ಬ್ರೇಕಿಂಗ್ ನ್ಯೂಸ್
21-02-22 03:11 pm HK News Desk ಕರ್ನಾಟಕ
ಶಿವಮೊಗ್ಗ, ಫೆ.21: ಬಜರಂಗದಳ ಕಾರ್ಯಕರ್ತನ ಹತ್ಯೆ ಬೆನ್ನಲ್ಲೇ ಶಿವಮೊಗ್ಗ ನಗರ ಹೊತ್ತಿ ಉರಿದಿದೆ. ಕೊಲೆಯಾದ ಯುವಕನ ಶವವನ್ನು ಮೆರವಣಿಗೆ ಮೂಲಕ ಒಯ್ದಿದ್ದು, ಮೆರವಣಿಗೆಯ ಉದ್ದಕ್ಕೂ ಕಲ್ಲು ತೂರಾಟ, ಹಿಂಸಾಚಾರ ನಡೆದಿದೆ. ಕೆಲವು ಭಾಗಗಳಲ್ಲಿ ಪರಸ್ಪರ ಎರಡೂ ಗುಂಪುಗಳ ಮಧ್ಯೆ ಕಲ್ಲು ತೂರಾಟ ನಡೆದಿದ್ದು, ಸ್ಥಳದಲ್ಲಿದ್ದ ಪೊಲೀಸರು ಮೂಕಪ್ರೇಕ್ಷಕರಾಗಿದ್ದಾರೆ.
ಭಾರೀ ಸಂಖ್ಯೆಯಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಮೆರವಣಿಗೆಯಲ್ಲಿ ಸೇರಿದ್ದಾರೆ. ಇದರ ನಡುವಿನಿಂದ ಉದ್ರಿಕ್ತರು ಕಲ್ಲು ತೂರಾಟ ಮಾಡಿದ್ದಾರೆ. ಸೀಗೆಹಳ್ಳಿ, ಎನ್.ಕೆ. ರಸ್ತೆ, ಆಜಾದ್ ನಗರ, ಇಮಾಮ್ ಬಾಡಾ ಹೀಗೆ ನಗರದುದ್ದಕ್ಕೂ ಕಲ್ಲು ತೂರಾಟ ಆಗಿದೆ. ಮೆರವಣಿಗೆ ಸಾಗುತ್ತಾ ಹೋದಂತೆ ಅಂಗಡಿ, ವಾಣಿಜ್ಯ ಸಂಕೀರ್ಣಗಳ ಮೇಲೆ ಪೊಲೀಸರ ಮುಂದೆಯೇ ಯುವಕರು ಕಲ್ಲು ತೂರಿದ್ದಾರೆ. ಆಬಳಿಕ ಇಮಾಮ್ ಬಾಡಾ ಪ್ರದೇಶದಲ್ಲಿ ವಿರೋಧಿ ಗುಂಪಿನಿಂದಲೂ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಹೀಗಾಗಿ ಶಿವಮೊಗ್ಗ ನಗರದಲ್ಲಿ ಆತಂಕದ ವಾತಾವರಣ ಉಂಟಾಗಿದೆ. ಅಂಗಡಿ, ಮನೆಗಳು, ಬ್ಯಾಂಕುಗಳ ಮೇಲೂ ಕಲ್ಲು ತೂರಾಟ ಆಗಿದೆ. ಮೆರವಣಿಗೆಯಲ್ಲಿ ದೊಣ್ಣೆ, ಲಾಂಗು, ಮಚ್ಚಿನ ಪ್ರದರ್ಶನವೂ ನಡೆದಿತ್ತು. ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಈ ನಡುವೆ, ಸಚಿವ ಈಶ್ವರಪ್ಪ ಅವರು ಈ ಕೊಲೆ ಕೃತ್ಯದ ಹಿಂದೆ ಮುಸ್ಲಿಂ ಗೂಂಡಾಗಳಿದ್ದಾರೆ ಎಂದು ಹೇಳಿಕೆ ನೀಡಿರುವುದನ್ನು ಸ್ಥಳೀಯ ಮುಸ್ಲಿಮರು ಖಂಡಿಸಿದ್ದಾರೆ. ಎರಡೂ ಪಕ್ಷಗಳಲ್ಲಿ ಗೂಂಡಾಗಳಿದ್ದಾರೆ. ಮುಸ್ಲಿಂ ಗೂಂಡಾಗಳು ಎಂದಿದ್ದು ಹೇಗೆ.. ಈಶ್ವರಪ್ಪ ಒಬ್ಬ ಗೂಂಡಾ ಎಂದು ಮಾಧ್ಯಮಗಳಿಗೆ ಮುಸ್ಲಿಂ ಮಹಿಳೆಯರು ಹೇಳಿಕೆ ನೀಡಿದ್ದಾರೆ. ಇದೇ ವೇಳೆ, ಈಶ್ವರಪ್ಪ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದು ಉದ್ರಿಕ್ತರಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ, ಶಿವಮೊಗ್ಗ ನಗರಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಎಡಿಜಿಪಿ ಮುರುಗನ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕೊಲೆ ತನಿಖೆಗೆ ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದ್ದು, ಯಾವುದೇ ದುಷ್ಕರ್ಮಿಗಳನ್ನು ಹಾಗೇ ಬಿಡುವುದಿಲ್ಲ. ಆರೋಪಿಗಳ ಬಗ್ಗೆ ಮಾಹಿತಿಯಿದ್ದು ಬಂಧಿಸುತ್ತೇವೆ. ಆದರೆ ಜನರು ಶಾಂತಿ ಕಾಪಾಡಬೇಕು. ಗಲಭೆ ನಡೆಸಿ ನಿಮ್ಮ ನಗರಕ್ಕೆ ಬೆಂಕಿ ಹಚ್ಚಬೇಡಿ ಎಂದು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮೂವರು ಆರೋಪಿಗಳು ವಶಕ್ಕೆ
