ಉತ್ತರದಲ್ಲಿ ಬಿಜೆಪಿಗೆ ಭರ್ಜರಿ ಜನಮತ ; ಕರ್ನಾಟಕದಲ್ಲಿ ಮತ್ತೆ ಬದಲಾವಣೆಯ ಗಾಳಿ, ತಿಂಗಳಾಂತ್ಯಕ್ಕೆ ರಾಜ್ಯ ಬಿಜೆಪಿ, ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಸಾಧ್ಯತೆ !  

10-03-22 03:52 pm       Bengaluru Correspondent   ಕರ್ನಾಟಕ

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಬಹುಮತ ಲಭಿಸಿರುವುದು ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯ ಸುಳಿವು ನೀಡಿದೆ. ಕಳೆದ ಬಾರಿ ರಾಜ್ಯದಲ್ಲಿ ನಾಯಕತ್ವ ಬದಲಾಗುತ್ತದೆ, ಸಂಪುಟಕ್ಕೆ ಸರ್ಜರಿಯಾಗುತ್ತದೆ ಎನ್ನುವ ಮಾತು ಕೇಳಿಬಂದಿತ್ತು. ಜನವರಿ ಆರಂಭದಲ್ಲಿ ಈ ರೀತಿಯ ಚರ್ಚೆ ನಡೆಯುತ್ತಿರುವಾಗಲೇ ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾಗಿತ್ತು.

ಬೆಂಗಳೂರು, ಮಾ.10: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಬಹುಮತ ಲಭಿಸಿರುವುದು ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯ ಸುಳಿವು ನೀಡಿದೆ. ಕಳೆದ ಬಾರಿ ರಾಜ್ಯದಲ್ಲಿ ನಾಯಕತ್ವ ಬದಲಾಗುತ್ತದೆ, ಸಂಪುಟಕ್ಕೆ ಸರ್ಜರಿಯಾಗುತ್ತದೆ ಎನ್ನುವ ಮಾತು ಕೇಳಿಬಂದಿತ್ತು. ಜನವರಿ ಆರಂಭದಲ್ಲಿ ಈ ರೀತಿಯ ಚರ್ಚೆ ನಡೆಯುತ್ತಿರುವಾಗಲೇ ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾಗಿತ್ತು. ಆಬಳಿಕ ರಾಜ್ಯ ಬಿಜೆಪಿಯ ಸರ್ಜರಿ ಸುದ್ದಿ ಉತ್ತರ ಪ್ರದೇಶ ಚುನಾವಣಾ ಫಲಿತಾಂಶದ ನಂತರ ಎನ್ನುವ ಮಾತುಗಳು ಕೇಳಿಬಂದಿದ್ದವು.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 250ಕ್ಕಿಂತ ಹೆಚ್ಚು ಸ್ಥಾನಗಳು ಲಭಿಸಿದರೆ ಮಾತ್ರ ಕರ್ನಾಟಕದಲ್ಲಿ ಸಂಪುಟ ಸರ್ಜರಿ, ರಾಜ್ಯ ಬಿಜೆಪಿ ನಾಯಕತ್ವಕ್ಕೆ ಸರ್ಜರಿ ಅನ್ನುವ ಮಾತುಗಳೂ ಇದ್ದವು. ಇದೀಗ ಉತ್ತರದಲ್ಲಿ ಬಿಜೆಪಿಗೆ ಭಾರೀ ಬಹುಮತ ಬಂದಿರುವುದರಿಂದ ಮುಂದಿನ ಚುನಾವಣೆ ದೃಷ್ಟಿಯಿಂದ ಕರ್ನಾಟಕದಲ್ಲಿ ಮೇಜರ್ ಸರ್ಜರಿ ಆಗೋದು ಪಕ್ಕಾ ಎನ್ನುವ ಮಾತು ಕೇಳಿಬರತೊಡಗಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರೂ ಸುಳಿವು ನೀಡಿದ್ದಾರೆ. ಕೆಲವರಿಗೆ ಅಧಿಕಾರದ ಮದ ತಲೆಗೇರಿದೆ. ಅಂಥವರ ಮದ ಇಳಿಯಬೇಕಿದ್ದರೆ ಸರ್ಜರಿ ಆಗಬೇಕು, ಚುನಾವಣೆ ದೃಷ್ಟಿಯಿಂದ ಕೇಂದ್ರ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

