ತೀವ್ರ ಹೃದಯಾಘಾತದಿಂದ ರೇಡಿಯೋ ಜಾಕಿ ರಚನಾ ಸಾವು ; ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ 

22-02-22 09:48 pm       Bengaluru Correspondent   ಕರ್ನಾಟಕ

ಕನ್ನಡದ ಹೆಸರಾಂತ ರೇಡಿಯೋ ನಿರೂಪಕಿ ಆರ್ ಜೆ ರಚನಾ ಇನ್ನಿಲ್ಲ. ತೀವ್ರ ಹೃದಯಾಘಾತದಿಂದ ರಚನಾ ನಿಧನ ಹೊಂದಿದ್ದಾರೆ.

ಬೆಂಗಳೂರು, ಫೆ 22 : ಕನ್ನಡದ ಹೆಸರಾಂತ ರೇಡಿಯೋ ನಿರೂಪಕಿ ಆರ್ ಜೆ ರಚನಾ ಇನ್ನಿಲ್ಲ. ತೀವ್ರ ಹೃದಯಾಘಾತದಿಂದ ರಚನಾ ನಿಧನ ಹೊಂದಿದ್ದಾರೆ.

ಆರ್ ಜೆ ರಚನಾ ತಮ್ಮ ಕಂಠ ಸಿರಿಯಿಂದಲೇ ಹೆಸರುವಾಸಿ ಆಗಿದ್ದರು. ರೇಡಿಯೋ ಮಿರ್ಚಿ ಮೂಲಕ ಅವರು ತಮ್ಮ ರೇಡಿಯೋ ಜಾಕಿ ಪಯಣ ಆರಂಭಿಸಿದ್ದರು. ನಂತರ ರೇಡಿಯೋ ಸಿಟಿಯಲ್ಲಿಯೂ ಅವರು ಕೆಲಸ ಮಾಡಿದ್ದಾರೆ. ಆರ್ ಜೆ ರಚನಾ ಕಾರ್ಯಕ್ರಮಗಳು ಎಂದರೆ ಅತ್ಯಂತ ಜನಪ್ರಿಯ ಆಗಿದ್ದವು. ಆದರೆ ಕಿರಿವಯಸ್ಸಿನಲ್ಲೇ ರಚನಾ ಅವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ.

ಕೇವಲ ರೇಡಿಯೋ ಜಾಕಿ ಆಗಿ ಮಾತ್ರ ಅಲ್ಲಾ, ಅವರು ಹಲವಾರು ವೇದಿಕೆ ಕಾರ್ಯಕ್ರಮಗಳನ್ನು ಕೂಡ ನಿರೂಪಣೆ ಮಾಡಿದ್ದಾರೆ, ಕನ್ನಡ ಚಿತ್ರರಂಗದ ಹಲವಾರು ತಾರೆಯರ ಸಂದರ್ಶನ ಮಾಡಿ ರಚನಾ ಸೈ ಎನಿಸಿಕೊಂಡಿದ್ದಾರೆ.

Renowned RJ Rachana passed away due to cardiac arrest at 39 years of age

ಆರ್ ಜೆ ಆಗಿ ಹೆಸರು ಮಾಡಿದ್ದ ರಚನಾ ಅವರು ಆರೇಳು ವರ್ಷಗಳ ಹಿಂದೆಯೇ ರೇಡಿಯೋ ಜಾಕಿ ವೃತ್ತಿಗೆ ವಿದಾಯ ಹೇಳಿದ್ದರು. ನಂತರ ಅವರು ಸ್ನೇಹಿತರ ವಲಯದಿಂದಲೂ ದೂರ ಉಳಿದಿದ್ದರಂತೆ. ಇವರ ಅಚಾನಕ್ ಸಾವು ಆರ್ ಜೆ ವಲಯಕ್ಕೆ ಶಾಕ್ ನೀಡಿದೆ. ರಚನಾಗೆ ಹೀಗೆ ಆಗಲು ಹೇಗೆ ಸಾಧ್ಯ ಎಂದು ಎಲ್ಲರು ಶಾಕ್ ಆಗಿದ್ದಾರೆ.

ಅಷ್ಟೇ ಅಲ್ಲ ರಚನಾ ಅವರು ತುಂಬಾನೇ ಡಿಪ್ರೆಷನ್‌ನಲ್ಲಿ ಇದ್ದರಂತೆ. ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನುತ್ತಿದೆ ರಚನಾ ಸ್ನೇಹಿತರ ಬಳಗ. ಸದ್ಯ ಕಾರ್ಡಿಯಾ ಕರೆಸ್ಟ್‌ನಿಂದ ಅವರು ನಿಧನ ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಖಿನ್ನತೆಯಿಂದ ಏನಾದರು ಹೆಚ್ಚು ಕಡಿಮೆ ಆಗಿರಬೇಕು ಎನ್ನುತ್ತಿದೆ ಸ್ನೇಹಿತ ವಲಯ. ಶಾಕ್‌ಗೆ ಒಳಗಾದ ಸ್ನೇಹಿತ ವರ್ಗ ದುಖಃದಿಂದಲೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.

See the source image

ಆರ್​ಜೆ ರಚನಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕುಟುಂಬಸ್ಥರು ರಚನಾ ಅವರ ಅಂಗಾಂಗವನ್ನು ದಾನ ಮಾಡಿದ್ದಾರೆ.  ಮುಂಜಾನೆ ಹೃದಯಘಾತವಾಗಿದ್ದ ಕಾರಣ ಅಪೋಲೊ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲಾಗುತ್ತಿತ್ತು. 12 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ರಚನಾ ಅವರ ನಿಧನಕ್ಕೆ ಚಿತ್ರರಂಗ, ಸಹದ್ಯೋಗಿಗಳು, ಅಪಾರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

Popular Kannada Radio Jockey, Rachana died of a cardiac arrest on Tuesday (February 22) at noon. She was 39. According to reports, Rachana complained of chest pain at her flat in JP Nagar and she was rushed to a nearby hospital where she was declared brought dead.