ಹರ್ಷ ಕೊಲೆ ಪ್ರಕರಣ ಸಂಬಂಧಿಸಿ ಬೆಂಗಳೂರಿನಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ನಗರದಲ್ಲಿ ಇಬ್ಬರನ್ನು ಬಂಧಿಸಿದ್ದು, ಆನಂತರ ಆರೋಪಿಗಳು ಬೆಂಗಳೂರಿಗೆ ಪರಾರಿಯಾಗಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಜೆಜೆ ನಗರದಲ್ಲಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಶವ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಹಲವು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ನಗರದಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಹರ್ಷ ಮೃತದೇಹ ಸೀಗೆಹಟ್ಟಿಯಲ್ಲಿರುವ ನಿವಾಸಕ್ಕೆ ಮಧ್ಯಾಹ್ನ 2 ಗಂಟೆ ವೇಳೆಗೆ ತಲುಪಿದೆ. ಈ ವೇಳೆ, ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು, ಹರ್ಷ ಪರ ಘೋಷಣೆ ಕೂಗುತ್ತಿದ್ದಾರೆ. ಉದ್ರಿಕ್ತ ಜನರನ್ನು ಹತೋಟಿಗೆ ತರಲು ಬಿಜೆಪಿ ನಾಯಕರು ಶ್ರಮಿಸುತ್ತಿದ್ದಾರೆ. ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ಸೇರಿದಂತೆ ಬಿಜೆಪಿ ನಾಯಕರು ಸ್ಥಳದಲ್ಲಿ ಸೇರಿದ್ದಾರೆ.
ಕಲ್ಲು ತೂರಾಟದಲ್ಲಿ ಹಲವರಿಗೆ ಗಾಯ, ಉದ್ರಿಕ್ತರ ಮೇಲೆ ಲಾಠಿಚಾರ್ಜ್
ಶವ ಮೆರವಣಿಗೆಯಲ್ಲಿ ವ್ಯಾಪಕ ಕಲ್ಲು ತೂರಾಟ ನಡೆದ ಬಳಿಕ ಪೊಲೀಸರು ಉದ್ರಿಕ್ತರನ್ನು ಚದುರಿಸಲು ಲಾಠಿಚಾರ್ಜ್ ಮಾಡಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿ, ಜನರನ್ನು ಚದುರಿಸುವ ಯತ್ನ ಮಾಡಿದ್ದಾರೆ. ಈ ವೇಳೆ, ಗುಂಡು ತಾಗಿ ಕೆಲವು ಯುವಕರು ಗಾಯಗೊಂಡಿದ್ದಾರೆ. ಶಿವಪ್ಪ ನಾಯಕನ ಸರ್ಕಲ್ ಬಳಿ ಕಲ್ಲು ತೂರಾಟ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದಾರೆ. ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು , ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸೀಗೆ ಹಟ್ಟಿಯ ಹರ್ಷ ಮನೆಗೆ ಶವ ತಂದು ಅಲ್ಲಿಂದ ರುದ್ರಭೂಮಿಗೆ ಒಯ್ಯುವ ಸಂದರ್ಭದಲ್ಲಿ ಸೇರಿದ ಜನರನ್ನು ನಿಯಂತ್ರಿಸಲು ಸಾಧ್ಯವಾಗದ ಮಟ್ಟಿಗೆ ಸ್ಥಿತಿ ಉಂಟಾಗಿದೆ.
After incidents of arson in Shivamogga, police have been deployed in large numbers and the administration has restricted public gatherings.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm