ಬ್ರೇಕಿಂಗ್ ನ್ಯೂಸ್
13-02-22 03:30 pm Bengaluru Correspondent ಕರ್ನಾಟಕ
ಬೆಂಗಳೂರು, ಫೆ.13 : ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಬಯಲಿಗೆಳೆದು ರಾಜ್ಯದಲ್ಲಿ ಭಾರೀ ಸುದ್ದಿಯಾಗಿದ್ದ ಖ್ಯಾತ ವಕೀಲ ಜಗದೀಶ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಮುನ್ನಲೆಗೆ ಬಂದಿದ್ದ ವಕೀಲ ಜಗದೀಶ್, ಬಳಿಕ ರವಿ ಚನ್ನಣ್ಣವರ್ ಪ್ರಕರಣದಲ್ಲಿ ಭಾರೀ ಸುದ್ದಿಯಾಗಿದ್ದರು. ಎರಡು ದಿನಗಳ ಹಿಂದೆ ಅಧಿಕಾರಿ ವಿರುದ್ಧ ಬೆಂಗಳೂರು ಕೋರ್ಟಿಗೆ ದಾಖಲೆ ಪತ್ರಗಳನ್ನು ಸಲ್ಲಿಸಲು ಬಂದಿದ್ದ ಜಗದೀಶ್ ಮತ್ತು ಅವರ ಮಗನ ಮೇಲೆ ಕೋರ್ಟ್ ಆವರಣದಲ್ಲಿಯೇ ಹಲ್ಲೆ ನಡೆಸಲಾಗಿತ್ತು. ಕೋರ್ಟ್ ಆವರಣದಲ್ಲಿ ವಕೀಲರ ಎರಡು ತಂಡಗಳು ಸೇರಿಕೊಂಡು ಪರಸ್ಪರ ಗಲಾಟೆ, ಜಗಳ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು. ಜಗದೀಶ್ ಪುತ್ರನ ಮೇಲೆ ತೀವ್ರ ಹಲ್ಲೆ ನಡೆಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಘಟನೆಯಿಂದ ತೀವ್ರ ಆಕ್ರೋಶಿತರಾಗಿದ್ದ ಜಗದೀಶ್ ಫೇಸ್ಬುಕ್ ಲೈವ್ ಬಂದು ಪೊಲೀಸರು ಮತ್ತು ಕೆಲವು ವಕೀಲರ ವಿರುದ್ಧ ಕಿಡಿಕಾರಿದ್ದರು. ವಕೀಲರೇ ತನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ, ಇವರನ್ನು ಯಾರನ್ನೂ ಬಿಡಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ಜಗದೀಶ್ ಫೇಸ್ಬುಕ್ ಲೈವ್ ಮಾಡಿದ್ದು ಭಾರೀ ವೈರಲ್ ಆಗಿದ್ದಲ್ಲದೆ, ಭಾರೀ ಸಂಖ್ಯೆಯಲ್ಲಿ ಜನರು ಬೆಂಬಲ ನೀಡಿದ್ದರು. ನನ್ನ ಮಗನಿಗೆ ಏನಾದ್ರೂ ಆದಲ್ಲಿ ಯಾರನ್ನೂ ಬಿಡಲ್ಲ. ಬೆಂಗಳೂರು ಕಮಿಷನರ್ ಕಮಲ್ ಪಂತ್, ಡಿಜಿಪಿ ಪ್ರವೀಣ್ ಸೂದ್ ನಿರ್ಲಕ್ಷ್ಯ ಕಾರಣ. ಇದಕ್ಕೆಲ್ಲ ಅವರೇ ಹೊಣೆ. ಎಲ್ಲರನ್ನೂ ಜೈಲಿಗೆ ಹಾಕಿಸ್ತೇನೆ ಎಂದು ಕಿಡಿಕಾರಿದ್ದರು.
