ಬ್ರೇಕಿಂಗ್ ನ್ಯೂಸ್

Trump Vs Zelenskyy, Talk fight: ಶ್ವೇತ ಭವನದಲ್ಲಿ ಟ್ರಂಪ್ – ಉಕ್ರೇನ್ ಅಧ್ಯಕ್ಷರ ಟಾಕ್ ವಾರ್ ; ಜನರ ಜೀವದ ಜೊತೆ ಚೆಲ್ಲಾವಾಡುತ್ತಿದ್ದೀರಿ, 3ನೇ ಮಹಾಯುದ್ಧಕ್ಕೆ ಹಾತೊರೆಯುತ್ತಿದ್ದೀರಿ, ನಿಮಗೆ ಶಾಂತಿ ಬೇಕಿಲ್ಲ, ಅಮೆರಿಕ ನೆರವಿಲ್ಲದಿದ್ದರೆ ಎರಡೇ ವಾರಕ್ಕೆ ಯುದ್ಧ ಅಂತ್ಯ..!    |    Bike Robbery, Mangalore Police, Crime, TD Nagraj: ಜಾತ್ರೆ, ಕಂಬಳದಲ್ಲಿ ನಿಲ್ಲಿಸಿ ಹೋಗುತ್ತಿದ್ದ ಬೈಕ್ ಗಳೇ ಟಾರ್ಗೆಟ್ ; ಸ್ಪ್ಲೆಂಡರ್ ಕದ್ದು ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಪೊಲೀಸರು, ಮೂಡುಬಿದ್ರೆಯಲ್ಲಿ 20ಕ್ಕೂ ಹೆಚ್ಚು ಕದ್ದ ಬೈಕ್ ಪತ್ತೆ, ನಾಲ್ವರ ಸೆರೆ     |    Farangipete Protest, Diganth, Missing, Mangalore: ಪಿಯುಸಿ ವಿದ್ಯಾರ್ಥಿ ನಾಪತ್ತೆ ಪ್ರಕರಣ ; ಫರಂಗಿಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್, ಇನ್ನೆರಡು ದಿನದಲ್ಲಿ ಬಾಲಕ ಪತ್ತೆಯಾಗದಿದ್ದರೆ ತೀವ್ರ ಪ್ರತಿಭಟನೆ ಎಚ್ಚರಿಕೆ, ಪತ್ತೆಗೆ ಸರ್ವ ಪ್ರಯತ್ನ ಎಂದ ಎಸ್ಪಿ     |   

ಹಿಜಾಬ್‌ ಗಲಾಟೆ ;  ಶಿವಮೊಗ್ಗದಲ್ಲಿ 58 ವಿದ್ಯಾರ್ಥಿನಿಯರು ಕಾಲೇಜಿನಿಂದ ಅಮಾನತು ! ಹೈಕೋರ್ಟ್ ಆದೇಶ ಉಲ್ಲಂಘಿಸಿದ್ದಕ್ಕೆ ಶಿಕ್ಷೆ 

19-02-22 01:15 pm       HK Desk news   ಕರ್ನಾಟಕ

ಹಿಜಾಬ್ ಕುರಿತ ಹೈಕೋರ್ಟ್ ಆದೇಶ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಶಿವಮೊಗ್ಗ ನಗರದಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಯ ಪ್ರಥಮ ಮತ್ತು ದ್ವಿತೀಯ ಪಿಯುಸಿಯ 58 ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದೆ.

ಶಿವಮೊಗ್ಗ, ಫೆ.19 : ಹಿಜಾಬ್ ಕುರಿತ ಹೈಕೋರ್ಟ್ ಆದೇಶ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಶಿವಮೊಗ್ಗ ನಗರದಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಯ ಪ್ರಥಮ ಮತ್ತು ದ್ವಿತೀಯ ಪಿಯುಸಿಯ 58 ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದೆ.

ರಾಜ್ಯ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶ ಧಿಕ್ಕರಿಸಿ, ತಾಲೂಕು ದಂಡಾಧಿಕಾರಿ ವಿಧಿಸಿರುವ ನಿರ್ಬಂಧ ಆದೇಶ ಉಲ್ಲಂಘಿಸಿ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರನ್ನು ಮುಂದಿನ ಆದೇಶದ ವರೆಗೆ ಅಮಾನತಿನಲ್ಲಿರಿಸಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಕಾಲೇಜಿನ ಆವರಣದಲ್ಲಿ ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರು ಕುಳಿತು ಪ್ರತಿಭಟನೆ ಮಾಡುತ್ತ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳನ್ನು ಕೇಳಲು ಅಡ್ಡಿ ಪಡಿಸಿದ್ದಾರೆ. ಅಲ್ಲದೆ, ಮುಷ್ಕರ ನಿರತ ವಿದ್ಯಾರ್ಥಿನಿಯರು ಕಾಲೇಜಿನ ಆವರಣ ಪ್ರವೇಶಿಸಿ ಗುಂಪು ಕಟ್ಟಿಕೊಂಡು ಘೋಷಣೆಗಳನ್ನು ಕೂಗಿ, ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತ ಶೈಕ್ಷಣಿಕ ವಾತಾವರಣ ಕಲುಷಿತಗೊಳಿಸಿದ್ದಾರೆ. 

ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವರ್ತನೆಯಿಂದ ತಮ್ಮ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ ಎಂದು ಉಳಿದ ವಿದ್ಯಾರ್ಥಿಗಳು ಲಿಖಿತ ದೂರು ಸಲ್ಲಿಸಿದ್ದನ್ನು ಪ್ರಾಂಶುಪಾಲರು ಉಲ್ಲೇಖಿಸಿದ್ದಾರೆ.

ಶಾಂತಿ ಮತ್ತು ಸಮಾಧಾನದಿಂದ ವರ್ತಿಸಿ ಕಾಲೇಜಿನಲ್ಲಿ ಸುಗಮವಾಗಿ ಪಾಠ ಪ್ರವಚನ ನಡೆಸಲು ಅನುವು ಮಾಡಿಕೊಡುವಂತೆ ವಿನಂತಿಸಿದರೂ ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರು ಬೆಲೆ ಕೊಡಲಿಲ್ಲ ಎಂದು ಪ್ರಾಂಶುಪಾಲರು ವಿದ್ಯಾರ್ಥಿಗಳು ಹೇಳಿರುವ ವಿಡಿಯೊ ವೈರಲ್‌ ಆಗಿದೆ.

ಅಮಾನತುಗೊಂಡಿರುವ ವಿದ್ಯಾರ್ಥಿನಿಯರು ಅಮಾನತು ಅವಧಿಯಲ್ಲಿ ಕಾಲೇಜಿನ ಆವರಣ ಪ್ರವೇಶವನ್ನು ನಿರಾಕರಿಸಲಾಗಿದೆ. ಕಾಲೇಜಿನ ನಿಬಂಧನೆ ಹಾಗೂ ಕಾನೂನು ಗೌರವಿಸುವ ವಿದ್ಯಾರ್ಥಿನಿಯರು ತಮ್ಮ ಪೋಷಕರೊಂದಿಗೆ ಆಗಮಿಸಿ ವಿಧೇಯರಾಗಿ ನಡೆದುಕೊಳ್ಳುವುದಾಗಿ ಲಿಖಿತ ಕ್ಷಮಾಪಣೆ ಪತ್ರ ಸಲ್ಲಿಸಿದಲ್ಲಿ ಮಾತ್ರ ಅಮಾನತು ಆದೇಶ ಹಿಂಪಡೆಯಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

A controversy has erupted after reports of the suspension of 58 students of a Karnataka college for protesting against hijab restrictions in Shivamogga district surfaced online.