ಸಿದ್ದರಾಮಯ್ಯರಿಗೆ ಮತಾಂಧತೆ ಹಬ್ಬಿಸುವುದೇ ಉದ್ದೇಶ, ಕೇಸರಿ ಶಾಲು ಕ್ರಿಯೆಗೆ ಪ್ರತಿಕ್ರಿಯೆ ಎಂದ ಸಚಿವ ಕೋಟ ! 

05-02-22 04:46 pm       HK Desk news   ಕರ್ನಾಟಕ

ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಇಬ್ಬರೂ ಪರಿಸ್ಥಿತಿಯನ್ನ ತಿಳಿಗೊಳಿಸುವ ಪ್ರಯತ್ನ ಮಾಡಬೇಕು. ಅದನ್ನ ಬಿಟ್ಟು ರಾಜಕೀಯ ಮಾಡಬಾರದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬೆಂಗಳೂರು, ಫೆ.5 : ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಇಬ್ಬರೂ ಪರಿಸ್ಥಿತಿಯನ್ನ ತಿಳಿಗೊಳಿಸುವ ಪ್ರಯತ್ನ ಮಾಡಬೇಕು. ಅದನ್ನ ಬಿಟ್ಟು ರಾಜಕೀಯ ಮಾಡಬಾರದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

ಮತಾಂಧತೆ ಮಾಡುವುದೇ ಅವರ ಉದ್ದೇಶ. ಅದೆಲ್ಲದಕ್ಕೂ ಕಡಿವಾಣ ಹಾಕುವುದೇ ಸರ್ಕಾರದ ಉದ್ದೇಶ.‌ ನಮ್ಮಲ್ಲಿ ಸ್ಪಷ್ಟತೆ ಇದೆ, ಯಾವ ಗೊಂದಲವೂ ಇಲ್ಲ. ಶಿಕ್ಷಣ ಸಂಸ್ಥೆಯಲ್ಲಿ ಹಿಜಾಬ್ ಹೆಸರಲ್ಲಿ ಧರ್ಮಾಂಧತೆ ಮಾಡುವುದನ್ನು ವಿರೋಧ ಮಾಡ್ತೇವೆ.

ಒಂದೂವರೆ ವರ್ಷದಿಂದ ವಿದ್ಯಾರ್ಥಿನಿಯರಿಗೆ ಸಮಸ್ಯೆ ಇರಲಿಲ್ಲ. ಹೊರಗಿನ ಮತಾಂಧ ಶಕ್ತಿಗಳು ಮಾಡುತ್ತಿರುವುದು ಇದು. ಶಾಲಾ ಸಮವಸ್ತ್ರ ಧರಿಸಿ ಬರಬೇಕು ಅನ್ನುವ ನಿಯಮ ಇದೆ. ಸಮಾಜ ಒಡೆಯುವ ಕುತಂತ್ರವನ್ನು ಯಾವುದೇ ಕಾರಣಕ್ಕೆ ಸಹಿಸುವುದಿಲ್ಲ. ರಾಷ್ಟ್ರ ಬಾವುಟವನ್ನು ಅಡ್ಡ ಹಾಕಿ ಗದ್ದಲ ಎಬ್ಬಿಸಲಾಗಿತ್ತು. ಇದರ ಹಿಂದೆ ಯಾರಿದ್ದಾರೆ ಅನ್ನೋದನ್ನು ಪತ್ತೆಹಚ್ಚಿ ಅಂಥ ಗುಂಪುಗಳನ್ನು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಕೋಟ ಹೇಳಿದರು. 

ಕ್ರಿಯೆಗೆ ತಕ್ಕ ಪ್ರತಿಕ್ರಿಯೆಗಳು ಅಲ್ಲಿ ನಡೆದಿವೆ. ಕೇಸರಿ ಧರಿಸಿರುವುದು ಸರಿಯಾ ತಪ್ಪಾ ಅಂದ್ರೆ ಅದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಅಂತ ಹೇಳ್ತೇನೆ. ಕೇಸರಿ ಆಗಲಿ, ಹಿಜಬ್ ಆಗಲಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಗೊಂದಲ ಇರಬಾರದು. ಅದು ಸರಿಯಾ ಇದು ಸರಿಯಾ ಅನ್ನೋದಲ್ಲ ಪ್ರಶ್ನೆ. ಒಂದು ತಪ್ಪಾದರೆ ಇನ್ನೊಂದೂ ತಪ್ಪಲ್ವಾ ಎಂದು ಪ್ರಶ್ನೆ ಮಾಡಿದರು.

Hijab row Kota Poojary slams Siddaramaiah. As more colleges in Karnataka have started denying entry to Muslim students wearing the hijab, the Congress in Karnataka has come out in support of the students’ right to wear the religious headscarf. Wearing the hijab is a fundamental right of the students, Leader of Opposition Siddaramaiah said to reporters. He also noted that by preventing them from attending classes, their right to education was being violated.