ಆದರೆ ಇದನ್ನೇ ನೆಪ ಮಾಡಿಕೊಂಡ ಬೆಂಗಳೂರಿನ ಬಾರ್ ಕೌನ್ಸಿಲ್ ಅಧ್ಯಕ್ಷ ವಿವೇಕ್ ರೆಡ್ಡಿ ಮತ್ತಿತರ ವಕೀಲರು ಸೇರಿಕೊಂಡು ಜಗದೀಶ್ ವಿರುದ್ಧವೇ ಪೊಲೀಸ್ ದೂರು ನೀಡಿದ್ದರು. ಜಗದೀಶ್ ಗುಂಪು ಕಟ್ಟಿಕೊಂಡು ಬಂದು ವಕೀಲರ ಕೊಲೆಗೆ ಯತ್ನಿಸಿದ್ದಾರೆ. ಕೋರ್ಟ್ ಆವರಣದ ಒಳನುಗ್ಗಿ ದಾಂಧಲೆ ಮಾಡಿದ್ದಾರೆ ಎಂದು ಆರೋಪಿಸಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಮೊದಲೇ ದೂರು ನೀಡಿದ್ದ ವಕೀಲ ಜಗದೀಶ್
ಇದಕ್ಕೂ ಮೊದಲೇ ವಕೀಲ ಜಗದೀಶ್, ಹಲ್ಲೆ ಪ್ರಕರಣದ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದರು. ಭ್ರಷ್ಟಾಚಾರ ಪ್ರಕರಣ ಸಂಬಂಧ ಶುಕ್ರವಾರ ಬೆಳಗ್ಗೆ ಸಿಟಿ ಸಿವಿಲ್ ಕೋರ್ಟ್‌ಗೆ ದಾಖಲೆ ಸಲ್ಲಿಸಲು ಹೋಗಿದ್ದಾಗ ನನ್ನ ಮತ್ತು ಪುತ್ರನ ಮೇಲೆ ಕೆಲವರು ಸೇರಿ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದರು. ಆದರೆ ಆ ದೂರಿನ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುವ ಮೊದಲೇ ಶನಿವಾರ ವಕೀಲರ ಸಂಘದಿಂದ ಜಗದೀಶ್ ವಿರುದ್ಧವೇ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿತ್ತು.
ಕಮಿಷನರ್ ಸೂಚನೆಯಂತೆ ವಕೀಲ ಜಗದೀಶ್ ಬಂಧನ
ತನ್ನ ಮಾನ ಹರಾಜು ಹಾಕುವ ರೀತಿ ಮಾತನಾಡಿದ್ದ ಜಗದೀಶ್ ಬಗ್ಗೆ ಸಿಟ್ಟಾಗಿದ್ದ ಪೊಲೀಸ್ ಕಮಿಷನರ್ ಕಮಲ್ ಪಂತ್, ಬಾರ್ ಕೌನ್ಸಿಲ್ ಕಡೆಯಿಂದ ದೂರು ಲಭಿಸಿದ ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು. ಕಮಿಷನರ್ ಸೂಚನೆಯಂತೆ ಹಲಸೂರು ಗೇಟ್ ಠಾಣೆ ಪೊಲೀಸರು ವಕೀಲ ಜಗದೀಶ್ ಅವರನ್ನು ಬಂಧಿಸಿದ್ದಾರೆ. ಜಗದೀಶ್ ಮನೆಗೆ ಬಂದು, ಕಾನೂನು ನಿಮಗೆ ಮಾತ್ರ ಗೊತ್ತಿರೋದಾ ಎಂದು ಪೊಲೀಸರು ಆವಾಜ್ ಹಾಕುತ್ತಾ ಜಗದೀಶ್ ಅವರನ್ನು ಎಳೆದೊಯ್ದಿದ್ದಾರೆ. ಈ ವೇಳೆಯೂ ಜಗದೀಶ್ ಫೇಸ್ಬುಕ್ ಲೈವ್ ಮಾಡಲು ಯತ್ನಿಸಿದ್ದು ಪೊಲೀಸರು ಮೊಬೈಲ್ ಕಿತ್ತುಕೊಂಡಿದ್ದಾರೆ. ಆಬಳಿಕ ಕೋರಮಂಗಲದಲ್ಲಿ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಭ್ರಷ್ಟಾಚಾರ ವಿರುದ್ಧ ಹೋರಾಡಿದ್ದ ಜಗದೀಶ್ ವಿರುದ್ದ ಎಫ್ಐಆರ್
ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ವಕೀಲ ಜಗದೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 307,143,153a,120b, 323, 504, 506,149 ಅಡಿ ಪ್ರಕರಣ ದಾಖಲಾಗಿದೆ. ಹಲಸೂರು ಗೇಟ್ ಠಾಣೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಪುತ್ರನ ಮೇಲೆ ಪ್ರತ್ಯೇಕ ಎಫ್ಐಆರ್
ವಕೀಲ ಜಗದೀಶ್ ಪುತ್ರ ಆರ್ಯ ಗೌಡ ಮೇಲೆ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ. ಕೊಡಿಗೇಹಳ್ಳಿ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಎಂಬವರು ದೂರು ದಾಖಲಿಸಿದ್ದರು. ಕಾಲೇಜೊಂದರ ಬಳಿ ಹೋಗಿದ್ದಾಗ ಹಲ್ಲೆಗೈದು ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಪುನೀತ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರ್ಯಗೌಡ ಮೇಲೆ ಐಪಿಸಿ ಸೆಕ್ಷನ್ 323, 504 ಹಾಗೂ 506 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಮಲ್ ಪಂತ್, ಡಿಜಿ ಪ್ರವೀಣ್ ಸೂದ್ ವಿರುದ್ಧ ಕಿಡಿ!
