ಕೊರೊನಾ ಹೊಡೆತದಿಂದ ಜನರಿಗೆಲ್ಲ ನಷ್ಟ ; ಶಾಸಕರು, ಸಚಿವರಿಗೆ ಮಾತ್ರ ಬಂಪರ್ ! ಸದ್ದಿಲ್ಲದೆ ಸಂಬಳ, ಭತ್ಯೆ ಡಬಲ್ ! ಚರ್ಚೆಯೇ ಇಲ್ಲದೆ ವೇತನ ಹೆಚ್ಚಿಸಿ ಜನರಿಗೇ ಹೊರೆ ! 

22-02-22 06:57 pm       Giridhar, Political Correspondent   ಕರ್ನಾಟಕ

ಒಂದೆಡೆ ಸದನದಲ್ಲಿ ಕಾಂಗ್ರೆಸಿಗರ ಧರಣಿ, ಮತ್ತೊಂದು ಕಡೆ ಕೊರೊನಾ ನೆಪದಲ್ಲಿ ಅನುದಾನಕ್ಕೆ ಕತ್ತರಿ. ಆರ್ಥಿಕ ಸಂಕಷ್ಟ ಅನ್ನುವ ನೆಪದಲ್ಲಿ ಜನರ ಮೇಲೆ ತೆರಿಗೆಯ ಹೊರೆ.

ಬೆಂಗಳೂರು, ಫೆ.22 : ಒಂದೆಡೆ ಸದನದಲ್ಲಿ ಕಾಂಗ್ರೆಸಿಗರ ಧರಣಿ, ಮತ್ತೊಂದು ಕಡೆ ಕೊರೊನಾ ನೆಪದಲ್ಲಿ ಅನುದಾನಕ್ಕೆ ಕತ್ತರಿ. ಆರ್ಥಿಕ ಸಂಕಷ್ಟ ಅನ್ನುವ ನೆಪದಲ್ಲಿ ಜನರ ಮೇಲೆ ತೆರಿಗೆಯ ಹೊರೆ. ಆದರೆ ಇವೆಲ್ಲ ಅಪಸವ್ಯ, ಎಡವಟ್ಟುಗಳ ನಡುವೆಯೇ ಮುಖ್ಯಮಂತ್ರಿ, ಸಚಿವರು, ಶಾಸಕರು, ವಿಪಕ್ಷ ನಾಯಕರು ತಮ್ಮ ಸಂಬಳ, ಭತ್ಯೆಯನ್ನು ಸದ್ದಿಲ್ಲದೆ ಹೆಚ್ಚಿಸಿಕೊಂಡಿದ್ದಾರೆ. 

ವಿಧಾನಸಭೆಯಲ್ಲಿ ಈ ಬಗ್ಗೆ ಭತ್ಯೆ ಹೆಚ್ಚಳದ ತಿದ್ದುಪಡಿ ವಿಧೇಯಕ ಮಂಡನೆಯಾಗಿದ್ದು ಶಾಸಕರು ಯಾವುದೇ ಚರ್ಚೆಯನ್ನೇ ಮಾಡದೆ ತಮ್ಮ ಸಂಬಳವನ್ನು ಹೆಚ್ಚಿಸಿಕೊಂಡಿದ್ದಾರೆ. ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪೂರ್ ಮಾತ್ರ ಈ ವಿಧೇಯಕಕ್ಕೆ ವಿರೋಧ ಸೂಚಿಸಿದ್ದಾರೆ.‌ ಆದರೆ ಸದ್ದು ಗದ್ದಲದ ನಡುವೆಯೇ ವಿಧೇಯಕ ಅಂಗೀಕಾರ ಆಗಿದ್ದು ಇನ್ನು ಪ್ರತಿ ಐದು ವರ್ಷಕ್ಕೊಮ್ಮೆ ಸಂಬಳ ಹೆಚ್ಚಿಸುವುದಾಗಿ ವಿಧೇಯಕದಲ್ಲಿ ಉಲ್ಲೇಖಿಸಿದ್ದಾರೆ‌.‌ ಮುಖ್ಯಮಂತ್ರಿ, ಸಚಿವರ ಸಂಬಳ, ಭತ್ಯೆ ಬಹುತೇಕ ದುಪ್ಪಟ್ಟು ಆಗಿದ್ದರೆ, ಶಾಸಕರು, ಸಭಾಧ್ಯಕ್ಷರು, ವಿಪಕ್ಷ ನಾಯಕ ಹಾಗೂ ಸಚೇತಕರಿಗೂ ಸಂಬಳ, ಭತ್ಯೆಯನ್ನು ಭರಪೂರ ಹೆಚ್ಚಳ ಮಾಡಲಾಗಿದೆ. 

