ಬಾಂಬ್ ಪ್ರೊಟೆಕ್ಟರ್ ನಲ್ಲಿದ್ದೇವೆ, ಏರ್ ಬೇಸ್ ರಷ್ಯಾ ಕೈಲಿದೆ, ನಮ್ಮನ್ನು ಕಾಪಾಡಿ ! ಕನ್ನಡಿಗ ಯುವತಿ ಮನವಿ 

25-02-22 07:48 pm       HK Desk news   ಕರ್ನಾಟಕ

ಉಕ್ರೇನ್ ಪರಿಸ್ಥಿತಿ ದಿನ ಕಳೆದಂತೆ ಹದಗೆಡುತ್ತಿದೆ. ಎರಡು ದಿನದಿಂದ ಮೆಟ್ರೋ ಸ್ಟೇಶನಲ್ಲಿದ್ದೇವೆ. ಬಾಂಬ್ ಪ್ರೊಟೆಕ್ಟರ್ ಇದೆ, ಸುರಕ್ಷಿತ ಎಂದಿದ್ದಾರೆ. ಏರ್ ಬೇಸ್ ಗಳನ್ನು ರಷ್ಯಾ ಪಡೆ ಆಕ್ರಮಿಸಿಕೊಂಡಿದೆ.

ಚಾಮರಾಜನಗರ, ಫೆ.25 : ಉಕ್ರೇನ್ ಪರಿಸ್ಥಿತಿ ದಿನ ಕಳೆದಂತೆ ಹದಗೆಡುತ್ತಿದೆ. ಎರಡು ದಿನದಿಂದ ಮೆಟ್ರೋ ಸ್ಟೇಶನಲ್ಲಿದ್ದೇವೆ. ಬಾಂಬ್ ಪ್ರೊಟೆಕ್ಟರ್ ಇದೆ, ಸುರಕ್ಷಿತ ಎಂದಿದ್ದಾರೆ. ಏರ್ ಬೇಸ್ ಗಳನ್ನು ರಷ್ಯಾ ಪಡೆ ಆಕ್ರಮಿಸಿಕೊಂಡಿದೆ. ನಮ್ಮನ್ನು ಭಾರತ ಸರಕಾರವೇ ಪಾರು ಮಾಡಬೇಕು ಎಂದು ಚಾಮರಾಜನಗರ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಕಾವ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ. 

ನಮ್ಮನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಕಳೆದೆರಡು ದಿನದಿಂದ ಇಲ್ಲಿನ ಮೇಟ್ರೋ ಸ್ಟೇಷನ್ ನಲ್ಲಿದ್ದೇವೆ. ಮೆಟ್ರೋ ರೈಲು ನಿಲ್ಲಿಸಲಾಗಿದೆ. ಇಲ್ಲಿ ಬಾಂಬ್ ಪ್ರೊಟೆಕ್ಟರ್ ಇದೆ, ಇದು ಸುರಕ್ಷಿತ ಎಂದು ಮಿಲಿಟರಿಯವರು ಹೇಳಿದ್ದು ಇಲ್ಲೇ ಇದ್ದೇವೆ. ಈಗಾಗಲೇ ನೀರು ಸಿಕ್ತಿಲ್ಲ , ಯುದ್ದ ಘೋಷಣೆ ಮುನ್ನವೇ ಮಾಹಿತಿ ಕೊಟ್ಟಿದ್ರು. 

Russia attacks Ukraine: Is this World War III? - BusinessToday

ದಿನಸಿ ಸಾಮಾನುಗಳನ್ನು ಶೇಖರಿಸಿಕೊಳ್ಳಿ ಎಂದು ಉಕ್ರೇನ್ ಆಡಳಿತ ಮೊದಲೇ ತಿಳಿಸಿತ್ತು. ಸದ್ಯ ಎಲ್ಲವನ್ನೂ ಶೇಖರಣೆ ಮಾಡಿದ್ದೇವೆ. ರಷ್ಯಾದವರು ಉಕ್ರೇನ್ ಏರ್ ಸ್ಪೇಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ವಿಮಾನ ನಿಲ್ದಾಣಗಳೆಲ್ಲವೂ ರಷ್ಯಾದವರ ಹಿಡಿತದಲ್ಲಿವೆ. ಹೀಗಾಗಿ ಭಾರತ ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕಿದೆ ಎಂದು ಉಕ್ರೇನ್ ನಿಂದ ಚಾಮರಾಜನಗರದ ವೈದ್ಯಕೀಯ ವಿದ್ಯಾರ್ಥಿನಿ ಕಾವ್ಯ ಮನವಿ ಮಾಡಿದ್ದಾರೆ. ‌

Chamrajnagara girl stranded in Ukraine cries for help from indian government, says there is scarcity for water.