ಬ್ರೇಕಿಂಗ್ ನ್ಯೂಸ್
10-02-22 02:41 pm HK Desk news ಕರ್ನಾಟಕ
ರಾಮನಗರ, ಫೆ.10 : ಉಡುಪಿಯಲ್ಲಿ ಹುಟ್ಟಿಕೊಂಡ ಸಣ್ಣ ವಿವಾದ ಈಗ ಹಲವಾರು ದೇಶಗಳಲ್ಲಿ ಚರ್ಚೆ ಮಾಡುವ ಹಂತಕ್ಕೆ ಹೋಗಿದೆ. ಕಾಂಗ್ರೆಸ್ - ಬಿಜೆಪಿ ಪಕ್ಷ ಸೇರಿ ಎಲ್ಲರಿಗೂ ಒಂದು ಪ್ರಶ್ನೆ ಕೇಳ್ತೇನೆ. ನೀವು ಅಮಾಯಕ ಮಕ್ಕಳ ಬದುಕಿನ ಜೊತೆಗೆ ಚೆಲ್ಲಾಟ ಆಡ್ತಿದ್ದೀರಿ. ಇವರು ಯಾರು ಹೋರಾಟಕ್ಕೆ ಇಳಿಸಿದ್ದಾರೋ ಅಂಥವರ ಮಕ್ಕಳು ಎಲ್ಲಿಯೂ ಶಾಲು ಹಾಕ್ಕೊಂಡು ಬೀದಿಗೆ ಬಂದಿಲ್ಲ. ಬಿಜೆಪಿ ಮಂದಿ ಕಂಡೋರ ಮಕ್ಕಳನ್ನು ಬೀದಿಗೆ ತಳ್ತಿದ್ದಾರೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್ಡಿಕೆ, ಈ ಸಂಘರ್ಷ ಯಾವ ಶಾಲೆಗಳಲ್ಲಿ ನಡೆಯುತ್ತಿದೆ, ಅವೆಲ್ಲವೂ ಸರಕಾರಿ ಶಾಲೆಗಳು. ಅಮಾಯಕ ಬಡ ಮಕ್ಕಳು ಓದುವ ಶಾಲೆಗಳು. ಯಾವುದೇ ದೊಡ್ಡ ದೊಡ್ಡ ಖಾಸಗಿ ಶಾಲೆಗಳಲ್ಲಿ ನಡೆಯುತ್ತಿಲ್ಲ. ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರು ಅಥವಾ ಇತರ ಸಂಘಟನೆಗಳ ನಾಯಕರು ಯಾರು ಕೂಡ ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನ ಓದಿಸುತ್ತಿಲ್ಲ. ಅವರೆಲ್ಲರೂ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಿದ್ದಾರೆ.
ಬಿಜೆಪಿ ನಾಯಕರು ಅವರು ಜನ್ಮಕೊಟ್ಟ ಮಕ್ಕಳಿಗೆ ಕೇಸರಿ ಶಾಲು ಹಾಕಿಸಿ ಹೋರಾಟ ಮಾಡಿಸುತ್ತಿದ್ದಾರೆಯೇ.. ಅವರ ಮಕ್ಕಳಿಗೆ ಎಲ್ಲಿಯೂ ಕೇಸರಿ ಶಾಲು ಹಾಕಿಸಿ ಹೋರಾಟ ಮಾಡ್ತಿಲ್ಲ. ಅಮಾಯಕ, ಬಡಮಕ್ಕಳ ಮಕ್ಕಳಿಗೆ ಕೇಸರಿ ಶಾಲು ಹಾಕಿಸಿ ಹೋರಾಟ ಮಾಡಿಸುತ್ತಿದ್ದಾರೆ. ಇನ್ನೊಂದು ಗುಂಪು ಹಿಜಾಬ್ ಹೆಸರಿನಲ್ಲಿ ಹೋರಾಟ ಮಾಡಿಸಿ ಮಕ್ಕಳನ್ನು ಬೀದಿಗೆ ಹಾಕಿದ್ದಾರೆ. ಇಲ್ಲಿ ಬಲಿಯಾಗಿದ್ದು