ಹಿಜಾಬ್ ಸಾಂವಿಧಾನಿಕ ಬಿಕ್ಕಟ್ಟು ; ಅರ್ಜಿ ವಿಚಾರಣೆ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾವಣೆ, ಮಧ್ಯಂತರ ತಡೆಗೆ ನಕಾರ

09-02-22 05:06 pm       HK Desk news   ಕರ್ನಾಟಕ

ಹಿಜಾಬ್ ಕುರಿತು ಹೈಕೋರ್ಟಿಗೆ ಸಲ್ಲಿಸಲಾಗಿರುವ ಅರ್ಜಿಗಳ ಕುರಿತ ವಿಚಾರಣೆಯನ್ನು ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿ ನ್ಯಾಯಾಧೀಶ ಕೃಷ್ಣ ಎಸ್. ದೀಕ್ಷಿತ್ ಆದೇಶಿಸಿದ್ದಾರೆ.

ಬೆಂಗಳೂರು, ಫೆ.9 : ಹಿಜಾಬ್ ಕುರಿತು ಹೈಕೋರ್ಟಿಗೆ ಸಲ್ಲಿಸಲಾಗಿರುವ ಅರ್ಜಿಗಳ ಕುರಿತ ವಿಚಾರಣೆಯನ್ನು ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿ ನ್ಯಾಯಾಧೀಶ ಕೃಷ್ಣ ಎಸ್. ದೀಕ್ಷಿತ್ ಆದೇಶಿಸಿದ್ದಾರೆ.

ಹಿಜಾಬ್ ಕುರಿತಾಗಿ ದಾಖಲಾಗಿರುವ ನಾಲ್ಕು ಅರ್ಜಿಗಳ ಪರವಾಗಿ ಬುಧವಾರ ಹಲವು ಹಿರಿಯ ವಕೀಲರು ವಿಚಾರಣೆಗೆ ಹಾಜರಾಗಿದ್ದು, ಪ್ರಬಲ ವಾದ ಮಂಡಿಸಿದ್ದಾರೆ. ಪ್ರಕರಣ ಜಟಿಲವಾಗುತ್ತಿದ್ದಂತೆ ನ್ಯಾಯಾಧೀಶರು, ಈ ಪ್ರಕರಣವು ಹಲವು ಸಾಂವಿಧಾನಿಕ ಅಂಶಗಳನ್ನು ಒಳಗೊಂಡಿದ್ದು, ವಿಸ್ತೃತ ನ್ಯಾಯಪೀಠದಲ್ಲಿ ನಡೆಯುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ, ಈ ಬಗ್ಗೆ ಸರಕಾರದ ಅಡ್ವಕೇಟ್ ಜನರಲ್ ಮತ್ತು ಅರ್ಜಿದಾರರ ಪರ ವಕೀಲರು ತಮ್ಮ ಅಭಿಪ್ರಾಯ ತಿಳಿಸುವಂತೆ ಸೂಚಿಸಿದರು.

ಪ್ರಕರಣ ಜಟಿಲವಾಗಿದ್ದು, ಈ ಬಗ್ಗೆ ಆದಷ್ಟು ಬೇಗ ತೀರ್ಪು ಹೊರಬರಬೇಕು. ಹಾಗಾಗಿ ಯಾವುದೇ ಪೀಠ ಆದರೂ ಆದೀತು. ರಾಜ್ಯದಲ್ಲಿ ಗೊಂದಲ ಎದ್ದಿರುವುದರಿಂದ ಕೋರ್ಟ್ ಈ ಬಗ್ಗೆ ಮಧ್ಯಂತರ ಆದೇಶ ಕೊಟ್ಟರೂ ಆದೀತು ಎಂದು ಸರಕಾರದ ಕಡೆಯಿಂದ ಹಾಜರಾಗಿದ್ದ ಎಜಿ ಪ್ರಭುಲಿಂಗ ನಾವದಗಿ ಹೇಳಿದರು.

