ತಡೆದಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Hijab row, Colleges themselves should handle the uniform code says Eshwarappa.