ಮುಖ್ಯಮಂತ್ರಿ, ಸಚಿವರ ಸಂಬಳ, ಭತ್ಯೆ ಬಹುತೇಕ ಡಬಲ್ ! 

See the source image

ಮುಖ್ಯಮಂತ್ರಿ ಸಂಬಳವನ್ನು 50 ಸಾವಿರದಿಂದ 75 ಸಾವಿರ ರೂ.ಗೆ ಏರಿಸಲಾಗಿದೆ. ಇವರ ಆತಿಥ್ಯ ಭತ್ಯೆ(ವಾರ್ಷಿಕ) 3 ಲಕ್ಷದಿಂದ 4.50 ಲಕ್ಷ ರೂ. ವರೆಗೆ ಏರಿಕೆಯಾಗಿದೆ.‌ ಮನೆ ಬಾಡಿಗೆಯನ್ನು 80 ಸಾವಿರದಿಂದ 1.20 ಲಕ್ಷ ರೂ.ಗೆ ಏರಿಸಲಾಗಿದೆ.‌ ಇದಲ್ಲದೆ ಮನೆ ನಿರ್ವಹಣೆಗೆ ಪ್ರತ್ಯೇಕ ಭತ್ಯೆ ಇದ್ದು ಅದನ್ನು 20 ಸಾವಿರದಿಂದ 30 ಸಾವಿರ ರೂ. ಮಾಡಲಾಗಿದೆ.‌ ಇಂಧನ ಬಳಕೆಯನ್ನು 1000 ಲೀಟರ್ ನಿಂದ 2000 ಲೀಟರ್ ಮಾಡಲಾಗಿದೆ. 

ಸಂಪುಟ ದರ್ಜೆ ಮಂತ್ರಿಗಳಿಗೂ ತಿಂಗಳಿಗೆ 40 ಸಾವಿರ ರೂ. ಇದ್ದ ಸಂಬಳವನ್ನು 60 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ವರ್ಷಕ್ಕೆ 3 ಲಕ್ಷವಿದ್ದ ಆತಿಥ್ಯ ಭತ್ಯೆಯನ್ನು ನಾಲ್ಕೂವರೆ ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮಂತ್ರಿಗಳ ಮನೆ ಬಾಡಿಗೆ 80 ಸಾವಿರದಿಂದ 1.20 ಲಕ್ಷ ರೂ.ಗೆ  ಏರಿಸಲಾಗಿದೆ. 20 ಸಾವಿರ ಇದ್ದ ಮನೆ ನಿರ್ವಹಣೆ ವೆಚ್ಚ 30 ಸಾವಿರ ರೂ.ಗೆ ಏರಿಕೆಯಾಗಿದ್ದು, ತಿಂಗಳಿಗೆ  1 ಸಾವಿರ ಲೀಟರ್​ ಪೆಟ್ರೋಲ್ ಸೌಲಭ್ಯ ನೀಡಲಾಗಿತ್ತು. ಇದೀಗ ಅದನ್ನೂ 2 ಸಾವಿರ ಲೀಟರ್​ಗೆ ಏರಿಸಲಾಗಿದೆ.

ಸಭಾಧ್ಯಕ್ಷರು, ಪ್ರತಿಪಕ್ಷ ನಾಯಕರಿಗೂ ಬಂಪರ್ 

Kageri defends suspension of 'unruly' members in Rajya Sabha | Deccan Herald

ವಿಧಾನಸಭೆಯನ್ನು ಮುನ್ನಡೆಸುವ ಜವಾಬ್ದಾರಿ ಹೊಂದುರುವ ಸ್ಪೀಕರ್ ಸಂಬಳವನ್ನು ರೂ. 50,000 ದಿಂದ 75,000 ಕ್ಕೆ ಏರಿಸಲಾಗಿದೆ.‌ ಅಲ್ಲದೆ, ಸ್ಪೀಕರ್ ವಿವಿಧ ಸಂದರ್ಭಗಳಲ್ಲಿ ಅತಿಥಿಗಳನ್ನು ಸ್ವಾಗತಿಸಲು ಬಳಕೆಯಾಗುವ ಆತಿಥ್ಯ ವೇತನ ವಾರ್ಷಿಕ  ₹ 3 ಲಕ್ಷದಿಂದ ₹ 4 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇವರ ಮನೆ ಬಾಡಿಗೆಯ ಸೌಲಭ್ಯವನ್ನು  ₹80,000 ರಿಂದ ₹1,60,000 ಕ್ಕೆ ಡಬಲ್ ಮಾಡಲಾಗಿದೆ. ‌ಇವರು ತಮ್ಮ ಪ್ರಯಾಣದ ಅವಧಿಯಲ್ಲಿ ವಾಹನಕ್ಕೆ ಬಳಸುವ ಇಂಧನವನ್ನು 1000 ಲೀಟರ್ ಇದ್ದುದನ್ನು 2000 ಲೀಟರ್ ಗೆ ಹೆಚ್ಚಿಸಿದ್ದಾರೆ. ಇದಲ್ಲದೆ, ವಿಧಾನಸಭೆ ಅಧ್ಯಕ್ಷರು ಎಲ್ಲೇ ಪ್ರಯಾಣಿಸಲಿ, ಅದಕ್ಕೆಂದು ಭತ್ಯೆ ಪಡೆಯಲು ಅವಕಾಶ ಇದೆ.

ಅದನ್ನು ಪ್ರಯಾಣ ಭತ್ಯೆ ಎಂಬ ಹೆಸರಲ್ಲಿ ಪ್ರತ್ಯೇಕವಾಗಿ ಪಡೆಯುತ್ತಿದ್ದು ಪ್ರತಿ ಕಿಲೋಮೀಟರ್ ಲೆಕ್ಕದಲ್ಲಿ ಸಿಗುತ್ತಿದ್ದ ಮೊತ್ತವನ್ನು ರೂ. 30 ರಿಂದ ರೂ. 40 ಗೆ ಏರಿಕೆ ಮಾಡಲಾಗಿದೆ. ಇದಲ್ಲದೆ ಎಷ್ಟು ದಿನ ಪ್ರಯಾಣ ಮಾಡುತ್ತಾರೋ ಅದರ ಲೆಕ್ಕದಲ್ಲಿ ದಿನ ಭತ್ಯೆ ಇದೆ. ದಿನಕ್ಕೆ ₹2000 ಇದ್ದ ಈ ಮೊತ್ತವನ್ನು ₹3000 ಕ್ಕೆ ಏರಿಸಲಾಗಿದೆ.‌ ಒಂದು ವೇಳೆ ಕರ್ತವ್ಯದ ನಿಮಿತ್ತ ಹೊರ ರಾಜ್ಯ ಪ್ರವಾಸ ಮಾಡಿದರೆ ಹೆಚ್ಚುವರಿ ಭತ್ಯೆ ಸಿಗುತ್ತದೆ. ಆ ಮೊತ್ತ ದಿನಕ್ಕೆ ₹2500 +₹5000 ಇದ್ದುದನ್ನು  ₹3000+₹7000 ಕ್ಕೆ ಏರಿಕೆ ಮಾಡಲಾಗಿದೆ. ‌

ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಎಷ್ಟು ? 