ಅಮಾಯಕ ಮಕ್ಕಳು. ಖಾಸಗಿ ಶಾಲೆಯಲ್ಲಿ ಓದಿಸಲಾಗದೇ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಬಲಿಯಾಗುತ್ತಿದ್ದಾರೆ. ಬಿಜೆಪಿ ಮಂದಿ ಕಂಡವರ ಮಕ್ಕಳನ್ನ ಬಾವಿಗೆ ತಳ್ಳೋದನ್ನ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರ ಹಿಂದಿನ ನೈಜತೆಯನ್ನ ಮಕ್ಕಳ ಪೋಷಕರು ಸಹ ಅರ್ಥ ಮಾಡಿಕೊಳ್ಳಬೇಕು. ಪ್ರತಿಭಟನೆ ಮಾಡ್ತಿರುವ ಮಕ್ಕಳ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಈಗಾಗಲೇ ಹತ್ತಿಪ್ಪತ್ತು ಮಂದಿ ಮಕ್ಕಳ ಮೇಲೆ ಎಫ್ಐಆರ್ ಆಗಿದೆ. ತಮ್ಮ ತೆವಲು ತೀರಿಸಿಕೊಳ್ಳಲು ರಾಜಕೀಯ ಪಕ್ಷಗಳು, ಸಂಘಟನೆಗಳು ಮಕ್ಕಳನ್ನ ಬಳಕೆ ಮಾಡಿಕೊಳ್ತಿದ್ದಾರೆ. ಮುಂದೆ ಮಕ್ಕಳ ವಿಡಿಯೋ ಇಟ್ಟುಕೊಂಡು ಕೋರ್ಟ್ ಕಚೇರಿಗೆ ಹೋಗುವಂತೆ ಮಾಡ್ತಾರೆ. ಈಗಾಗಲೇ ಕೆಲವರ ಮೇಲೆ FIR ಆಗಿದೆ, ಇದು ನಿರಂತರವಾಗಿ ನಡೆಯುತ್ತದೆ. ಎರಡೊತ್ತಿನ ಊಟಕ್ಕೂ ಗತಿ ಇರಲ್ಲ ಆ ಮಕ್ಕಳಿಗೆ. ವಿಡಿಯೋ ಮುಂದಿಟ್ಟು ಸಾವಿರಾರು ಜನ ಮಕ್ಕಳ ಮೇಲೆ ಕೇಸ್ ಬೀಳಲಿದೆ. ಇದನ್ನ ಮೊದಲು ರಾಜಕೀಯ ಪಕ್ಷಗಳು ನಿಲ್ಲಿಸಬೇಕು ಎಂದರು ಎಚ್ಡಿಕೆ.
ಇವತ್ತು ವಿಚಾರಣೆ ಮಧ್ಯಾಹ್ನ ನಡೆಯಲಿದೆ. ನಾವು ನ್ಯಾಯಾಯಲಗಳ ಮೇಲೆ ಯಾವುದೇ ಒತ್ತಡ ಹೇರಲು ಸಾಧ್ಯವಿಲ್ಲ. ಆದರೆ ನ್ಯಾಯಾಂಗ ರಾಜ್ಯದ ಪರಿಸ್ಥಿತಿ ನೋಡಿಕೊಂಡು ಮಧ್ಯಸ್ಥಿಕೆ ವಹಿಸಿ ಈ ಪ್ರಕರಣವನ್ನ ತಿಳಿಗೊಳಿಸಬೇಕಿದೆ. ಆದಷ್ಟು ಬೇಗ ತಿಳಿಯಾಗಲಿ ಎಂದು ಹೇಳ್ತೇನೆ ಎಂದ್ರು ಹೆಚ್.ಡಿ. ಕುಮಾರಸ್ವಾಮಿ.
Hdk slams BJP says let them put kesari shawls to their sons not to other students.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm