ಶಾಲೆಯ ಆವರಣಕ್ಕೆ ಹೊರಗಿನವರು ಬಂದರೆ ಕ್ರಮ ; ಹಿಜಾಬ್ - ಕೇಸರಿ ಧರಿಸಿದರೆ ನ್ಯಾಯಾಂಗ ನಿಂದನೆ, ಶಾಲೆಗಳಿಗೆ ಹೆಚ್ಚುವರಿ ಬಂದೋಬಸ್ತ್ ನೀಡಲು ಸಿಎಂ ಸೂಚನೆ 

11-02-22 09:23 pm       HK Desk news   ಕರ್ನಾಟಕ

ಹೈಕೋರ್ಟ್ ಮಧ್ಯಂತರ ತೀರ್ಪಿನ ವಿಚಾರದಲ್ಲಿ ಭಿನ್ನ ಭಿನ್ನ ಅಭಿಪ್ರಾಯಗಳು ಬಂದಿರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್‌ ವರಿಷ್ಠರ ಜೊತೆ ಸಭೆ ನಡೆಸಿದ್ದಾರೆ.

ಬೆಂಗಳೂರು, ಫೆ.11 : ಹೈಕೋರ್ಟ್ ಮಧ್ಯಂತರ ತೀರ್ಪಿನ ವಿಚಾರದಲ್ಲಿ ಭಿನ್ನ ಭಿನ್ನ ಅಭಿಪ್ರಾಯಗಳು ಬಂದಿರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್‌ ವರಿಷ್ಠರ ಜೊತೆ ಸಭೆ ನಡೆಸಿದ್ದಾರೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿಎಂ ಮಹತ್ವದ ಸಭೆ ನಡೆಸಿದ್ದಾರೆ. 

ಸಭೆಯಲ್ಲಿ ಗೃಹಸಚಿವ ಅರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿ, ಐಜಿಪಿ, ಹಾಗೂ ಶಿಕ್ಷಣ ಇಲಾಖೆ ಉನ್ನತಾಧಿಕಾರಿಗಳು ಭಾಗಿಯಾಗಿದ್ದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು ಶಾಲೆ ಆವರಣದಲ್ಲಿ ಮತ್ತೆ ಗಲಾಟೆ, ಅಶಾಂತಿ ತಲೆದೋರದಂತೆ ನೋಡಿಕೊಳ್ಳಲು ಸಿಎ‌ಂ ಸೂಚನೆ ನೀಡಿದ್ದಾರೆ. 

ಸೋಮವಾರದಿಂದ ಹತ್ತನೇ ತರಗತಿಯ ವರೆಗೆ ಶಾಲೆ ಆರಂಭಿಸಲು ನಿರ್ಧರಿಸಿದ್ದು ಕೋರ್ಟ್ ಆದೇಶ ಪಾಲಿಸುವ ನಿಟ್ಟಿನಲ್ಲಿ ಸೂಕ್ತ ಬಂದೋಬಸ್ತ್ ನಡೆಸಲು ಸೂಚನೆ ನೀಡಲಾಗಿದೆ. ‌ಕೋರ್ಟ್ ಕೊಟ್ಟಿರುವ ಆದೇಶದ ಹೊರತಾಗ್ಯೂ ಹಿಜಾಬ್, ಕೇಸರಿ ಧರಿಸಿ ಬಂದ್ರೆ ನ್ಯಾಯಾಂಗ ನಿಂದನೆ ಆಗಲಿದೆ. ಹಾಗಾಗಿ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳ ಹೊರತುಪಡಿಸಿ, ಬೇರೆ ಯಾರಾದರೂ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲು ತಾಕೀತು ಮಾಡಿದ್ದಾರೆ. 