Karnataka Congress chief DK Shivakumar booked for violating COVID-19 norms  during 'Mekedatu Padayatra' | India News | Zee News

ರಾಜ್ಯದಲ್ಲಿ ಯಾವುದೇ ಪಕ್ಷ ಪ್ರತಿಪಕ್ಷ ಸ್ಥಾನದಲ್ಲಿದ್ದರೂ, ಅದರ ನಾಯಕನಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ಇರುತ್ತದೆ.‌ ಇವರ ಸಂಬಳವನ್ನು ₹40,000 ದಿಂದ ₹ 60,000 ಕ್ಕೆ ಹೆಚ್ಚಿಸಲಾಗಿದೆ.‌ ಇವರ ಆತಿಥ್ಯ ವೇತನ ವಾರ್ಷಿಕ ಲೆಕ್ಕದಲ್ಲಿ ₹2,00,000 ದಿಂದ ₹ 2,50,000 ಕ್ಕೆ ಏರಿಸಲಾಗಿದೆ. ಇವರು ತಮ್ಮ ವಾಹನಕ್ಕೆ ಬಳಸುವ ಇಂಧನವನ್ನು 1000 ಲೀಟರ್ ನಿಂದ 2000 ಲೀಟರ್ ಗೆ ಏರಿಸಿಕೊಂಡಿದ್ದಾರೆ.‌ ಪ್ರಯಾಣ ಭತ್ಯೆಯನ್ನು ಪ್ರತಿ ಕಿಲೋಮೀಟರ್ ₹30 ಪಡೆಯಬಹುದು. ದಿನ ಭತ್ಯೆ(ಪ್ರಯಾಣಕ್ಕೆ ತಕ್ಕಂತೆ)  ದಿನವೊಂದಕ್ಕೆ ₹2000 ದಿಂದ ₹3000 ಮಾಡಲಾಗಿದೆ. ಹೊರ ರಾಜ್ಯ ಪ್ರವಾಸ ಹೋದಲ್ಲಿ ದಿನಕ್ಕೆ ₹5000 ಇದ್ದ ಭತ್ಯೆಯನ್ನು 7000 ರೂ. ಮಾಡಲಾಗಿದೆ.

ಶಾಸಕರ ತಿಂಗಳ ಸಂಬಳ, ಭತ್ಯೆಯನ್ನು ನೀವೇ ಲೆಕ್ಕಹಾಕಿ! 

Karnataka: BJP begins 'Janaswaraj Yatre' ahead of announcing candidates for  MLC polls

ಯಾವುದೇ ಸರಕಾರ ಅಧಿಕಾರದಲ್ಲಿದ್ದರೂ, ಶಾಸಕರಿಗೆ ಸಮಾನ ವೇತನ ಇರುತ್ತದೆ. ಇವರ ತಿಂಗಳ ಸಂಬಳ ₹20,000 ಇದ್ದುದನ್ನು ₹ 40,000 ಮಾಡಲಾಗಿದೆ. ‌ಇದಲ್ಲದೆ, ಕ್ಷೇತ್ರ ಕಾರ್ಯಕ್ಕೆಂದು ವಿಶೇಷ ಭತ್ಯೆಯಿದ್ದು ಅದನ್ನು ₹40,000 ರಿಂದ ₹60000 ಕ್ಕೆ ಏರಿಸಲಾಗಿದೆ.‌ ಇವರದ್ದೂ ತಮ್ಮ ಆತಿಥ್ಯ ವೇತನವನ್ನು (ವಾರ್ಷಿಕ) ₹ 2,00,000 ದಿಂದ ₹ 2,50,000 ಮಾಡಲಾಗಿದೆ. ಇವರ ವಾಹನಗಳ ಇಂಧನವನ್ನು 1000 ಲೀಟರ್ ರಿಂದ 2000 ಲೀಟರ್ ಗೆ ಹೆಚ್ಚಿಸಲಾಗಿದೆ. ಪ್ರಯಾಣ ಭತ್ಯೆ ಪ್ರತಿ ಕಿಲೋಮೀಟರ್ ₹25 ಇದ್ದುದನ್ನು ₹30 ಮಾಡಲಾಗಿದೆ. 