Nalin Kumar Kateel is Karnataka BJP chief | India News,The Indian Express

ಇದಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಗೆ ಕೇಳಿದ ಪ್ರಶ್ನೆಗೆ ರಾಜ್ಯ ಸರಕಾರದಲ್ಲಿ ಸಚಿವ ಸಂಪುಟಕ್ಕೆ ಸರ್ಜರಿ ಆಗುವ ಬಗ್ಗೆ ಸುಳಿವು ನೀಡಿದ್ದಾರೆ. ಈ ತಿಂಗಳ ಅಂತ್ಯದಲ್ಲಿಯೇ ಸಂಪುಟಕ್ಕೆ ಸರ್ಜರಿ ಆಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಹಾಗಾಗಿ, ಪಕ್ಷದಲ್ಲಿ ನಾಯಕರ ಬದಲಾವಣೆ ಆಗುತ್ತೋ, ಬಿಡುತ್ತೋ ಗೊತ್ತಿಲ್ಲ. ರಾಜ್ಯ ಸಚಿವ ಸಂಪುಟದಲ್ಲಿ ಮಾತ್ರ ಮೇಜರ್ ಸರ್ಜರಿ ಆಗೋದು ಖಚಿತ ಆಗಿದೆ. ಸಂಪುಟ ಪುನಾರಚನೆ ಆದಲ್ಲಿ ಹಿರಿಯ ಸಚಿವರಿಗೆ ಕೊಕ್ ನೀಡಿ ಸರಕಾರಕ್ಕೆ ಹೊಸಬರ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಕಂಡುಬಂದಿದೆ.

High command has final say on leadership change: Eshwarappa

ಇತ್ತೀಚೆಗೆ ತೀವ್ರ ವಿವಾದ, ಆಕ್ರೋಶಕ್ಕೆ ಗುರಿಯಾಗಿದ್ದ ಕೆ.ಎಸ್.ಈಶ್ವರಪ್ಪ ಸೇರಿದಂತೆ ಕೆಲವು ಹಿರಿಯರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ, ಅವರಿಗೆ ಪಕ್ಷದ ಜವಾಬ್ದಾರಿ ನೀಡುವ ಸಾಧ್ಯತೆಯಿದೆ. ಅದರ ಜೊತೆಗೆ, ಸಂಪುಟ ಸ್ಥಾನದ ನಿರೀಕ್ಷೆಯಲ್ಲಿರುವ ವಿಜಯೇಂದ್ರ, ಯೋಗೀಶ್ವರ್, ಯತ್ನಾಳ್ ಸೇರಿದಂತೆ ಕೆಲವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ. ಈಗಾಗ್ಲೇ ಹಾಲಿ ಸರಕಾರದಲ್ಲಿ ನಾಲ್ಕು ಸಚಿವ ಸ್ಥಾನಗಳು ಖಾಲಿಯಿದ್ದು ಅವು ಸೇರಿದಂತೆ ಬದಲಾದ ಸ್ಥಾನಗಳಿಗೆ ಹೊಸಬರ ಸೇರ್ಪಡೆ ಆಗಲಿದೆ. ಆರು ತಿಂಗಳ ಹಿಂದೆ ಸಿಎಂ ಆಗಿ ಬಸವರಾಜ ಬೊಮ್ಮಾಯಿ ನೇಮಕ ಆಗಿದ್ದಾಗ, ಕೆಲವರಿಗೆ ಕೊಕ್ ನೀಡಲಾಗಿತ್ತು. ಕೆಲವು ಹೊಸಬರಿಗೆ ಅವಕಾಶ ನೀಡಲಾಗಿತ್ತು. ಈಗ ಚುನಾವಣೆಗೆ ಒಂದು ವರ್ಷ ಇರುವುದರಿಂದ ಅಳೆದು ತೂಗಿ ಪಕ್ಷ ಮತ್ತು ಸಚಿವ ಸ್ಥಾನದ ಮೂಲಕ ಸರಕಾರದ ಇಮೇಜ್ ಹೆಚ್ಚಿಸುವ ಕಸರತ್ತನ್ನು ಕೇಂದ್ರ ನಾಯಕರು ಮಾಡಲಿದ್ದಾರೆ.

Leaving no stone unturned to bring back our students from Ukraine': PM Modi  | Latest News India - Hindustan Times

ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಬದಲಾಗುತ್ತಾ ?

