ಬ್ರೇಕಿಂಗ್ ನ್ಯೂಸ್
05-02-22 09:56 pm HK Desk news ಕರ್ನಾಟಕ
ಬೆಂಗಳೂರು, ಫೆ.5 : ಹಿಜಾಬ್- ಕೇಸರಿ ಶಾಲು ಹಿಡಿದು ಜಗ್ಗಾಟದಲ್ಲಿ ತೊಡಗಿರುವ ಮಂದಿಗೆ ರಾಜ್ಯ ಸರಕಾರ ಕೊನೆಗೂ ದಂಡ ಬೀಸಿದೆ. ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲಿ ಕೇಸರಿಯಾಗಲೀ, ಹಿಜಾಬ್ ಆಗಲೀ ಯಾವುದೇ ಧಾರ್ಮಿಕ ಸಂಕೇತಗಳ ಬಟ್ಟೆಗಳನ್ನು ಹಾಕುವುದನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಅಲ್ಲದೆ, ಖಾಸಗಿ ಕಾಲೇಜುಗಳಲ್ಲಿ ಆಯಾ ಆಡಳಿತ ಮಂಡಳಿಗಳೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಸಮವಸ್ತ್ರ ಕಡ್ಡಾಯ ಮಾಡುವುದು ಅಥವಾ ಇನ್ನಿತರ ಬಟ್ಟೆಗಳನ್ನು ಧರಿಸುವುದಕ್ಕೆ ಅವಕಾಶ ನೀಡುವುದು ಆಯಾ ಕಾಲೇಜಿಗೆ ಬಿಟ್ಟ ವಿಚಾರ. ಆದರೆ ಸಾಮರಸ್ಯ ಕದಡುವ ರೀತಿಯ ಯಾವುದೇ ಆಚರಣೆಗೂ ಅವಕಾಶ ನೀಡಬಾರದು ಎಂದು ರಾಜ್ಯ ಸರಕಾರ ಆದೇಶದಲ್ಲಿ ತಿಳಿಸಿದೆ.
1983ರ ಶಿಕ್ಷಣ ಕಾಯ್ದೆ ಉಪ ಕಲಂ 133-2 ಆಧರಿಸಿ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಆ ಬಗ್ಗೆ ಆದೇಶ ಮಾಡಿದ್ದಾರೆ. ಇದರಂತೆ, ಶಾಲೆ, ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಲು ಅವಕಾಶ ಇದೆ. ಅಲ್ಲದೆ, ಖಾಸಗಿ ಕಾಲೇಜುಗಳಲ್ಲಿ ತಮ್ಮದೇ ಸಮವಸ್ತ್ರ ಅಳವಡಿಸಲು ಈ ಕಾಯ್ದೆಯಲ್ಲಿ ಅವಕಾಶ ಇದೆ ಎಂದು ತಿಳಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಗಳು ಸಮವಸ್ತ್ರದ ಬಗ್ಗೆ ನಿರ್ಧಾರಕ್ಕೆ ಬರದೇ ಇದ್ದರೆ, ಅಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಯಾವುದೇ ಬಟ್ಟೆಯ ಧಾರಣೆಯಿಂದ ಕಾಲೇಜಿನಲ್ಲಿ ಸಾಮರಸ್ಯಕ್ಕೆ ಸಮಸ್ಯೆ ಆಗಬಾರದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಕಳೆದ ಜನವರಿಯಿಂದ ಉಡುಪಿಯ ಸರಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್ ವಿಚಾರದ ಕಿಡಿ ಹೊತ್ತಿಕೊಂಡಿತ್ತು. ಸಮವಸ್ತ್ರದ ಮೇಲ್ಗಡೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ತಮಗೆ ಅವಕಾಶ ನೀಡಬೇಕೆಂದು ವಿವಾದ ಎಬ್ಬಿಸಿದ್ದರು. ಆದರೆ, ಅಲ್ಲಿನ ಕಾಲೇಜಿನ ಆಡಳಿತ ಮಂಡಳಿ ಅದಕ್ಕೆ ಅವಕಾಶ ನೀಡಿರಲಿಲ್ಲ. ಆನಂತರ, ಉಡುಪಿಯ ಬಳಿಕ ಕುಂದಾಪುರದಲ್ಲೂ ಕಿಡಿ ಹೊತ್ತಿಕೊಂಡಿತ್ತು.
ಹಿಂದು ಯುವಕರು ಕೇಸರಿ ಶಾಲು ಧರಿಸಿ ಹಿಜಾಬ್ ಆಚರಣೆಗೆ ಕೌಂಟರ್ ನೀಡಿದ್ದರು. ಇದೀಗ ರಾಜ್ಯದ ಹಲವೆಡೆ ಇದೇ ರೀತಿಯ ವಿವಾದ ಹೊತ್ತಿಕೊಂಡಿದೆ. ರಾಜ್ಯ ಸರಕಾರ ಈ ಬಗ್ಗೆ ಖಚಿತ ಆದೇಶ ನೀಡಿರುವುದರಿಂದ ಸೋಮವಾರದ ಬಳಿಕ ಹಿಜಾಬ್ ಮತ್ತು ಕೇಸರಿ ಶಾಲಿನ ವಿವಾದಕ್ಕೆ ಬ್ರೇಕ್ ಬೀಳುವ ಸಾಧ್ಯತೆಯಿದೆ.
Amid the ongoing hijab row, the Karnataka government on Saturday banned clothes that disturb harmony, public order. Karnataka high court will hear the plea filed by the five girls of the Udupi College on February 8.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm