ಕಾಂಗ್ರೆಸ್ ಪಕ್ಷ  ಎಸ್​ಡಿಪಿಐ, ಪಿಎಫ್ಐ ಗೆ ರಕ್ಷಣೆ ಕೊಟ್ಟು ಬೆಳೆಸಿದೆ ; ದೇಶದ್ರೋಹಿ ಕೃತ್ಯದಲ್ಲಿ ಸಾಕ್ಷಿ ಲಭ್ಯವಾದ್ರೆ ಈ ಸಂಘಟನೆಗಳನ್ನು ನಾವೇ ಬ್ಯಾನ್ ಮಾಡ್ತೀವಿ  ! 

24-02-22 03:47 pm       Bengaluru Correspondent   ಕರ್ನಾಟಕ

ದೇಶದ್ರೋಹಿ ಕೃತ್ಯದಲ್ಲಿ ಭಾಗಿಯಾಗಿರುವ ಸಾಕ್ಷಿಗಳು ಮೇಲ್ನೋಟಕ್ಕೆ ಲಭ್ಯವಾದರೂ ರಾಜ್ಯದಲ್ಲಿ ಎಸ್​ಡಿಪಿಐ, ಪಿಎಫ್ಐ, ಸಿಎಫ್ಐ ರೀತಿಯ ಸಂಘಟನೆಗಳ ನಿಷೇಧಕ್ಕೆ ಸರ್ಕಾರ ಮುಂದಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಸ್ಪಷ್ಟಪಡಿಸಿದರು.

ಬೆಂಗಳೂರು, ಫೆ 24 : ದೇಶದ್ರೋಹಿ ಕೃತ್ಯದಲ್ಲಿ ಭಾಗಿಯಾಗಿರುವ ಸಾಕ್ಷಿಗಳು ಮೇಲ್ನೋಟಕ್ಕೆ ಲಭ್ಯವಾದರೂ ರಾಜ್ಯದಲ್ಲಿ ಎಸ್​ಡಿಪಿಐ, ಪಿಎಫ್ಐ, ಸಿಎಫ್ಐ ರೀತಿಯ ಸಂಘಟನೆಗಳ ನಿಷೇಧಕ್ಕೆ ಸರ್ಕಾರ ಮುಂದಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಸ್ಪಷ್ಟಪಡಿಸಿದರು.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್​ಡಿಪಿಐ, ಪಿಎಫ್ಐ ತರದ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ದೇಶದ್ರೋಹಿ, ಸಮಾಜ ವಿರೋಧಿ ಸಂಘಟನೆ ಇದ್ದರೆ ಕ್ರಮ ವಹಿಸಲಾಗುತ್ತದೆ. ಕಾಂಗ್ರೆಸ್ ಪಕ್ಷ ಇವರಿಗೆ ರಕ್ಷಣೆ ಕೊಟ್ಟು ಬೆಳೆಸಿದೆ. ಸದ್ಯಕ್ಕೆ ಹರ್ಷ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ, ಮೇಲ್ನೋಟಕ್ಕೆ ಸಮಾಜ ವಿರೋಧಿ ಕೃತ್ಯದ ದಾಖಲೆ ಲಭ್ಯವಾದರೆ ಅಂತಹ ಸಂಘಟನೆಗಳ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಯಾವ ದೇಶದ್ರೋಹ ಸಂಘಟನೆ ಜೊತೆಯೂ ಬಿಜೆಪಿ ಕೈ ಜೋಡಿಸಲ್ಲ ಎಂದರು.

Dakshina Kannada: At Least 71 Cases of Communal Discord Recorded in 8  Months, Finds Report

ಯಾವುದೇ ಸಂಘಟನೆಗಳ ನಿಷೇಧಕ್ಕೆ ಬಲವಾದ ಸಾಕ್ಷಿಗಳು ಬೇಕು, ಇದರಲ್ಲಿ ಸಾಕಷ್ಟು ಸವಾಲು-ಸಮಸ್ಯೆಗಳು ಇವೆ. ಬಹಳ ತ್ವರಿತವಾಗಿ ತನಿಖೆ ನಡೆಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ. ದೇಶ ವಿರೋಧಿ ಸಂಘಟನೆಗಳ ನಿಷೇಧ ಆಗಲೇಬೇಕು, ಆ ನಿಟ್ಟಿನಲ್ಲಿ ನಾವು ಮುಂದುವರೆಯಲಿದ್ದೇವೆ.

