ರಾಜ್ಯದಲ್ಲಿ ಮೆಡಿಕಲ್ ಕಾಲೇಜು ಹೆಸರಲ್ಲಿ ಲೂಟಿ ನಡೆಸುತ್ತಿದ್ದಾರೆ, ಈ ಮಾಫಿಯಾಗಳೇ ನವೀನ್ ಜೀವ ತೆಗೆದಿದೆ ; ಮುತಾಲಿಕ್ ಆಕ್ರೋಶ 

02-03-22 10:55 pm       HK Desk news   ಕರ್ನಾಟಕ

ನಮ್ಮ ಕರ್ನಾಟಕದಲ್ಲಿ ಮೆಡಿಕಲ್ ಇಂಜಿನಿಯರಿಂಗ್ ಕಾಲೇಜು ಹೆಸರಲ್ಲಿ ಲೂಟಿ ಹೊಡೆಯುತ್ತಿದ್ದಾರೆ.‌ ಶಿಕ್ಷಣಕ್ಕಾಗಿ ಮೆಡಿಕಲ್ ಕಾಲೇಜು ತೆಗೆದಿಲ್ಲ, ಲೂಟಿ ಮಾಡಲು ತೆಗೆದಿದ್ದಾರೆ.

ಹಾವೇರಿ, ಮಾ.2: ನಮ್ಮ ಕರ್ನಾಟಕದಲ್ಲಿ ಮೆಡಿಕಲ್ ಇಂಜಿನಿಯರಿಂಗ್ ಕಾಲೇಜು ಹೆಸರಲ್ಲಿ ಲೂಟಿ ಹೊಡೆಯುತ್ತಿದ್ದಾರೆ.‌ ಶಿಕ್ಷಣಕ್ಕಾಗಿ ಮೆಡಿಕಲ್ ಕಾಲೇಜು ತೆಗೆದಿಲ್ಲ, ಲೂಟಿ ಮಾಡಲು ತೆಗೆದಿದ್ದಾರೆ. ಇಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಮಾಡಲು ಸೌಲತ್ತು ಇಲ್ಲ.‌ ಇದ್ದರೂ ಕೋಟಿಗಟ್ಟಲೆ ಹಣ ಬೇಕು. ಮೆಡಿಕಲ್ ಕಾಲೇಜು ನಡೆಸುತ್ತಿರುವವರೇ ಇಂದು ನವೀನ್ ಜೀವ ತೆಗೆದಿದ್ದಾರೆ ಎಂದು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಹರಿಹಾಯ್ದಿದ್ದಾರೆ. 

ಯುಕ್ರೇನಲ್ಲಿ ರಷ್ಯಾ ಬಾಂಬ್ ದಾಳಿಗೆ ಬಲಿಯಾದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಮೆಡಿಕಲ್ ವಿದ್ಯಾರ್ಥಿ ನವೀನ್ ಮನೆಗೆ ಭೇಟಿಯಿತ್ತು ಮನೆಯವರಿಗೆ ಸಾಂತ್ವನ ಹೇಳಿ ಸರಕಾರ, ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

Russia Ukraine War: इथली परिस्थिती भीषण, मला मायदेशी परतायचंय; दोन  दिवसांपूर्वी Video Call अन् आज मृत्यू - Marathi News | Naveen Shekharappa,  who died in Ukraine, had told his family that he

ನವೀನ್ ಸ್ವರ್ಗಸ್ಥನಾಗಿದ್ದಾನೆ, ಈ ಘಟನೆ ನಡೆಯಬಾರದಾಗಿತ್ತು. ಯಾರದೋ ದೇಶದ ಯುದ್ದದಲ್ಲಿ ನಮ್ಮವರು ಬಲಿಯಾಗುವಂತದ್ದು ದುರಂತ. ತಮ್ಮ ದೇಶಕ್ಕೆ ಬಂದವರನ್ನು ಕಾಪಾಡುವುದು ಅವರ ಕರ್ತವ್ಯ.‌ ಬೇರೆ ದೇಶಕ್ಕೆ ಹೋದವರನ್ನು ಕರೆ ತರುವುದು ನಮ್ಮ ಕರ್ತವ್ಯ.‌ ರಾಜ್ಯದ ಕೇಂದ್ರ ಮಂತ್ರಿಗಳು ಮತ್ತು ಇದೇ ಜಿಲ್ಲೆಯ ಸಿಎಂಗೆ ಈ ಬಗ್ಗೆ ಆಗ್ರಹ ಮಾಡುತ್ತೇನೆ.‌ ಉಕ್ರೇನಲ್ಲಿರುವ ಮಕ್ಕಳನ್ನು ಜೊತೆಗೆ ಅಲ್ಲಿರುವ ಜನರನ್ನು ಕರೆತರವುದು ವೇಗವಾಗಿ ಆಗಬೇಕು.‌ ಇದಕ್ಕಾಗಿ ಏನು ಮಾಡಬೇಕೋ ಅದನ್ನು ಮಾಡಿ ಎಂದು ಆಗ್ರಹಿಸಿದರು. 

ಎಂಬಿಬಿಎಸ್ ಕಲಿತ ರ್ಯಾಂಕ್ ಸ್ಟೂಡೆಂಟನ್ನು ಕಳೆದುಕೊಂಡಿದ್ದು ನಮ್ಮ ಸಮಾಜದ ದುರಂತ. ಇನ್ನು ಒಂದೇ ವರ್ಷದಲ್ಲಿ ವೈದ್ಯನಾಗಬೇಕಾದವನು ಇಲ್ಲ ಎಂದರೆ ಕುಟುಂಬಕ್ಕೆ ನೋವು ಆಗುತ್ತೆ. ಆದರೆ ನವೀನ್ ಮೃತದೇಹವನ್ನಾದ್ರು ಕೇಂದ್ರ ಸರಕಾರ ತಂದು ಕೊಡಬೇಕು.‌ ಅವರ ಸಹೋದರ ಹರ್ಷನಿಗೆ ಸರ್ಕಾರಿ ನೌಕರಿ ಕೋಡಬೇಕು. ಇಲ್ಲವಾದಲ್ಲಿ ಶ್ರೀರಾಮ್ ಸೇನೆ ಉಗ್ರ ಹೋರಾಟಕ್ಕೆ ಮುಂದಾಗುತ್ತದೆ ಎಂದು ಎಚ್ಚರಿಸಿದರು. ‌

Pramod Muthalik slams medical college, says college responsible for the death of Naveen in Ukraine