ಇದಲ್ಲದೆ, ಪ್ರಯಾಣದ ಅನುಗುಣವಾಗಿ ದಿನ ಭತ್ಯೆ(ಪ್ರಯಾಣ) ಇದ್ದು ಅದನ್ನು ₹2000 ದಿಂದ ₹2500ಕ್ಕೆ ಏರಿಕೆ ಮಾಡಲಾಗಿದೆ. ಶಾಸಕರು ಹೊರ ರಾಜ್ಯ ಪ್ರವಾಸ ಹೋದಲ್ಲಿ ಪಡೆಯುವ ಭತ್ಯೆಯನ್ನು ₹5000 ದಿಂದ ₹7000 ಮಾಡಲಾಗಿದೆ. ಶಾಸಕರ ದೂರವಾಣಿ ವೆಚ್ಚವನ್ನು (ಯಥಾಸ್ಥಿತಿ) ತಿಂಗಳಿಗೆ ₹20,000 ರೂ. ಇರಿಸಲಾಗಿದೆ. ಆಪ್ತ ಸಹಾಯಕ ಮತ್ತು ರೂಮ್ ಬಾಯ್ ವ್ಯಕ್ತಿಗೂ ತಿಂಗಳಿಗೆ ಇತರೇ ವೆಚ್ಚವನ್ನು ₹10,000 ರಿಂದ ₹20,000 ಹೆಚ್ಚಳ ಮಾಡಲಾಗಿದೆ.

Karnataka Tightens Lockdown-like Restrictions as State Records Over 23,000  New Cases

ಕೊರೊನಾ ಲಾಕ್ಡೌನ್ ಹೊಡೆತದಿಂದ ರಾಜ್ಯದಲ್ಲಿ ಬಹುತೇಕ ವಲಯದ ಕಾರ್ಮಿಕರು, ಎಲ್ಲ ವೇತನದಾರರಿಗೆ ನಷ್ಟವಾಗಿದೆ. ಹೊಟೇಲ್, ಟ್ರಾವೆಲ್ಸ್ ಉದ್ಯಮಿಗಳಿಗೂ ಭಾರೀ ನಷ್ಟವಾಗಿದೆ. ಬಹಳಷ್ಟು ಜನರು ಕಂಪನಿಗಳಲ್ಲಿ ಉದ್ಯೋಗ ಕಳಕೊಂಡಿದ್ದಾರೆ. ಶಾಸಕರು, ಸಚಿವರು ಮಾತ್ರ ಇದ್ಯಾವುದೇ ಗೊಡವೆ ಇಲ್ಲದೆ, ಬೊಕ್ಕಸ ಬರಿದಾಗಿದೆ ಎಂದು ಹೇಳುತ್ತಲೇ ತಮ್ಮ ಸಂಬಳ, ಭತ್ಯೆಯನ್ನು ಭರಪೂರ ಹೆಚ್ಚಿಸಿಕೊಂಡು ಜನರ ಮೇಲೆ ಮತ್ತೊಂದು ಹೊರೆ ಹೊರಿಸಿದ್ದಾರೆ.

 Assembly on Tuesday passed a Bill giving the chief minister, ministers, lawmakers and others a fat hike in in their monthly salary, citing “considerable increase in the cost of living”.