ನಾವು ವಿರೋಧ ಪಕ್ಷವಾಗಿದ್ದಾಗ ಹತ್ಯೆಯಾದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಎಲ್ಲಾ ಕೇಸ್​ಗಳ ಫಾಲೋಅಪ್​ನಲ್ಲಿದ್ದೇವೆ, ಕೇಸ್​ಗಳ ಪರಿಶೀಲನೆ ಮಾಡುತ್ತಿದ್ದೇವೆ, ಮೃತರ ಕುಟುಂಬ ಸದಸ್ಯರ ಜೊತೆ ಸಂಪರ್ಕದಲ್ಲಿದ್ದೇವೆ, ಹತ್ಯೆಯಾದವರ ಕುಟುಂಬಕ್ಕೆ ನ್ಯಾಯ ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ನಾವು ಆಡಳಿತದಲ್ಲಿದ್ದರೂ ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರನ ಹತ್ಯೆಯಾಗಿದೆ. ಹರ್ಷನ ಹತ್ಯೆ ಘಟನೆ ನಡೆಯಬಾರದಿತ್ತು, ಮುಂಜಾಗ್ರತೆ ಇನ್ನಷ್ಟು ಹೆಚ್ಚಿಸಬೇಕಿದೆ. ಮತ್ತಷ್ಟು ಕ್ರಮ, ಜಾಗೃತಿ ವಹಿಸಲಿದ್ದೇವೆ, ಎಲ್ಲರ ರಕ್ಷಣೆ ನಮ್ಮ ಕರ್ತವ್ಯ, ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ, ಘಟನೆ ಮತ್ತೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ.

Won't shave beard till I become the CM: Karnataka Congress chief DK  Shivakumar - India News

ಪ್ರತಿಪಕ್ಷ ಕಾಂಗ್ರೆಸ್ ಸಮಾಜದಲ್ಲಿ ಸಮಸ್ಯೆ, ಗೊಂದಲ ಉಂಟುಮಾಡಿ ದ್ವೇಶ, ವೈಮನಸ್ಸು ಹುಟ್ಟಿಸುತ್ತಿದೆ. ಸಂಸದೀಯ ವ್ಯವಸ್ಥೆಗೆ ಧಕ್ಕೆ ತಂದಿದೆ. ಕಲಾಪ ನಡೆಯದಂತೆ ಮಾಡುವ ಉದ್ದೇಶದಿಂದ ಸತತವಾಗಿ ಕಾರ್ಯ ಮಾಡುತ್ತಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಹರಿಪ್ರಸಾದ್ ಯಾವ ವಿಚಾರದಲ್ಲಿ ಸ್ಪಷ್ಟತೆ ಇಲ್ಲದೇ ಸುಳ್ಳು ಮಾಹಿತಿ ನೀಡಿ‌ ಅದನ್ನೇ ಸತ್ಯ ಎಂದು ಹೇಳುವ ಕೆಲಸ ಮಾಡುತ್ತಿದ್ದಾರೆ.

ಸದನದಲ್ಲಿ ಸಮಾಜದ ಜ್ವಲಂತ ಸಮಸ್ಯೆ ಮಂಡಿಸದೆ ಶಿವಮೊಗ್ಗದಲ್ಲಿ ಹಿಜಾಬ್ ಪ್ರಕರಣ ಪ್ರಾರಂಭವಾದಾಗ ಯಾವುದೋ ಒಂದು ಶಾಲೆಯಲ್ಲಿ ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ತಪ್ಪು ಮಾಹಿತಿ ನೀಡಿ, ಗೊಂದಲ ಮಾಡುತ್ತಿದ್ದಾರೆ. ಅಧಿವೇಶನದಲ್ಲಿ ಕಲಾಪ ನಡೆಯಲು ಬಿಡದೆ ಅಡೆತಡೆ ಮಾಡಿ ಹಣಕಾಸು ವ್ಯರ್ಥ ಮಾಡಿದ್ದಾರೆ. ಸದನ ಕರೆದ ಉದ್ದೇಶ ಈಡೇರಿಕೆಗೆ ಅವಕಾಶ ನೀಡಲಿಲ್ಲ, ತನ್ನ ಹಿರಿತನಕ್ಕೆ ತಕ್ಕ ರೀತಿ ನಡೆದುಕೊಳ್ಳಲಿಲ್ಲ. ವೀರೇಂದ್ರ ಪಾಟೀಲ್, ಬಿಡಿ ಜತ್ತಿ, ನಿಜಲಿಂಗಪ್ಪರಂತಹ ವ್ಯಕ್ತಿಗಳು ಇದ್ದ ಪಕ್ಷ, ಅದಕ್ಕೆಲ್ಲಾ ಈಗ ತಿಲಾಂಜಲಿ ಹೇಳಿ ಮನ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

Congress is reason for the growth of SDPI and PFI, we will ban these organizations soon says Ashwath Narayan.