ಹಿಜಾಬ್ ಮತ್ತು ಕೇಸರಿ ಶಾಲು ವಿಚಾರದಲ್ಲಿ ಅತಿ ಹೆಚ್ಚು ಗಲಾಟೆಯಾದ ಜಿಲ್ಲೆಗಳ ಶಾಲೆಗಳಿಗೆ ಹೆಚ್ಚು ಭದ್ರತೆ ನೀಡಲು ಸೂಚಿಸಿದ್ದಾರೆ. ಉಡುಪಿ, ಶಿವಮೊಗ್ಗ, ಬಾಗಲಕೋಟೆ, ಮೈಸೂರು, ಮಂಡ್ಯ, ಬೀದರ್, ಧಾರವಾಡ, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳ ಡಿಸಿ ಮತ್ತು ಎಸ್ಪಿಗೆ ಈ ಬಗ್ಗೆ ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

ಸಭೆಯ ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ, ಯಾವುದೇ ಹೊರಗಿನ ಪ್ರಚೋದನೆಗೆ ಒಳಗಾಗದೆ, ಎಲ್ಲಾ ಅಧಿಕಾರಿಗಳು ಫೀಲ್ಡ್ ನಲ್ಲಿ ಇರಬೇಕು. ಎಲ್ಲ ಧರ್ಮದ ಸ್ಥಳೀಯರ ಸಹಕಾರ ಕೋರಿ ಶಾಲೆ ನಡೆಸಬೇಕು. ಸಾಮಾಜಿಕ ಜಾಲತಾಣದ ಮೂಲಕ ಅಹಿತಕರ ಸಂದೇಶ ಹರಡದಂತೆ ತಡೆಯಬೇಕು. ಎಲ್ಲಾ ಜನರ ವಿಶ್ವಾಸ ತೆಗೆದುಕೊಂಡು, ‌ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಬೇಕು. ಸಮಾಜಘಾತುಕ ಶಕ್ತಿ ವಿರುದ್ಧ ಕ್ರಮ ಕೈಗೊಡಿರುವ ಬಗ್ಗೆ ಕೂಡಲೇ ಮೇಲಧಿಕಾರಿಗಳಿಗೆ ಸಂದೇಶ ರವಾನಿಸಬೇಕು. ಮಾಧ್ಯಮಗಳು ವಿಶೇಷವಾಗಿ ವಸ್ತು ಸ್ಥಿತಿ ಮಾತ್ರ ಪ್ರಸಾರ ಮಾಡಬೇಕು. ನಿನ್ನೆ ವರೆಗೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೆ ಹಳೆಯ ಘಟನೆಯನ್ನೇ ತೋರಿಸುವ ಕೆಲಸ ನಡೆದಿದೆ. ಯಾವುದೇ ಘಟನೆ ನಡೆದಿಲ್ಲ ಅನ್ನುವುದನ್ನ ಮಾತ್ರ ಪ್ರಸಾರ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. 

ಮಂಡ್ಯ ಹುಡುಗಿಗೆ ಗಿಫ್ಟ್ ಬರುತ್ತಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ನಾವು ಎಲ್ಲವನ್ನೂ ಗಮನಿಸುತ್ತಿದ್ದೇವೆ. ಮಂಡ್ಯ ಬಾಲಕಿಯ ಪೋಷಕರು PFI ಸಂಘಟನೆಯಲ್ಲಿರುವ ಬಗ್ಗೆಯೂ ತಿಳಿದಿದೆ. ಮಂಡ್ಯದ ಹುಡುಗಿ ಮಾತ್ರವಲ್ಲ, ಬೇರೆ ಬೇರೆ ಮಕ್ಕಳ ಪೋಷಕರು ಮತೀಯ ಸಂಘಟನೆಯಲ್ಲಿದ್ದಾರೆ. ಅದೆಲ್ಲವನ್ನು ಗಮನಿಸುತ್ತಿದ್ದೇವೆ. ತನಿಖೆ ಕೂಡ ನಡೆಯುತ್ತಿದೆ ಎಂದು ಸೂಚ್ಯವಾಗಿ ಹೇಳಿದರು.

Hijab Row Karnataka CM Bommai orders for an additional police force near schools and colleges to avoid disturbance. People gathering near schools and colleges supporting students to wear kesari shawls and Hijab will not be left they will be arrested he said. Following Karnataka HC’s interim order restraining students from wearing hijab, saffron shawls within classrooms, the police on Friday staged a route march in Udupi. The parents of six Muslim girl students, who are protesting for their right to wear hijab at the pre-university college in Udupi, meanwhile lodged a complaint with the police that the personal details of their children are being shared by some people on social media.