ಉಕ್ರೇನ್ ಮೇಲೆ ಬಾಂಬ್ ದಾಳಿ ; ಸಿಕ್ಕಿಬಿದ್ದ ರಾಜ್ಯದ ಹತ್ತಕ್ಕೂ ಹೆಚ್ಚು ಎಂಬಿಬಿಎಸ್ ವಿದ್ಯಾರ್ಥಿಗಳು! ಮಂಗಳೂರು, ಶಿವಮೊಗ್ಗ, ಮೈಸೂರು, ಗದಗದ ನಿವಾಸಿಗಳು ! 

24-02-22 06:19 pm       Bengaluru Correspondent   ಕರ್ನಾಟಕ

ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಆರಂಭವಾಗುತ್ತಿದ್ದಂತೆ ಅಲ್ಲಿರುವ ಭಾರತದ ನಾಗರಿಕರ ಬಗ್ಗೆ ಭೀತಿ ವ್ಯಕ್ತವಾಗಿದೆ. ಭಾರತದ ನಿವಾಸಿಗಳನ್ನು ಏರ್ ಲಿಫ್ಟ್ ಮಾಡಲು ಏರ್ ಇಂಡಿಯಾ ಮುಂದಾಗಿದೆ. ಆದರೆ ರಷ್ಯಾ ಬಾಂಬ್ ದಾಳಿಯಿಂದಾಗಿ ವಿಮಾನಗಳು ಅಲ್ಲಿನ ಏರ್ಪೋರ್ಟ್ ತೆರಳಲು ಸಾಧ್ಯವಾಗುತ್ತಿಲ್ಲ.‌

ಬೆಂಗಳೂರು, ಫೆ.24 : ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಆರಂಭವಾಗುತ್ತಿದ್ದಂತೆ ಅಲ್ಲಿರುವ ಭಾರತದ ನಾಗರಿಕರ ಬಗ್ಗೆ ಭೀತಿ ವ್ಯಕ್ತವಾಗಿದೆ. ಭಾರತದ ನಿವಾಸಿಗಳನ್ನು ಏರ್ ಲಿಫ್ಟ್ ಮಾಡಲು ಏರ್ ಇಂಡಿಯಾ ಮುಂದಾಗಿದೆ. ಆದರೆ ರಷ್ಯಾ ಬಾಂಬ್ ದಾಳಿಯಿಂದಾಗಿ ವಿಮಾನಗಳು ಅಲ್ಲಿನ ಏರ್ಪೋರ್ಟ್ ತೆರಳಲು ಸಾಧ್ಯವಾಗುತ್ತಿಲ್ಲ.‌

ಈ ನಡುವೆ, ರಾಜ್ಯದ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್ ದೇಶದಿಂದ ಮರಳಲು ಸಿದ್ಧತೆ ನಡೆಸಿದ್ದು ಯುದ್ಧ ಆರಂಭಗೊಂಡಿದ್ದರಿಂದ ಏರ್ಪೋರ್ಟ್ ನಲ್ಲಿ ಸಿಲುಕಿಕೊಂಡಿದ್ದಾರೆ ಎನ್ನುವ ಮಾಹಿತಿಯಿದೆ. ಉಕ್ರೇನಲ್ಲಿ ಸಿಲುಕಿರುವ ರಾಜ್ಯದ ಹತ್ತು ಮಂದಿ ಸುರಕ್ಷಿತವಾಗಿದ್ದಾರೆಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಹತ್ತು ಮಂದಿಯ ಪೈಕಿ ಇಬ್ಬರು ಶಿವಮೊಗ್ಗ ಮೂಲದವರು. ಸಂತೆ ಕಡೂರು ಗ್ರಾಮದ ನಿವಾಸಿ ವಿಶ್ವನಾಥ್ ಹಾಗು ದೇವಕಿ ದಂಪತಿಯ ಪುತ್ರ ತೇಜಸ್ ಉಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾನೆ. ತೇಜಸ್, ಮನೆಯವರನ್ನು ಸಂಪರ್ಕಿಸಿ ತಾನು ಯಾವುದೇ ಅಪಾಯದಲ್ಲಿ ಇಲ್ಲ ಎಂದು ಹೇಳಿದ್ದಾನೆ. ವಿಮಾನ ಹಾರಾಟ ಆರಂಭವಾದ ಕೂಡಲೇ ವಾಪಸ್ಸಾಗುವುದಾಗಿ ಪೋಷಕರಿಗೆ ಧೈರ್ಯ ತುಂಬಿದ್ದಾನೆ. ಮತ್ತೋರ್ವ ಶಿವಮೊಗ್ಗದ ಯುವತಿ ಉಕ್ರೇನಲ್ಲಿ ಉದ್ಯೋಗದಲ್ಲಿದ್ದು, ಅವರು ಇನ್ನು ಸಂಪರ್ಕಕ್ಕೆ ಸಿಕ್ಕಿಲ್ಲ.

ಬಾಗಲಕೋಟೆ ಜಿಲ್ಲೆಯ ಎಂಬಿಬಿಎಸ್ ವಿದ್ಯಾರ್ಥಿ ಮನೋಜ್ ಕುಮಾರ್ ಚಿತ್ರಗಾರ(20) ಉಕ್ರೇನಲ್ಲಿ ಇರುವ ಮಾಹಿತಿಯಿದೆ. ಕಳೆದ ಡಿಸೆಂಬರ್ 10 ರಂದು ಉಕ್ರೇನ್ ಗೆ ತೆರಳಿದ್ದ ವಿಧ್ಯಾರ್ಥಿ,  ಖಾರ್ಕೀವ್ ನಗರದ ನ್ಯಾಷನಲ್‌ ಮೆಡಿಕಲ್ ಯುನಿವರ್ಸಿಟಿಯಲ್ಲಿ ವೈದ್ಯಕೀಯ ಅಧ್ಯಯನ ನಡೆಸುತ್ತಿದ್ದಾರೆ. ಕಾಲೇಜಿನ ಹಾಸ್ಟೆಲ್ ನಲ್ಲಿ ಸೇಫ್ ಆಗಿರುವುದಾಗಿ ವಿದ್ಯಾರ್ಥಿ ಹೇಳಿಕೊಂಡಿದ್ದಾನೆ. ಇದೇ ಫೆ.18 ಕ್ಕೆ ಭಾರತಕ್ಕೆ ಪ್ಲೈಟ್ ಬುಕ್ ಮಾಡಿದ್ದರು. ಆದರೆ ತಾಯ್ನಾಡಿಗೆ ಬರಲು ಸಾಧ್ಯವಾಗಲಿಲ್ಲ. ‌

War in Ukraine LIVE Updates: 18 Killed Near Ukraine's Odessa; Biden Vows to  'Hold Russia Accountable', Will Impose New Sanctions

ಕೋಲಾರ ತಾಲೂಕಿನ ವೇಮಗಲ್ ಮೂಲದ ದೀಕ್ಷಿತ್ ರಾಜ್ ಎಂಬ ವಿದ್ಯಾರ್ಥಿ ಉಕ್ರೇನ್ ದೇಶದ ಕೈವ್ ಪ್ರದೇಶದಲ್ಲಿದ್ದಾರೆ.‌ ಮೈಸೂರು ಮೂಲದ ರಮ್ಯಾ ಹಾಗೂ ಬೆಂಗಳೂರಿನ ವಿಶಾಲ್ ಕೂಡ ಕೈವ್ ನಗರದಲ್ಲಿದ್ದಾರೆ. ಕಲಬುರಗಿ ಜಿಲ್ಲೆಯ ಜೀವಿತಾ ಎಂಬ ವಿದ್ಯಾರ್ಥಿನಿ ಎಂಬಿಬಿಎಸ್ ಕಲಿಯಲು ಕಳೆದ ಸೆಪ್ಟೆಂಬರ್ ನಲ್ಲಿ ಕೀವ್ ನಗರಕ್ಕೆ ತೆರಳಿದ್ದರು. ತಾಯಿ ಜೊತೆ ಜೀವಿತಾ ಮಾತನಾಡಿದ್ದು ಸುರಕ್ಷಿತ ಇರುವುದಾಗಿ ತಿಳಿಸಿದ್ದಾರೆ. ‌ಗದಗ ಜಿಲ್ಲೆಯ ಮುಂಡರಗಿ ನಿವಾಸಿ ಎಂಬಿಬಿಎಸ್ ವಿದ್ಯಾರ್ಥಿ ಮಹಾಗಣಪತಿ ಬಿಳಿಮಗ್ಗದ ಉಕ್ರೇನ್ ದೇಶದಲ್ಲಿದ್ದಾನೆ. ಈ ಬಗ್ಗೆ ತಂದೆ ಕಾಶಿನಾಥ ಬಿಳಿಮಗ್ಗದ, ಮಗ ಸುರಕ್ಷಿತ ಇರುವುದಾಗಿ ತಿಳಿಸಿದ್ದಾರೆ. ಅಲ್ಲಿ ಯಾವುದೇ ಭೀತಿ ಇಲ್ಲ. ನನ್ನ ಮಗನೊಂದಿಗೆ ಮಾತನಾಡಿದ್ದೇನೆ. ಮಾ.1 ಕ್ಕೆ ವಿಮಾನದ ಟಿಕೆಟ್ ಬುಕ್ ಆಗಿದ್ದು ಆಗಮನದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದಾರೆ. 

ವಿಜಯಪುರ ಜಿಲ್ಲೆಯ ಸುಚಿತ್ರಾ ಖಾರ್ಕೀವ್ ನಗರದ ನ್ಯಾಶನಲ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಮಗಳ ಜೊತೆಗೆ ವಿಡಿಯೋ ಕಾಲ್ ಮೂಲಕ ತಾಯಿ ಕಮಲಾಕ್ಷಿ ಮಾತನಾಡಿದ್ದಾರೆ.‌ ನಾವು ಸೇಫಾಗಿದ್ದೇವೆ, ಇಲ್ಲಿ ಯಾವುದೇ ಭಯದ ವಾತಾವರಣ ಇಲ್ಲ.‌ ಫ್ಲೈಟ್ ಬುಕ್ ಮಾಡಿದ್ವಿ, ಈಗ ಕ್ಯಾನ್ಸಲ್ ಆಗಿದೆ ಎನ್ನುತ್ತಿದ್ದಾರೆ. ಇಲ್ಲಿ 200 ರಿಂದ 300 ಜನ ಕನ್ನಡಿಗರಿದ್ದಾರೆ. 3 ಸಾವಿರಕ್ಕು ಅಧಿಕ ಭಾರತೀಯರಿದ್ದಾರೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸುಚಿತ್ರಾ ತಿಳಿಸಿದ್ದಾರೆ.