ತನಗೆ ಮತ್ತು ಪುತ್ರನ ಮೇಲೆ ಹಲ್ಲೆಯಾದ ಬಳಿಕ ಫೇಸ್ಬುಕ್ ಲೈವ್ ಬಂದಿದ್ದ ವಕೀಲ ಜಗದೀಶ್, ಪೊಲೀಸರ ವಿರುದ್ಧ ತೀವ್ರ ಕಿಡಿ ನುಡಿಗಳನ್ನಾಡಿದ್ದರು. ಕಮಲ್ ಪಂತ್, ಪ್ರವೀಣ್ ಸೂದ್ ರಾಜೀನಾಮೆ ತೆಗೆದುಕೊಂಡು ಮನೆಗೆ ಹೋಗ್ರಯ್ಯಾ. ಕಮಲ್ ಪಂತ್, ಪ್ರವೀಣ್ ಸೂದ್ ಜೈಲಲ್ಲಿ ಇರ್ತಿಯಾ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ನೀವೆಲ್ಲಾ ಯೂನಿಫಾರಂ ಹಾಕೊಂಡಿರುವ ಗೂಂಡಾಗಳು. ಮಗನಿಗೆ ಏನಾದರೂ ಆದರೆ ನಿಮಗೆ ನೇಣು ಹಾಕಿಸಿಲ್ಲ ಅಂದರೆ ನಾನು ಜಗದೀಶ್ ಅಲ್ಲ ಎಂದು ಹೇಳಿದ್ದರು. 40 ಜನಗಳ ಮೇಲೆ ಅಟ್ಯಾಕ್ ಆಗಿದೆ. ರೌಡಿ ಥರ ವರ್ತಿಸಿದ್ದಾರೆ. ಎಲ್ಲದರ ಫೂಟೇಜ್ ನನ್ನ ಬಳಿ ಇದೆ ಎಂದು ಹೇಳಿ ವಕೀಲ ಜಗದೀಶ್ ಆವಾಜ್ ಹಾಕಿದ್ದರು.
ಕಮಿಷನರ್, ಡಿಜಿ ಮೇಲೆ ಆರೋಪ ಮಾಡಿದ್ದೇ ಮುಳುವಾಯ್ತಾ ?
ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ್ ವಿರುದ್ಧ ಗಂಭೀರ ಆರೋಪ ಕೇಳಿಬಂದರೂ, ಡಿಜಿಪಿ ನಿರ್ಲಕ್ಷ್ಯ ವಹಿಸಿದ್ದು , ಗೃಹ ಸಚಿವರು ತನಿಖೆ ಮಾಡಿಸ್ತೇನೆ ಎಂದರೂ ಸಸ್ಪೆಂಡ್ ಮಾಡದೇ ಇರುವುದು ವಕೀಲ ಜಗದೀಶ್ ಆಕ್ರೋಶಕ್ಕೆ ಕಾರಣವಾಗಿತ್ತು. ದಿನವೂ ಫೇಸ್ಬುಕ್ ಲೈವ್ ನಲ್ಲಿ ಪೊಲೀಸರು, ವಕೀಲರು, ಆಡಳಿತ ವ್ಯವಸ್ಥೆಯ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದರು. ವಕೀಲರೊಬ್ಬರು ಈ ಪರಿ ತಿರುಗಿ ಬಿದ್ದಿದ್ದು ಇಡೀ ವ್ಯವಸ್ಥೆಯನ್ನೇ ಅಣಕಿಸುವಂತೆ ಮಾಡಿತ್ತು. ಅಲ್ಲದೆ, ತೀವ್ರ ಮುಜುಗರಕ್ಕೂ ಕಾರಣವಾಗಿತ್ತು. ಇವೆಲ್ಲ ನೆಪಕ್ಕೋ ಎನ್ನುವಂತೆ ಇದೀಗ ಬಾರ್ ಕೌನ್ಸಿಲ್ ಮೂಲಕವೇ ದೂರು ಪಡೆದುಕೊಂಡು ಬಂಧಿಸುವ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ.
Bangalore Popular Lawyer on Facebook Jagadish arrested for misbehaving in court premises after advocates file complaint to Police station. Jagadish had constantly alleged IPS officer Ravi D. Channannavar of corruption. Tension gripped the City Civil Court on Friday afternoon when a group of people allegedly assaulted the son of advocate Jagadish. Halasuru Gate police are yet to file a case in connection with the attack. Jagadish along with his son and colleagues had come to file a petition before the magistrate over alleged land grabbing by IPS officer Ravi D Chennanavar.
19-07-25 03:05 pm
Bangalore Correspondent
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
19-07-25 07:18 pm
Mangalore Correspondent
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
Dharmasthala Case, Santosh Kumar, CPIM: ಧರ್ಮಸ...
19-07-25 06:14 pm
Yakshagana Pataala Venkataramana Bhat: ಯಕ್ಷಗಾ...
19-07-25 02:32 pm
Thokottu, Mangalore: ತೊಕ್ಕೊಟ್ಟು ನಾಗರಿಕರ ಎಪ್ಪತ...
18-07-25 10:11 pm
19-07-25 09:25 pm
Mangalore Correspondent
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am