ಮನೆ ಬಳಿಯಲ್ಲೇ ಬಾಂಬು ಬೀಳುತ್ತಿದೆ, ದಯವಿಟ್ಟು ನಮ್ಮನ್ನು ಕಾಪಾಡಿ ; ಭಾರತ ಸರಕಾರಕ್ಕೆ ಬಾಗಲಕೋಟ ಯುವತಿ ಅಳಲು 

26-02-22 11:47 am       HK Desk news   ಕರ್ನಾಟಕ

ಉಕ್ರೇನ್ ಮೇಲೆ ನಿರಂತರವಾಗಿ ರಷ್ಯಾ ಪಡೆಗಳು ಬಾಂಬ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಕನ್ನಡಿಗ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.

ಬಾಗಲಕೋಟ, ಫೆ.26 : ಉಕ್ರೇನ್ ಮೇಲೆ ನಿರಂತರವಾಗಿ ರಷ್ಯಾ ಪಡೆಗಳು ಬಾಂಬ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಕನ್ನಡಿಗ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಉಕ್ರೇನಿನ ಪೂರ್ವ ಭಾಗದ ಖಾರ್ಕೀವ್ ನಗರದಲ್ಲಿ ಸಿಲುಕಿರುವ ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿನಿ ಅಪೂರ್ವಾ ತನ್ನ ಹೆತ್ತವರಿಗೆ ವಾಟ್ಸಾಪ್ ಸಂದೇಶ ಮಾಡಿದ್ದು ಭಯ, ಆತಂಕ ತೋಡಿಕೊಂಡಿದ್ದಾರೆ.‌

ತಂದೆ ಸಿದ್ದಲಿಂಗೇಶ್ ಅವರಿಗೆ ಶುಕ್ರವಾರ ರಾತ್ರಿ ವಾಟ್ಸಾಪ್ ಸಂದೇಶ ಕಳಿಸಿರುವ ಅಪೂರ್ವಾ ಕದಂಪುರ, ನಮ್ಮನ್ನು ಭಾರತ ಸರಕಾರ ರಕ್ಷಣೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.  

If Russia attacks Ukraine, US expects India's support - Oneindia News

ಭಾರತೀಯ ಸಮಯ 10.56 ರಾತ್ರಿ. ನಾವು ಇರುವ ಕಾರ್ಕೇವ್  ನಗರದಲ್ಲಿ ನಮ್ಮ ಕಟ್ಟಡದ ಹತ್ತಿರವೇ ಬಾಂಬ್ ಹಾಕುತ್ತಿದ್ದಾರೆ. ನಾವು ಅಪಾಯದಲ್ಲಿ ಇದ್ದೇವೆ ,ನಮ್ಮ ಫೋನ್ಗಳನ್ನು ಫ್ಲೈಟ್ ಮೋಡಿನಲ್ಲಿ ಇಡಲು ಹೇಳಿದ್ದಾರೆ. ಫೋನ್ ಸಂಪರ್ಕ ಆಗದಿದ್ದರೆ ಭಯ ಪಡಬೇಡಿ. ಆದರೆ ನಮ್ಮ ಭಾರತ ಸರ್ಕಾರಕ್ಕೆ ನಮ್ಮ ಮನವಿ ಏನೆಂದರೆ, ನಾವು ಹೆಚ್ಚು ವಿದ್ಯಾರ್ಥಿಗಳು ಇರುವುದು ಉಕ್ರೇನಿನ ಪೂರ್ವ ಭಾಗ ಕಾರ್ಕೇವ್ ನಗರದಲ್ಲಿ. ನಮ್ಮನ್ನು ಪೋಲಾಂಡ್ ಮುಖಾಂತರ ಕೊಂಡೊಯ್ಯಲು ಯತ್ನಿಸುವುದು ತುಂಬಾ ಕಷ್ಟ. ಅಲ್ಲಿ‌ಂದ ಹೋದರೆ ಸುಮಾರು 1000- 1500 ಕಿಲೋಮೀಟರ್ ದೂರ ಆಗುತ್ತದೆ. 

40 killed as Russia attacks Ukraine; invites widespread condemnation  (Round-Up) – The Munsif Daily

ಅದರ ಬದಲು ನಮ್ಮನ್ನು ರೊಮೇನಿಯಾ ಮುಖಾಂತರವೇ ಸ್ಥಳಾಂತರ ಮಾಡಿದ್ರೆ ಸರಿ ಅನ್ಸುತ್ತೆ. ದಯವಿಟ್ಟು ನಮ್ಮ ಸರ್ಕಾರಕ್ಕೆ ನಮ್ಮ ಅಭಿಪ್ರಾಯ ತಲುಪಿಸಿ. ಇಲ್ಲಿ ನಾವು 8000 ಜನ ವಿದ್ಯಾರ್ಥಿಗಳಿದ್ದೇವೆ. ಯಾವುದೇ ಸಾರಿಗೆ ವ್ಯವಸ್ಥೆ ಸರಿ ಇಲ್ಲ.. ದಯವಿಟ್ಟು ನಮ್ಮ ಮನವಿಯನ್ನು ಭಾರತೀಯ ರಾಯಭಾರಿ ಕಚೇರಿಗೂ ತಲುಪಿಸಿ ಎಂದು ಅಪೂರ್ವ ಮನವಿ ಮಾಡಿಕೊಂಡಿದ್ದಾರೆ.‌

ಅಲ್ಲದೆ, ಭಾರತ ಸರಕಾರಕ್ಕೆ ತಮ್ಮ ಮನವಿ ತಲುಪಿಸುವಂತೆ ಕೋರಿದ್ದಾರೆ. ಅಪೂರ್ವಾ ಬಾಗಲಕೋಟೆಯ ವಿದ್ಯಾಗಿರಿ ನಿವಾಸಿಯಾಗಿದ್ದು ಎಂಬಿಬಿ ಎಸ್ ಪ್ರಥಮ ವರ್ಷದ ವಿದ್ಯಾರ್ಥಿನಿ. ಇದೇ ರೀತಿ ಬನಹಟ್ಟಿ ಮೂಲದ  ಕಿರಣ ಸವದಿ ಕೂಡ ಮನವಿ ಮಾಡಿದ್ದಾರೆ. ಕಿರಣ ಸವದಿ ಕೂಡ ಅದೇ ಕಾರ್ಕೀವ್ ನಗರದಲ್ಲಿದ್ದಾರೆ.

Bagalkot girl cries for help from Ukraine pleads indian govt to save her