Casey Michel: Why does Russia want to invade Ukraine? Ask Putin

ಮಂಗಳೂರಿನ ಇಬ್ಬರು ಉಕ್ರೇನಲ್ಲಿ ಬಾಕಿ 

ಮಂಗಳೂರಿನ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಉಕ್ರೇನಲ್ಲಿದ್ದಾರೆ. ಒಬ್ಬಳು ಯುವತಿ ಮತ್ತು ಇನ್ನೊಬ್ಬ ಯುವಕ ಎಂಬಿಬಿಎಸ್ ಕೀವ್ ನಗರದಲ್ಲಿದ್ದಾರೆ. ಪಡೀಲ್ ನಿವಾಸಿಯಾಗಿರುವ ವಿದ್ಯಾರ್ಥಿ ಕ್ಲೇಟನ್, ತಾಯಿ - ತಂದೆ ಜೊತೆ ಮಾತನಾಡಿದ್ದು ಸುರಕ್ಷಿತವಾಗಿದ್ದೇನೆ. ಎಂಬೆಸ್ಸಿ ಕೂಡ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾನೆ. ಇನ್ನೊಬ್ಬ ಯುವತಿ ಮಂಗಳೂರಿನ ದೇರೆಬೈಲ್ ನಿವಾಸಿಯಾಗಿದ್ದು ಮೂರನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾಳೆ. ಯುದ್ಧ ಭೀತಿ ಹಿನ್ನೆಲೆಯಲ್ಲಿ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದು ಇಬ್ಬರು ಕೂಡ ಫೆ.26 ರಂದು ಬರಲು ನಿಶ್ಚಯಿಸಿದ್ದರು. ಆದರೆ ಈಗ ವಿಮಾನ ಸಂಚಾರ ರದ್ದಾಗಿದ್ದರಿಂದ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯಕ್ಕೆ ಸುರಕ್ಷಿತ ಇರುವುದಾಗಿ ಇವರು ಮನೆಯವರಿಗೆ ಹೇಳಿದ್ದಾರೆ.

Russia Ukraine War India: Russian Army Ready To Attack Ukraine Does World  Moving Towards Third World War Know Impact On India - रूसी सेना यूक्रेन पर  हमले को तैयार, तीसरे विश्‍वयुद्ध की

ಮಂಡ್ಯ, ರಾಮನಗರ ಜಿಲ್ಲೆಯ ನಾಲ್ವರ ಬಗ್ಗೆ ಆತಂಕ  

ರಾಮನಗರ ಜಿಲ್ಲೆಯ ಚನ್ನಪಟ್ಟಣದ ತಿಮ್ಮಸಂದ್ರ ಗ್ರಾಮದ ವಿದ್ಯಾರ್ಥಿನಿ ನಿವೇದಿತಾ ಉಕ್ರೇನ್ ನಲ್ಲಿ ಸಿಲುಕಿದ್ದಾಳೆ.‌ ಜಪೋರಿಜಹಿಯಾ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿ, ಉಕ್ರೇನ್ ನಲ್ಲಿ ಮೂರನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.  ರಾಮನಗರದ ಐಜೂರು ಮೂಲದ ಮತ್ತೊಬ್ಬ ವಿದ್ಯಾರ್ಥಿನಿ ಆಯೆಷಾ ಮೂರು ತಿಂಗಳ ಹಿಂದೆ ಉಕ್ರೇನ್ ತೆರೆಳಿದ್ದು ಎಂಬಿಬಿಎಸ್ ಕಲಿಯುತ್ತಿದ್ದಾರೆ. ಸದ್ಯಕ್ಕೆ ಉಕ್ರೇನ್ ಎಂಬೆಸ್ಸಿಯಲ್ಲಿ ಆಯೆಷಾ ಇದ್ದು ತಾಯ್ನಾಡಿಗೆ ಮರಳಲು ಸಿದ್ಧತೆಯಲ್ಲಿದ್ದಾಗಲೇ ಯುದ್ಧ ಆರಂಭಗೊಂಡಿತ್ತು.‌ ಮಗಳ ಜೊತೆ ಪೋಷಕರು ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದಾರೆ. ಮಂಡ್ಯ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದು ಯುದ್ಧ ಭೀತಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಬಳಿಯ ನಿವಾಸಿಗಳಾದ ಮನೋಜ್ ಮತ್ತು ಗಾಯತ್ರಿ ಆರ್. ಕನ್ನಾ ಉಕ್ರೇ‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ‌

Karnataka Chief Minister Basavaraj Bommai on Thursday said that about 10 students from the state are stranded in Ukraine after Russia launched an all-out attack on the country. "As many as 100 Indian citizens, students are stranded in Ukraine due to war. They got stranded while going to the airport. The flights have been suspended after the war broke out. Right now they are in two buses and we have learnt that there are more than 10 students from Karnataka among them. We are getting information on their whereabouts," he said.