ಹಿಜಾಬ್ ಗಲಾಟೆ ಹಿಂದೆ ಮತಾಂಧ ಶಕ್ತಿಗಳಿವೆ, ಅಂಥ ಸಂಘಟನೆಗಳನ್ನು ನಿರ್ಜೀವ ಮಾಡ್ತೀವಿ ; ಗೃಹ ಸಚಿವ 

19-02-22 11:55 am       HK Desk news   ಕರ್ನಾಟಕ

ಕೆಲವು ಕಾಲೇಜುಗಳಲ್ಲಿ ಹಿಜಾಬ್ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಲಾಗ್ತಿದೆ.‌ ಗೊಂದಲ ಸೃಷ್ಟಿಸುವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ.‌ ಅತಿರೇಕಕ್ಕೆ ಹೋದರೇ ಕೈಕಟ್ಟಿ ಕೂಡಲು ಆಗಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ‌

ಕಲಬುರ್ಗಿ, ಫೆ.19 : ಕೆಲವು ಕಾಲೇಜುಗಳಲ್ಲಿ ಹಿಜಾಬ್ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಲಾಗ್ತಿದೆ.‌ ಗೊಂದಲ ಸೃಷ್ಟಿಸುವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ.‌ ಅತಿರೇಕಕ್ಕೆ ಹೋದರೇ ಕೈಕಟ್ಟಿ ಕೂಡಲು ಆಗಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ‌

ಶಾಲೆ, ಕಾಲೇಜು ಮುಂದೆ ಗಲಾಟೆ ಮಾಡಿಕೊಂಡಿದ್ದರೆ ಅದನ್ನು ಕಣ್ಣಿನಿಂದ ನೋಡಿಕೊಂಡು ಸುಮ್ಮನಿರಲು ಸಾಧ್ಯ ಇಲ್ಲ. ಇದರ ಹಿಂದೆ ಮತಾಂಧ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿವೆ.‌ ಮತಾಂಧರ ಶಕ್ತಿಗಳು ಮಕ್ಕಳಲ್ಲಿ ವಿಷಬೀಜ ಬಿತ್ತುತ್ತಿವೆ. ವಿವಾದ ಸೃಷ್ಟಿಸುವ ಸಂಘಟನೆಗಳನ್ನ ನಿರ್ಜೀವ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. 

ಅಲ್ಪಸಂಖ್ಯಾತ ಶಾಸಕರ ಮನವಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕೆಲವು ಶಾಸಕರು ಭೇಟಿಯಾಗಿ ಮನವಿ ಪತ್ರ ಕೊಟ್ಟಿದ್ದಾರೆ. ಆದರೆ ಸಮಾಜದಿಂದ ಈಗಿರುವ ಸ್ಥಿತಿಯನ್ನ ಹೊರತರಬೇಕಾಗಿದೆ. ಶಾಲೆಯಲ್ಲಿ ಸಮವಸ್ತ್ರ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ. ಸಮವಸ್ತ್ರ ಅಂದರೆ ಅದು ಸಮಾನತೆ, ಸಂಸ್ಕಾರ ತುಂಬುವ ಕೆಲಸ ಆಗಬೇಕು. ಮತ್ತೊಮ್ಮೆ ನಮ್ಮ ಧರ್ಮ, ಜಾತಿ ಒಂದೇ ಅಂತಾ ತೋರಿಸಬೇಕು.‌ ಕೋರ್ಟ್ ಆದೇಶದ ಪ್ರಕಾರ ನಡೆದುಕೊಳ್ಳಬೇಕು ಎಂದರು.

Muslim organisation behind bed-blocking racket: K S Eshwarappa | Deccan  Herald

ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರದ ಬಗ್ಗೆ ಹೇಳಿದ ಅವರು, ಈಶ್ವರಪ್ಪ ಯಾವ ಶಬ್ದ ಹೇಳಿದಾರೆ ಅನ್ನೊದು ಪೂರ್ತಿ ಪ್ರಸಾರ ಮಾಡಬೇಕು. ಈಶ್ವರಪ್ಪ ಹೇಳಿದ್ರಲ್ಲಿ ತಪ್ಪು ಇಲ್ಲ, ತಪ್ಪಾಗಿ ಅಥೈಸಿಕೊಳ್ಳಲಾಗ್ತಿದೆ.‌ ರಾಷ್ಟ್ರ ಧ್ವಜ ಇಳಿಸಿ ಎಬಿವಿಪಿ ಧ್ವಜ ಏರಿಸಲಾಗಿದೆ ಅಂತಾ ಹೇಳಿರುವುದು ಸುಳ್ಳು‌. ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಈಶ್ವರಪ್ಪ ಹೇಳಿಲ್ಲ. ಮಾಧ್ಯಮಗಳ ಪ್ರಶ್ನೆಗೆ ಈಶ್ವರಪ್ಪ, ಮುಂದೊಂದು ದಿನ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಸಂದರ್ಭ ಬರಬಹುದು ಅಂದಿದ್ದಾರೆ ಅಷ್ಟೆ. ಮುಳುಗೋನಿಗೆ ಹುಲ್ಲು ಕಡ್ಡಿ ಆಧಾರ ಎಂಬಂತೆ ಕಾಂಗ್ರೆಸ್ ವರ್ತಿಸುತ್ತಿದೆ. ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋದನ್ನ ಬಿಟ್ಟು ಕಾಂಗ್ರೆಸ್ ಕಾಲಹರಣ ಮಾಡ್ತಿದೆ.‌ ಒಂದು ಸುಳ್ಳನ್ನ ನೂರು ಬಾರಿ ಹೇಳಿದ್ರು ಅದು ಸತ್ಯವಾಗಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಗೃಹ ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ‌

Behind Hijab row there are lot of communal organisations states Karnataka Home Minister.