ಅರ್ಜಿದಾರರ ಪರ ಹಾಜರಾಗಿದ್ದ ಸಜನ್ ಪೂವಯ್ಯ, ನಮಗೆ ಏಕಸದಸ್ಯ ಪೀಠವೋ, ದ್ವಿಸದಸ್ಯವೋ ಅನ್ನುವುದು ವಿಷಯ ಅಲ್ಲ. ಸಂವಿಧಾನದಡಿ ಪ್ರದತ್ತವಾದ ಅಧಿಕಾರದಲ್ಲಿ ಈ ಬಗ್ಗೆ ತೀರ್ಪು ನೀಡುವುದು ಬೇಕಾಗಿದೆ. ಇನ್ನು ಎರಡು ತಿಂಗಳು ಮಾತ್ರ ಶೈಕ್ಷಣಿಕ ವರ್ಷ ಇರುವುದರಿಂದ ಪೀಠ ಬದಲಾಗಿ ತೀರ್ಪು ವಿಳಂಬಗೊಂಡು ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂದು ಹೇಳಿದರು. ಇನ್ನೊಬ್ಬ ವಕೀಲ ಮೊಹಮ್ಮದ್ ತಾಹಿರ್, ಈಗಾಗ್ಲೇ ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿಗಳು ಬೀದಿಗೆ ಬಂದಿದ್ದಾರೆ. ಪರೀಕ್ಷೆಗೆ ಒಂದು ತಿಂಗಳು ಇರುವಾಗ ಇಂಥ ಬೆಳವಣಿಗೆ ಆಗಿರುವುದರಿಂದ ಸಮಸ್ಯೆ ಆಗಿದೆ. ಹೀಗಾಗಿ ಇದೇ ನ್ಯಾಯಪೀಠ ಮಧ್ಯಂತರ ತಡೆಯನ್ನು ನೀಡಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರಕಾರದ ಪರ ವಕೀಲ, ರಾಜ್ಯ ಸರಕಾರದ ಆದೇಶದಲ್ಲಿ ಯಾವುದೇ ಕಾನೂನು ಬಾಹಿರ ಅಂಶಗಳಿಲ್ಲ. ಆಯಾ ಕಾಲೇಜು ಆಡಳಿತಗಳೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸ್ವತಂತ್ರರೆಂದು ಹೇಳಿದ್ದಾಗಿ ನ್ಯಾಯಪೀಠಕ್ಕೆ ತಿಳಿಸಿದರು. ರಾಜ್ಯ ಸರಕಾರದ ಆದೇಶ ಪ್ರಶ್ನಿಸುವ ಬದಲು ಆಯಾ ಕಾಲೇಜಿನ ನಿರ್ಣಯವನ್ನೇ ಪ್ರಶ್ನೆ ಮಾಡಬೇಕು ಎಂದು ಹೇಳಿದರು.

ಕೊನೆಗೆ ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶ ದೀಕ್ಷಿತ್, ಎಲ್ಲ ಅರ್ಜಿಗಳೂ ವಿಸ್ತೃತ ನ್ಯಾಯಪೀಠದಲ್ಲಿಯೇ ನಡೆಯುವುದು ಸೂಕ್ತ. ಕೂಡಲೇ ಈ ಕುರಿತ ಎಲ್ಲ ದಸ್ತಾವೇಜುಗಳನ್ನು ಮುಖ್ಯ ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸುತ್ತೇನೆ. ವಿಸ್ತೃತ ಪೀಠದಲ್ಲಿ ಯಾರು ಇರಬೇಕು, ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಅವರೇ ನಿರ್ಧರಿಸಲಿದ್ದಾರೆ. ಕೂಡಲೇ ಎಲ್ಲ ಕಡತಗಳನ್ನು ವರ್ಗಾಯಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಆದೇಶ ನೀಡಿದರು.

A decision on whether schools and colleges can order Muslim girls to not wear hijabs in class was passed on to a larger bench by the Karnataka High Court on Wednesday, a day after a face-off over the right to wear the religious headscarves forced educational institutes to close down for three days.
"These matters give rise to certain constitutional questions of seminal importance in view of certain aspects of personal law," the judge hearing the case said, referring it to a panel of judges to be led by the Chief Justice of the Karnataka High Court Ritu Raj Awasthi.