ಹಿಜಾಬ್ ಬೆಂಕಿ ; ಹೈಕೋರ್ಟ್ ವಿಚಾರಣೆ ನಾಳೆಗೆ ಮುಂದೂಡಿಕೆ, ರಾಜ್ಯಾದ್ಯಂತ ಶಾಲೆ, ಕಾಲೇಜಿಗೆ ಮೂರು ದಿನಗಳ ರಜೆ ಘೋಷಣೆ 

08-02-22 05:09 pm       HK Desk news   ಕರ್ನಾಟಕ

ಹಿಜಾಬ್ ವಿವಾದದ ಕಿಚ್ಚು ರಾಜ್ಯಾದ್ಯಂತ ಹೊತ್ತಿಕೊಂಡ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಾಳೆಯಿಂದ ಮೂರು ದಿನಗಳ ಕಾಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 

ಬೆಂಗಳೂರು, ಫೆ.8 : ಹಿಜಾಬ್ ವಿವಾದದ ಕಿಚ್ಚು ರಾಜ್ಯಾದ್ಯಂತ ಹೊತ್ತಿಕೊಂಡ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಾಳೆಯಿಂದ ಮೂರು ದಿನಗಳ ಕಾಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 

ಉಡುಪಿ, ಶಿವಮೊಗ್ಗ, ಬಾಗಲಕೋಟದಲ್ಲಿ ಹಿಜಾಬ್, ಕೇಸರಿ ಕಿಚ್ಚು ತೀವ್ರಗೊಂಡಿದ್ದು ಎರಡೂ ಕಡೆಯಿಂದ ಜನರು ಜಮಾವಣೆಗೊಂಡು ಕೋಮು ವೈಷಮ್ಯಕ್ಕೆ ಕಾರಣವಾಗಿದೆ. ಕಲ್ಲು ತೂರಾಟ ನಡೆದು ಹಲವರು ಗಾಯಗೊಂಡಿದ್ದು ಸೆಕ್ಷನ್ ಹೇರಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಿರುವುದರಿಂದ ಸಿಎಂ ಬೊಮ್ಮಾಯಿ ರಾಜ್ಯದಲ್ಲಿ ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಿದ್ದಾರೆ. 

ಇದೇ ವೇಳೆ, ಹೈಕೋರ್ಟ್ ಅಂಗಳದಲ್ಲಿ ಹಿಜಾಬ್ ವಿಚಾರಣೆ ನಡೆಯುತ್ತಿದ್ದು  ಹಿಜಾಬ್ ಪರವಾಗಿ ಪ್ರಬಲ ವಾದ ಮಂಡನೆಯಾಗಿದ್ದು ರಾಜ್ಯ ಸರಕಾರಕ್ಕೆ ತೀವ್ರ ಪ್ರಶ್ನೆಗಳನ್ನು ಮುಂದಿಡಲಾಗಿದೆ. ಎರಡೂ ವಾದವನ್ನು ಕೇಳಿದ ನ್ಯಾಯಾಧೀಶರು ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 2.30 ಕ್ಕೆ ವಿಚಾರಣೆ ಮುಂದೂಡಿದೆ. 

ಹೀಗಾಗಿ ಕೋರ್ಟ್, ಸರಕಾರದ ಆದೇಶಕ್ಕೆ ತಡೆಯಾಜ್ಞೆ ನೀಡದೇ ಇರುವುದರಿಂದ ಮತ್ತೆ ಹಿಜಾಬ್ ಬೆಂಕಿ ಹತ್ತಿಕೊಳ್ಳುವ ಕಾರಣದಿಂದ ರಾಜ್ಯ ಸರಕಾರ ರಾಜ್ಯಾದ್ಯಂತ ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಿದೆ. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಆದೇಶ ಮಾಡಿದ್ದಾರೆ.

The controversy over headscarves in Karnataka has intensified, with students defying the government order to use uniform clothing to maintain "unity and equality". All schools and colleges in Karnataka will be shut for the next three days amid the row over wearing hijab by students.