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸಲಾಗುತ್ತದೆ ಅನ್ನುವ ಮಾತುಗಳು ಕಳೆದ ಡಿಸೆಂಬರ್ ತಿಂಗಳಲ್ಲಿ ದಟ್ಟವಾಗಿದ್ದವು. ಬಿಟ್ ಕಾಯಿನ್ ಹಗರಣದಲ್ಲಿ ಪ್ರಮುಖವಾಗಿ ಆರೋಪ ಕೇಳಿಬಂದಿದ್ದ ನಳಿನ್ ಕುಮಾರ್ ವಿರುದ್ಧ ಬಿಜೆಪಿ ಒಳಗಿನವರೇ ಪ್ರಧಾನಿ ಮೋದಿಗೆ ದೂರು ನೀಡಿದ್ದರು. ಹೀಗಾಗಿ ನಳಿನ್ ಕುಮಾರ್ ತಲೆದಂಡ ಖಚಿತ ಎನ್ನುವ ಮಾತುಗಳು ತೀವ್ರವಾಗಿ ಹರಿದಾಡಿದ್ದವು. ಆದರೆ ಸನ್ನಿವೇಶಗಳು ಬದಲಾಗುತ್ತಿದ್ದಂತೆ, ತಲೆದಂಡದ ವಿಚಾರವೂ ಮರೆಯಾಗತೊಡಗಿತ್ತು. ಕೆಲವು ನಾಯಕರು ಮಾತ್ರ, ಮುಂದಿನ ಚುನಾವಣೆ ದೃಷ್ಟಿಯಿಂದ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತೆ ಎನ್ನತೊಡಗಿದ್ದರು. ಅದೇ ಆಗೋದಿದ್ದರೆ, ರಾಜ್ಯಾಧ್ಯಕ್ಷರ ಸ್ಥಾನಕ್ಕೂ ಹೊಸಬರ ಆಯ್ಕೆ ಮಾಡುವುದಕ್ಕೆ ಕಾಲ ಪಕ್ವ ಆದಂತಾಗಿದೆ.

India's handling of Ukraine issue has positive impact on assembly polls: Amit  Shah - India News

ಹಾಲಿ ಅಧ್ಯಕ್ಷರ ಅವಧಿ ಮುಂದಿನ ಡಿಸೆಂಬರ್ ವೇಳೆಗೆ ಮುಗಿಯುವುದರಿಂದ ಮತ್ತು ಆನಂತರದ ಮೂರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗುವುದರಿಂದ ಆ ಸಂದರ್ಭದಲ್ಲಿ ಹೊಸಬರ ಆಯ್ಕೆ ಮಾಡಿದರೆ ರಾಜ್ಯದಲ್ಲಿ ನಾಯಕತ್ವದ ವರ್ಚಸ್ಸು ಬೆಳೆಸಿಕೊಳ್ಳಲು ಸಾಧ್ಯವಾಗಲ್ಲ ಎನ್ನುವ ಅಭಿಪ್ರಾಯಗಳೂ ಇವೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯಾಧ್ಯಕ್ಷನಾಗಿದ್ದೂ ರಾಜ್ಯ ಮಟ್ಟದಲ್ಲಿ ವರ್ಚಸ್ಸು ಬೆಳೆಸಿಕೊಳ್ಳಲಾಗದ ಮತ್ತು ಇಡೀ ರಾಜ್ಯದಲ್ಲಿ ಬಿಜೆಪಿ ನಾಯಕರ ನಡುವೆ ವಿಶ್ವಾಸ ಮೂಡಿಸಿಕೊಳ್ಳುವುದಕ್ಕೂ ಸಾಧ್ಯವಾಗದ ಹಾಲಿ ರಾಜ್ಯಾಧ್ಯಕ್ಷರನ್ನು ಬದಲಾಯಿಸಬೇಕೆಂದು ಮೊದಲಿನಿಂದಲೂ ಒಂದು ಗುಂಪು ಬಹಿರಂಗ ತೊಡೆ ತಟ್ಟಿತ್ತು. ಆದರೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್, ನಳಿನ್ ಪರವಾಗಿ ಗಟ್ಟಿ ನಿಂತಿರುವುದರಿಂದ ಬದಲಾವಣೆ ಆಗಿರಲಿಲ್ಲ. ಈಗಲೂ ಬಿಜೆಪಿ ಚಾಣಕ್ಯ ಅಮಿತ್ ಷಾ ರಾಜ್ಯಕ್ಕೆ ಬಂದಲ್ಲಿ ಮಾತ್ರ, ಎಲ್ಲ ಲೆಕ್ಕಾಚಾರಗಳೂ ಅದಲು ಬದಲಾಗುವುದಲ್ಲದೆ ಕೆಲವರ ತಲೆದಂಡ ಖಚಿತ ಅನ್ನುವ ಮಾತುಗಳು ಈಗ ಕೇಳಿಬರುತ್ತಿವೆ.

Uttar Pradesh big victory in assembly elections, High command to make surgery in Karnataka government leaders