ಉಕ್ರೇನ್ ಖಾಲಿ ಮಾಡಲು ರಾಯಭಾರ ಕಚೇರಿ ಸೂಚನೆ ; ಅನ್ನ, ನೀರಿಲ್ಲದೆ ಜೀವ ಕೈಯಲ್ಲಿ ಹಿಡಿದು 32 ಕಿಮೀ ನಡೆದುಕೊಂಡೇ ಬಂದ ವಿದ್ಯಾರ್ಥಿಗಳು ! ತೊಳಲಾಟ ಹೇಳಿಕೊಂಡ ಕನ್ನಡದ ಯುವಕ 

03-03-22 03:18 pm       HK Desk news   ಕರ್ನಾಟಕ

ಉಕ್ರೇನಿನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಅಲ್ಲಿಂದ ಬಿಟ್ಟು ಬರಲೇಬೇಕು ಎಂದು ಭಾರತದ ರಾಯಭಾರ ಕಚೇರಿ ಸೂಚನೆ ನೀಡುತ್ತಲೇ ಬಂಕರಿನಡಿ ಅಡಗಿಕೊಂಡಿದ್ದ ವಿದ್ಯಾರ್ಥಿಗಳು ಅಪಾಯ ಲೆಕ್ಕಿಸದೆ ನಡೆದುಕೊಂಡೇ ಬರುತ್ತಿದ್ದಾರೆ.

ಬಾಗಲಕೋಟ, ಮಾ.3: ಉಕ್ರೇನಿನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಅಲ್ಲಿಂದ ಬಿಟ್ಟು ಬರಲೇಬೇಕು ಎಂದು ಭಾರತದ ರಾಯಭಾರ ಕಚೇರಿ ಸೂಚನೆ ನೀಡುತ್ತಲೇ ಬಂಕರಿನಡಿ ಅಡಗಿಕೊಂಡಿದ್ದ ವಿದ್ಯಾರ್ಥಿಗಳು ಅಪಾಯ ಲೆಕ್ಕಿಸದೆ ನಡೆದುಕೊಂಡೇ ಬರುತ್ತಿದ್ದಾರೆ. ಆದರೆ, ಖಾರ್ಕೀವ್ ನಗರದ ಆಸುಪಾಸಿನ ನಿಗದಿತ ಪ್ರದೇಶಗಳಿಗೆ ಬರಲು ಸೂಚನೆ ನೀಡಿದ್ದರೂ, ಉಕ್ರೇನ್ ಮಿಲಿಟರಿಯೇ ತಡೆಯುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಆತಂಕ ತೋಡಿಕೊಂಡಿದ್ದಾರೆ. 

ಬುಧವಾರ ಖಾರ್ಕಿವ್ ನಗರದಿಂದ ಭಾರತದ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು 20 ಕಿಮೀ ದೂರಕ್ಕೆ ನಡೆಯುತ್ತಾ ಬಂದಿದ್ದಾರೆ.‌ ಬಾಗಲಕೋಟೆಯ ಕಿರಣ ಸವದಿ ಸೇರಿದಂತೆ ಹಲವಾರು ಕನ್ನಡಿಗರು ಹಾಗೂ ಭಾರತೀಯ ಒಟ್ಟು 800 ರಷ್ಟು ವಿದ್ಯಾರ್ಥಿಗಳು ಇದ್ದರು.‌

Walk if needed but leave Kharkiv today at all costs, India tells citizens  in all-caps advisory - World News

ಆದರೆ ಖಾರ್ಕಿವ್ ರೇಲ್ವೆ ನಿಲ್ದಾಣದಲ್ಲಿ ಟ್ರೇನ್ ಹತ್ತಲು ಅಲ್ಲಿನ ಮಿಲಿಟರಿ ಅವಕಾಶ ನೀಡಿರಲಿಲ್ಲ. ಮೊದಲ ಆದ್ಯತೆ ಉಕ್ರೇನ್ ದೇಶದವರಿಗೇ ನೀಡಲಾಗಿತ್ತು. ಅಲ್ಲಿನ ಜನರೇ ಖಾರ್ಕೀವ್ ನಗರ ಬಿಟ್ಟು ಹೊರ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಉಕ್ರೇನ್ ಪ್ರಜೆಗಳು ಟ್ರೇನ್ ಹತ್ತಿದ ಬಳಿಕ ಜಾಗ ಇದ್ದರೆ ಭಾರತದ ವಿದ್ಯಾರ್ಥಿನಿಯರಿಗೆ ಕೊಡಲಾಗಿತ್ತು. ಆನಂತರ ಸ್ಥಳಾವಕಾಶ ಇದ್ದರೆ ಮಾತ್ರ‌ ಇತರ ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟಿದ್ದರು. ಹೆಚ್ಚು ಜನರು ಟ್ರೇನ್ ಹತ್ತೋದಕ್ಕೆ ಮುಂದಾದರೆ ಉಕ್ರೇನ್ ಯೋಧರು ಗಾಳಿಯಲ್ಲಿ ಗುಂಡು ಹಾರಿಸಿ ಹೆದರಿಸುತ್ತಿದ್ದರು ಎಂದು ಕಿರಣ ಸವದಿ ಅಲ್ಲಿನ ಸ್ಥಿತಿಯನ್ನು ವಿವರಿಸಿದ್ದಾರೆ. 

Leave Kyiv urgently': Indian embassy issues fresh advisory for Indians amid  Russia-Ukraine war | India News | Zee News

ಸಂಜೆ ಹೊತ್ತಿಗೆ ಖಾರ್ಕಿವ್ ಬಿಡಲೇಬೇಕು. ಇಲ್ಲದಿದ್ದರೆ ಅಪಾಯ ಎಂದು ಎಂಬಸಿಯಿಂದ ಸೂಚನೆ ನೀಡಲಾಗಿತ್ತು. ಆದ್ದರಿಂದ 800 ಜನರು ಖಾರ್ಕೀವ್ ನಿಂದ 20 ಕಿಮೀ ದೂರದ ಪೆಸೊಚಿನ್ ಪ್ರದೇಶಕ್ಕೆ ನಡೆದುಕೊಂಡು ಬಂದಿದ್ದೇವೆ. ಅದಕ್ಕೂ ಮೊದಲು ಹಾಸ್ಟೆಲ್ ಬಂಕರ್ ನಿಂದ ಖಾರ್ಕಿವ್ ರೇಲ್ವೆ ನಿಲ್ದಾಣಕ್ಕೆ 12 ಕಿಮೀ ನಡೆದುಕೊಂಡು ಬಂದಿದ್ದೆವು. ಬಹಳ ಭಯ ಆಗುತ್ತಿತ್ತು. ನಡೆದುಕೊಂಡು ಬರುವ ವೇಳೆ ಬದುಕುತ್ತೇವೋ ಇಲ್ಲವೋ ಎನಿಸಿತ್ತು. ಹೊಟ್ಟೆ ಹಸಿವು, ನೀರಡಿಕೆ ಮಧ್ಯೆ ನಡೆದು ಬಂದಿದ್ದೇವೆ. ಎಷ್ಟೋ ಜನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ದಾರಿಯುದ್ದಕ್ಕೂ ಅಳುತ್ತಾ ಬಂದಿದ್ದಾರೆ. ಬಹುತೇಕ ಎಲ್ಲರೂ ಜೀವ ಕೈಯಲ್ಲಿ ಹಿಡಿದುಕೊಂಡು ಅಳುತ್ತಾ ಬಂದಿದ್ದೇವೆ. ಖಾರ್ಕಿವ್ ನಲ್ಲಿ ನರಕ ಅನುಭವಿಸಿದ್ದೇವೆ. 

Conflict in Ukraine disrupting entire generation of children, says UNICEF |  | UN News

ಖಾರ್ಕಿವ್ ರೇಲ್ವೆ ನಿಲ್ದಾಣದಿಂದ ಪೆಸೊಚಿನ್ ಗೆ ಬರುವಾಗ ಉಕ್ರೇನ್ ಯೋಧರು ಸಹಾಯ ಮಾಡಿದರು. ಎಲ್ಲರಿಗೂ ಬೇಗ ಹೋಗಿ ಎಂದು ಮಾರ್ಗ ತೋರಿಸಿ ಸಹಕರಿಸಿದರು. ಸದ್ಯ ಪೆಸೊಚಿನ್ ನಗರದ ಒಂದು ಹೊಟೆಲ್ ನಲ್ಲಿ ಇದ್ದೇವೆ. ಎಂಬಸಿ ಅಧಿಕಾರಿಗಳ ಸೂಚನೆ ಮೇರೆಗೆ ಇದೇವೆ. ಇಲ್ಲಿ ಯಾವುದೇ ಅಪಾಯವಿಲ್ಲ ಸೇಫ್ ಜಾಗ ಇದೆ. ಇವಾಗ ಸ್ವಲ್ಪ ನೆಮ್ಮದಿ ಸಿಕ್ಕಿದೆ.. ಊಟದ ವ್ಯವಸ್ಥೆ ಮಾಡೋದಾಗಿ ಹೇಳಿದಾರೆ. ಸದ್ಯಕ್ಕೆ ಬ್ರೆಡ್ ಸ್ನ್ಯಾಕ್ಸ್ ತಿನ್ನುತ್ತೇವೆ. ಇವಾಗ ಸ್ವಲ್ಪ ನೆಮ್ಮದಿ, ನಿದ್ದೆ ಮಾಡುತ್ತೇವೆ. ಇಲ್ಲಿಂದ ರಷ್ಟಾ ಗಡಿ ಕೇವಲ 7-8 ಕಿಮೀ ಮಾತ್ರ. ನಮ್ಮನ್ನು ಆದಷ್ಟು ಬೇಗ ಸ್ಥಳಾಂತರ ಮಾಡಬೇಕೆಂದು ಮನವಿ ಮಾಡಿಕೊಳ್ತೀವಿ.‌ ಇಲ್ಲದಿದ್ದರೆ ಇಲ್ಲಿಯೂ ದಾಳಿ ಆಗಬಹುದು ಎಂದು ಕಿರಣ ಸವದಿ ಆತಂಕ ಹೇಳಿಕೊಂಡಿದ್ದಾರೆ. ಕಿರಣ ಸವದಿ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ನಾವಲಗಿ ಗ್ರಾಮದ ನಿವಾಸಿಯಾಗಿದ್ದು ಮೆಡಿಕಲ್ ವ್ಯಾಸಂಗಕ್ಕಾಗಿ ಉಕ್ರೇನ್ ತೆರಳಿದ್ದರು.

Karnataka students walk for almost 32 Kms in Ukraine, no food no water, cry for help.