ನಾಳೆಯಿಂದಲೇ ಪಿಯು, ಡಿಗ್ರಿ, ಇಂಜಿನಿಯರಿಂಗ್ ಕಾಲೇಜು ಆರಂಭ ; ಸಚಿವ ನಾಗೇಶ್ 

15-02-22 11:39 am       Bengaluru Correspondent   ಕರ್ನಾಟಕ

ಸೋಮವಾರದಿಂದ ಪ್ರೌಢಶಾಲೆಗಳು ಶಾಂತಿಯುತವಾಗಿ ಆರಂಭಗೊಂಡ ಹಿನ್ನೆಲೆಯಲ್ಲಿ ಫೆ.16 ರಿಂದಲೇ ಪಿಯು, ಡಿಗ್ರಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನೂ ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. 

ಬೆಂಗಳೂರು, ಫೆ.15 : ಸೋಮವಾರದಿಂದ ಪ್ರೌಢಶಾಲೆಗಳು ಶಾಂತಿಯುತವಾಗಿ ಆರಂಭಗೊಂಡ ಹಿನ್ನೆಲೆಯಲ್ಲಿ ಫೆ.16 ರಿಂದಲೇ ಪಿಯು, ಡಿಗ್ರಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನೂ ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. 

ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸೋಮವಾರ ಸಂಜೆ ಸಭೆ ಬಳಿಕ ಶಿಕ್ಷಣ ಸಚಿವ ನಾಗೇಶ್​ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೋಷಕರು ಶಿಕ್ಷಣ ಮುಂದುವರಿಸಬೇಕು ಎಂದು ಹೇಳುತ್ತಿದ್ದಾರೆ. ಶಾಲೆ, ಕಾಲೇಜಿನ ಶೈಕ್ಷಣಿಕ ವರ್ಷ ಕೊನೆಯಾಗುತ್ತಿದ್ದು ವಿದ್ಯಾರ್ಥಿಗಳು ಪರೀಕ್ಷೆ ತಯಾರಿಯಲ್ಲಿ ತೊಡಗಿದ್ದಾರೆ. ಈ ಹಂತದಲ್ಲಿ ಜಗಳ ಕಾಯುವುದು ಸರಿಯಲ್ಲ. ಆದರೆ ಹೈಕೋರ್ಟ್​ ಆದೇಶ ಉಲ್ಲಂಘಿಸುವಂತಿಲ್ಲ, ಆದೇಶವನ್ನು ಯಥಾವತ್ ಪಾಲಿಸಬೇಕು.

ಜ.16ರ ವರೆಗೆ ರಜೆ ನೀಡಲಾಗಿತ್ತು. ಈಗ ಅದನ್ನು ರದ್ದುಗೊಳಿಸಿ ಅದೇ ದಿನ ಕಾಲೇಜು ಆರಂಭಿಸಲಾಗುವುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗುವುದು ಎಂದು ಹೇಳಿದರು. 

ಹಿಜಾಬ್ ವಿವಾದ ಘಟನೆ ಸಂಬಂಧ ಮಾಹಿತಿ ಕಲೆ ಹಾಕಲಾಗುತ್ತಿದೆ. ಯಾರಿದ್ದಾರೆ, ಏನು ಉದ್ದೇಶ ಅನ್ನುವುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ.‌ ಈಗ ವಿಚಾರ ಕೋರ್ಟಿನಲ್ಲಿದೆ, ಆದೇಶ ಶೀಘ್ರದಲ್ಲೇ ಬರಲಿದೆ ಎಂದು ಸಭೆಯ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

The Karnataka government on Monday evening said that all pre-university and degree colleges will resume offline classes from Wednesday after forcing them to shut to contain the growing clashes between students over the Hijab row.