ದ್ವಿತೀಯ PUC 2022 ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

12-02-22 10:23 pm       HK Desk news   ಕರ್ನಾಟಕ

Karnataka 2nd PUC Time Table 2022 : ಎಪ್ರಿಲ್/ಮೇ ತಿಂಗಳಿನಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು, ಫೆ 12 : Karnataka 2nd PUC Time Table 2022 : ಎಪ್ರಿಲ್/ಮೇ ತಿಂಗಳಿನಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

ದಿನಾಂಕ 08-02-2022 ರಂದು 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆದರೆ ದಿನಾಂಕ 21-4-2022ರಂದು ನಡೆಯಬೇಕಿದ್ದ ಭಾಷಾ ವಿಷಯಗಳಲ್ಲಿ ಉರ್ದು ಮತ್ತು ಅರೇಬಿಕ್ ವಿಷಯಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿದ್ದು, ಒಂದೇ ವೇಳೆಯಲ್ಲಿ ಒಂದೇ ದಿನ ಎರಡು ವಿಷಯಗಳನ್ನು ಬರೆಯಲು ಸಾಧ್ಯವಾಗುವುದಿಲ್ಲವಾದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅರೇಬಿಕ್ ವಿಷಯದ ಪರೀಕ್ಷೆಯನ್ನು ಮಾತ್ರ ದಿನಾಂಕ 29-04-2022ಕ್ಕೆ ನಿಗದಿಪಡಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.

ಪರಿಷ್ಕೃತ ವೇಳಾಪಟ್ಟಿ ಹೀಗಿದೆ

  • ಎಪ್ರಿಲ್ 16, 2022 ಗಣಿತ, ಶಿಕ್ಷಣ, ಬೇಸಿಕ್ ಗಣಿತ,
  • ಎಪ್ರಿಲ್ 18, 2022 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
  • ಎಪ್ರಿಲ್ 19, 2022 ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್
  • ಎಪ್ರಿಲ್ 20, 2022 ಇತಿಹಾಸ ಮತ್ತು ಭೌತಶಾಸ್ತ್ರ,
  • ಎಪ್ರಿಲ್ 21, 2022 ತಮಿಳು, ಮರಾಠಿ, ತೆಲಗು, ಮಲಯಾಳಮ್ ಉರ್ದು, ಸಂಸ್ಕೃತ, ಫ್ರೆಂಚ್,
  • ಎಪ್ರಿಲ್ 22, 2022 ಲಾಜಿಕ್, ಬಿಜಿನೆಸ್ ಸ್ಟಡೀಸ್,
  • ಎಪ್ರಿಲ್ 23, 2022 ಕರ್ನಾಟಿಕ್ ಸಂಗೀತ, ಹಿಂದೂಸ್ತಾನಿ ಸಂಗೀತ, ಸೈಕಾಲಜಿ, ರಸಾಯನಶಾಸ್ತ್ರ,
  • ಎಪ್ರಿಲ್ 25, 2022 ಅರ್ಥಶಾಸ್ತ್ರ,
  • ಎಪ್ರಿಲ್ 26, 2022 ಹಿಂದಿ,
  • ಎಪ್ರಿಲ್ 28, 2022 ಕನ್ನಡ
  • ಎಪ್ರಿಲ್ 29, 2022 ಅರೇಬಿಕ್
  • ಎಪ್ರಿಲ್ 30, 2022 ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್,
  • ಮೇ 02, 2022 ಭೂಗೋಳ ಶಾಸ್ತ್ರ, ಜೀವಶಾಸ್ತ್ರ,
  • ಮೇ 04, 2022 ಇಂಗ್ಲಿಷ್,
  • ಮೇ 06, 2022 ಲೆಕ್ಕ ಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ, ಕನ್ನಡ (ಐಚ್ಛಿಕ).

Revised Final Time Table For 2nd Puc Karnataka Annual Exam 2022 Released.