ಉಕ್ರೇನ್​ನಲ್ಲಿ ಮೃತಪಟ್ಟ ಕನ್ನಡಿಗ  ನವೀನ್​ ; ಕುಟುಂಬಸ್ಥರನ್ನು ಭೇಟಿ ಮಾಡಿದ ಸಿಎಂ, 25 ಲಕ್ಷ ರೂ. ಪರಿಹಾರ ಘೋಷಣೆ ! 

05-03-22 09:07 pm       HK Desk news   ಕರ್ನಾಟಕ

ಉಕ್ರೇನ್​ನಲ್ಲಿ ಬಾಂಬ್​ ದಾಳಿಗೆ ಬಲಿಯಾದ ಜಿಲ್ಲೆಯ ನವೀನ್​ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಅಲ್ಲದೇ, ನವೀನ್​ ಅವರ ಹಿರಿಯ ಸಹೋದರನಿಗೆ ಉದ್ಯೋಗ ನೀಡುವ ಭರವಸೆಯನ್ನು ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ್ದಾರೆ.

ಹಾವೇರಿ, ಮಾ 05: ಉಕ್ರೇನ್​ನಲ್ಲಿ ಬಾಂಬ್​ ದಾಳಿಗೆ ಬಲಿಯಾದ ಜಿಲ್ಲೆಯ ನವೀನ್​ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಅಲ್ಲದೇ, ನವೀನ್​ ಅವರ ಹಿರಿಯ ಸಹೋದರನಿಗೆ ಉದ್ಯೋಗ ನೀಡುವ ಭರವಸೆಯನ್ನು ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ್ದಾರೆ.

ಇಂದು ನವೀನ್​ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬ್​ ದಾಳಿಗೆ ಉಕ್ರೇನ್​ನಲ್ಲಿ ಮೃತಪಟ್ಟ ರಾಜ್ಯದ ಯುವಕ ನವೀನ್​ ಪಾರ್ಥಿವ ಶರೀರವನ್ನು ತರಲು ಸರ್ವಪ್ರಯತ್ನ ಮಾಡಲಾಗುತ್ತಿದೆ. ಕೇಂದ್ರ ವಿದೇಶಾಂಗ ಸಚಿವರ ಜೊತೆಗೆ ಸಂಪರ್ಕದಲ್ಲಿದ್ದೇವೆ. ಅಲ್ಲಿ ಸುತ್ತಲೂ ಬಾಂಬಿಂಗ್ ಹೆಚ್ಚಾಗಿದೆ. ಹೀಗಾಗಿ ನವೀನ್​ ಮೃತದೇಹ ತರಲು ಆಗುತ್ತಿಲ್ಲ. ಇಂದು ಯುದ್ಧ ವಿರಾಮ ನೀಡಲಾಗಿದೆ. ಆದಷ್ಟು ಬೇಗ ಪಾರ್ಥಿವ ಶರೀರವನ್ನ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಉಕ್ರೇನ್​ನಲ್ಲಿ ಯುದ್ಧ ನಿಲ್ಲಲಿ ಎಂದು ಪ್ರಾರ್ಥಿಸಲಾಗುವುದು. ಅಲ್ಲಿ ಸಿಲುಕಿರುವ ಕನ್ನಡಿಗರು ನಡೆದುಕೊಂಡು ಬೇರೆ ದೇಶದ ಗಡಿಗಳಿಗೆ ಬಂದಿದ್ದಾರೆ. ಕೆಲವರು ಬಂಕರ್​ಗಳಲ್ಲಿದ್ದಾರೆ. ನಮ್ಮ ಜಿಲ್ಲೆಯಿಂದ 10 ಜನರು ಹೋಗಿದ್ದರು. ಐವರು ಬಂದಿದ್ದಾರೆ, ಉಳಿದ ಐವರನ್ನು ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಿಎಂ ಹೇಳಿದರು.

ಉಕ್ರೇನ್‌ನಲ್ಲಿ ಸಾವನ್ನಪ್ಪಿದ ನವೀನ್ ಮನೆಗೆ ಸಿಎಂ ಭೇಟಿ: 25 ಲಕ್ಷ ಪರಿಹಾರ ವಿತರಣೆ | CM  Basavaraj Bommai Visit Naveen House in Chalageri; Handed Over Rs 25 Lakh  Cheque to His Family - Kannada Oneindia

ನವೀನ್​ ಕುಟುಂಬಕ್ಕೆ 25 ಲಕ್ಷ ರೂ. ಚೆಕ್​ ವಿತರಣೆ: 

ಉಕ್ರೇನ್​ನಲ್ಲಿ ರಷ್ಯಾದ ಬಾಂಬ್​ ದಾಳಿಗೆ ಅಸುನೀಗಿದ ನವೀನ್ ಕುಟುಂಬಕ್ಕೆ ಸರ್ಕಾರದಿಂದ ​25 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅಲ್ಲದೇ, ಹಿರಿಯ ಸಹೋದರನಿಗೆ ಸೂಕ್ತ ಉದ್ಯೋಗ ನಿಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದರು.

ನವೀನ್​ ಪಾರ್ಥಿವ ಶರೀರ ತಾಯ್ನಾಡಿಗೆ ತರುವ ಹಾಗೂ ಅಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವುದು ನಮ್ಮ ಮುಂದಿರುವ 2 ದೊಡ್ಡ ಸವಾಲುಗಳು ಎಂದು ಸಿಎಂ ಬೊಮ್ಮಾಯಿ ಹೇಳಿದರು.

Chief Minister Basavaraj Bommai meets the family of Naveen SG, the Karnataka medical student who was killed in Ukraine recently. The Chief Minister handed over a cheque of Rs 25 lakh to the bereaved family members of the victim.