ಹಿಜಾಬ್ ವಿಚಾರಣೆ ಅಂತ್ಯ ; 11 ದಿನಗಳ ವಾದ- ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ ನ್ಯಾಯಪೀಠ, ಮುಂದಿನ ವಾರವೇ ತೀರ್ಪು ಸಾಧ್ಯತೆ ! 

25-02-22 10:19 pm       Bengaluru Correspondent   ಕರ್ನಾಟಕ

ಉಡುಪಿ ಕಾಲೇಜಿನಲ್ಲಿ ವಿವಾದ ಉಂಟಾದ ಬಳಿಕ ಹಿಜಾಬ್ ಧರಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತ ವಿಚಾರಣೆಯನ್ನ ಹೈಕೋರ್ಟ್ ಕಡೆಗೂ ಮುಕ್ತಾಯಗೊಳಿಸಿದೆ.

ಬೆಂಗಳೂರು, ಫೆ.25 : ಉಡುಪಿ ಕಾಲೇಜಿನಲ್ಲಿ ವಿವಾದ ಉಂಟಾದ ಬಳಿಕ ಹಿಜಾಬ್ ಧರಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತ ವಿಚಾರಣೆಯನ್ನ ಹೈಕೋರ್ಟ್ ಕಡೆಗೂ ಮುಕ್ತಾಯಗೊಳಿಸಿದೆ. 11 ದಿನಗಳಿಂದ ನಿರಂತರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಹೈಕೋರ್ಟ್ ತ್ರಿಸದಸ್ಯ ಪೀಠ ಇಂದು ಅರ್ಜಿದಾರರು ಹಾಗೂ ಪ್ರತಿವಾದಿಗಳ ವಾದ ಆಲಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. 

11 ದಿನಗಳಿಂದ ನಿರಂತರವಾಗಿ ಅರ್ಜಿದಾರರ ಪರ ವಕೀಲರು ಹಾಗೂ ಶಿಕ್ಷಕರ ಪರ ವಕೀಲರು, ಕಾಲೇಜು ಆಡಳಿತ ಮಂಡಳಿ ಪರ ವಕೀಲರ ವಾದ ಹಾಗೂ ಸರ್ಕಾರದ ಪರ ನಡೆಸಿದ ಅಡ್ವೊಕೇಟ್ ಜನರಲ್  ಪ್ರತಿವಾದ ಆಲಿಸಿದ ಹೈಕೋರ್ಟ್ ತ್ರಿಸದಸ್ಯ ಪೀಠ ಅಂತಿಮವಾಗಿ ಇಂದು ಪಿಐಎಲ್ ಸಲ್ಲಿಸಿದ್ದ ವಕೀಲರಿಗೆ ವಾದ ಮಂಡಿಸಲು ಅವಕಾಶ ಮಾಡಿಕೊಟ್ಟಿತ್ತು.

Hijab Row Highlights: Karnataka High Court Hearing Today

ಈ ಹಿನ್ನೆಲೆ ರೆಹಮತ್ತುಲ್ಲಾ ಕೊತ್ವಾಲ್ ಹಿಜಾಬ್ ಧರಿಸೋದಕ್ಕೆ ಅವಕಾಶ ಕೋರಿ ವಾದ ಮಂಡಿಸಿದ್ರು. ಜೊತೆಗೆ ಹಿರಿಯ ವಕೀಲರಾದ ರವಿವರ್ಮಕುಮಾರ್ ಕೂಡ ವಾದ ಮಂಡಿಸಿದರು.‌ ಕಾಲೇಜು ಅಭಿವೃದ್ದಿ ಸಮಿತಿಗೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ. ಹಾಗೆಂದು ಸರ್ಕಾರ ತನ್ನ ಅಧಿಕಾರವನ್ನು ಸಿಡಿಸಿಗೆ ಹಸ್ತಾಂತರಿಸಲು ಸಾಧ್ಯವಿಲ್ಲ. ಸಿಡಿಸಿಯ ಇತರೇ ಸದಸ್ಯರನ್ನು ಶಾಸಕರೇ ಆಯ್ಕೆ ಮಾಡುತ್ತಾರೆ. ಕಾಲೇಜುಗಳಲ್ಲಿ 12 ಜನರ ಸಮಿತಿಯಲ್ಲಿ 11 ಮಂದಿ ಶಾಸಕರ ಕಡೆಯವರೇ ಇದ್ದು ಶಾಸಕರ ತೀರ್ಮಾನವನ್ನು ಜಾರಿ ಮಾಡುವುದಷ್ಟೇ ಇವರ ಕೆಲಸ. ಶಾಸಕರಿಗೆ ಕಾಲೇಜಿನ ಆಡಳಿತ ನೀಡುವುದೇ ಕಾನೂನುಬಾಹಿರ ಎಂದು ರವಿವರ್ಮ ಕುಮಾರ್ ವಾದಿಸಿದರು. 

ಇದಾದ ಬಳಿಕ ಹಿರಿಯ ವಕೀಲ ಬಾಲನ್ ಸಹ ಹಿಜಾಬ್ ಪರ  ವಾದ ಮಂಡಿಸಿದ್ದು, ವಿಷಯ ಡೈವರ್ಟ್ ಮಾಡಿದ ಹಿನ್ನೆಲೆಯಲ್ಲಿ ಬಾಲನ್ ಅರ್ಜಿಯನ್ನ ವಜಾಗೊಳಿಸಿದ ನ್ಯಾಯಾಲಯ ಮತ್ತೊಬ್ಬ ಅರ್ಜಿದಾರರಾದ ಸುಭಾಷ್ ಝಾಗೆ ವಾದ ಮಂಡಿಸಲು ಅವಕಾಶ ಮಾಡಿಕೊಟ್ಟಿತ್ತು. ಕೊಟ್ಟ ಅಲ್ಪ ಸಮಯದಲ್ಲಿ ಅಲಹಾಬಾದ್, ಕೇರಳ ಹಾಗೂ ಬಾಂಬೆ ಹೈಕೋರ್ಟ್ ತೀರ್ಪುಗಳನ್ನ ಉಲ್ಲೇಖಿಸಿದ ಸುಭಾಷ್ ಝಾ ಸಮವಸ್ತ್ರ ಹಾಗೂ ಹಿಜಾಬ್ ಬಗ್ಗೆ ಕೆಲವು ದಾಖಲೆಗಳನ್ನ ಸಲ್ಲಿಸಿ ವಾದ ಮಂಡಿಸಿದ್ರು. ಹೀಗೆ ಸರಿ ಸುಮಾರು ಎರಡುವರೆ ಗಂಟೆಗಳ ಕಾಲ ನಡೆದ ವಾದ ಪ್ರತಿವಾದ ಆಲಿಸಿದ ಬಳಿಕ ಹೈಕೋರ್ಟ್ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆ ಮುಕ್ತಾಯಗೊಳಿಸುವುದಾಗಿ ಹೇಳಿದ್ದು ತೀರ್ಪನ್ನ ಕಾಯ್ದಿರಿಸಿದೆ. ಇದಲ್ಲದೆ, ಕೆಲವು ಮಧ್ಯಂತರ ಅರ್ಜಿದಾರರಿಗೆ ಲಿಖಿತ ವಾದ ಮಂಡಿಸಲು ಅವಕಾಶ ನೀಡಿದ್ದು, ಅವುಗಳ ಪರಿಶೀಲನೆ ಬಳಿಕ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

The Karnataka High Court reserved its judgment in the hijab case after 11 days of back-to-back hearing on Friday. The hearing for the hijab case resumed at 2:30 pm in the Karnataka High Court.