ಪೊಲೀಸರ ಮೇಲಿನ ಸಿಟ್ಟು ; ಟ್ರಾಫಿಕ್ ಸಿಗ್ನಲ್ ಕಂಬದ ಬ್ಯಾಟರಿಗಳನ್ನೇ ಕಿತ್ತು ಸೇಡು ತೀರಿಸಿಕೊಳ್ತಿದ್ದ ದಂಪತಿ ! 230 ಬ್ಯಾಟರಿ ವಶಕ್ಕೆ 

15-02-22 11:24 pm       Bengaluru Correspondent   ಕರ್ನಾಟಕ

ಪೊಲೀಸರಿಗೆ ಮೇಲಿನ ಸಿಟ್ಟಿನಲ್ಲಿ ಟ್ರಾಫಿಕ್ ಸಿಗ್ನಲ್ ಕಂಬದ ಬ್ಯಾಟರಿಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ದಂಪತಿಯನ್ನು ಅಶೋಕ ನಗರದ ಪೊಲೀಸರು ಬಂಧಿಸಿದ್ದಾರೆ. ದಂಪತಿಯನ್ನು ಸಿಕಂದರ್ ಮತ್ತು ನಜ್ಮಾ ಎಂದು ಗುರುತಿಸಲಾಗಿದೆ.

ಬೆಂಗಳೂರು, ಫೆ.15 : ಪೊಲೀಸರಿಗೆ ಮೇಲಿನ ಸಿಟ್ಟಿನಲ್ಲಿ ಟ್ರಾಫಿಕ್ ಸಿಗ್ನಲ್ ಕಂಬದ ಬ್ಯಾಟರಿಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ದಂಪತಿಯನ್ನು ಅಶೋಕ ನಗರದ ಪೊಲೀಸರು ಬಂಧಿಸಿದ್ದಾರೆ. ದಂಪತಿಯನ್ನು ಸಿಕಂದರ್ ಮತ್ತು ನಜ್ಮಾ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಬರೋಬ್ಬರಿ 20 ಲಕ್ಷ ಮೌಲ್ಯದ ಸುಮಾರು 230 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಾಕ್ ಡೌನ್ ವೇಳೆ ತಮ್ಮ ಟೀ ಅಂಗಡಿಯಲ್ಲಿದ್ದ ವಸ್ತುಗಳನ್ನ ಪೊಲೀಸರು ದಾಳಿ ನೆಪದಲ್ಲಿ ನಾಶಪಡಿಸಿದ್ದರು ಎಂಬ ಸಿಟ್ಟಿನಲ್ಲಿ ಪೊಲೀಸರಿಗೆ ಬುದ್ಧಿ ಕಲಿಸಲು ನಿರ್ಧರಿಸಿದ್ದ ದಂಪತಿ ನಗರದ ಸಿಗ್ನಲ್ ಗಳಲ್ಲಿನ ಬ್ಯಾಟರಿಗಳ ಕಳ್ಳತನಕ್ಕೆ ಇಳಿದಿದ್ದರು. 

ಗಂಡ - ಹೆಂಡತಿ‌ ಸೇರಿಕೊಂಡು ಬೆಳಗಿನ ಜಾವ 3 ಗಂಟೆಯಿಂದ 5 ಗಂಟೆಯೊಳಗೆ ಕಳ್ಳತನ ಮಾಡುತ್ತಿದ್ದರು. ತಮ್ಮ ಟಿವಿಎಸ್ ಎನ್ ಟಾರ್ಕ್ ಬೈಕ್ ನಲ್ಲಿ ಒಂದು ಕಟರ್ ಸಹಿತ ಸ್ಥಳಕ್ಕೆ ಬಂದು‌ ಟ್ರಾಫಿಕ್ ಸಿಗ್ನಲ್ ಕಂಬದಲ್ಲಿ ವೈರ್ ಕಟ್ ಮಾಡಿ ಸುಲಭವಾಗಿ ಬ್ಯಾಟರಿ ಎತ್ತಿಕೊಂಡು ಪರಾರಿಯಾಗುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿಗಳನ್ನ ಹೆಡೆಮುರಿ ಕಟ್ಟಲು ವಿಶೇಷ ಕಾರ್ಯಾಚರಣೆ ನಡೆಸಿ‌ದ ಅಶೋಕನಗರ ಪೊಲೀಸ್ ಠಾಣೆಯ ಎಎಸ್‌ಐ ದೇವರಾಜ್ ಮತ್ತು ಇನ್ಸ್​​​​​​ಪೆಕ್ಟರ್​​ ಮಲ್ಲೇಶ್ ಬೊಳೆತ್ತಿನ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕದ್ದ 7 ಸಾವಿರ ಬೆಲೆಯ ಬ್ಯಾಟರಿಗಳನ್ನ ಕೇವಲ 1 ಸಾವಿರಕ್ಕೆ‌ ಮಾರಾಟ‌ ಮಾಡುತ್ತಿದ್ದರು. ಇದೇ ಸುಳಿವು ಆಧರಿಸಿ ತನಿಖೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ.

The police on Wednesday said that a couple have been arrested for stealing batteries from traffic signals. They added that 230 batteries stolen from 68 traffic junctions over the last few months have also been recovered. These batteries are used to run traffic signals.