ಬ್ರೇಕಿಂಗ್ ನ್ಯೂಸ್
11-03-22 05:56 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.11: ಮುಂದಿನ ನಾಲ್ಕರಿಂದ ಆರು ವಾರಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್ ಗಳಿಗೆ ಪರ್ಯಾಯ ಶಕ್ತಿಯಾಗಿ ಆಮ್ ಆದ್ಮಿ ಪಕ್ಷ ರೂಪುಗೊಳ್ಳಲಿದೆ ಎಂದು ಆಪ್ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದ್ದಾರೆ.
ಪಂಜಾಬ್ ನಲ್ಲಿ ಆಪ್ ಕ್ಲೀನ್ ಸ್ವೀಪ್ ಸಾಧನೆ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪಕ್ಷದ ರಾಷ್ಟ್ರೀಯ ವಕ್ತಾರರೂ ಆಗಿರುವ ಪೃಥ್ವಿ ರೆಡ್ಡಿ, ಪಂಜಾಬ್ ನಲ್ಲಿ ಪೂರ್ತಿಯಾಗಿ ಆಪ್ ಅಲೆ ಎದ್ದಿರುವುದನ್ನು ನೋಡಿದರೆ, ಆಪ್ ಈಗ ಕೇವಲ ಮೆಟ್ರೋಪೊಲಿಟನ್ ಅಥವಾ ನಗರ ಕೇಂದ್ರಿತ ಪಕ್ಷವಾಗಿ ಉಳಿದಿಲ್ಲ ಅನ್ನುವುದನ್ನು ತೋರಿಸುತ್ತದೆ. ಪಂಜಾಬಲ್ಲಿ ಹಳ್ಳಿ, ಗ್ರಾಮೀಣ ಪ್ರದೇಶಗಳಲ್ಲಿಯೂ ಆಮ್ ಆದ್ಮಿ ಹರಡಿಕೊಂಡಿದೆ. ಮುಂದಿನ ನಾಲ್ಕರಿಂದ ಆರು ವಾರಗಳಲ್ಲಿ ಕರ್ನಾಟಕದಲ್ಲಿ ಹಲವು ಪ್ರಭಾವಿ ನಾಯಕರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಯಾರೆಲ್ಲ ಸೇರುತ್ತಾರೆ ಅನ್ನುವುದನ್ನು ಈಗಲೇ ಹೇಳುವುದಕ್ಕಾಗಲ್ಲ ಎಂದು ಹೇಳಿದ್ದಾರೆ.
ಪಂಜಾಬ್ ನಲ್ಲಿ ಜನರು ಬದಲಾವಣೆ ಬಯಸಿದ್ದು ಐದು ವರ್ಷಗಳಿಂದ ಆಗಿದ್ದಲ್ಲ. ಕೇವಲ ಐದಾರು ತಿಂಗಳಲ್ಲಿ ಆಗಿರುವ ಬದಲಾವಣೆಯಿದು. ಪಕ್ಷ ಅಲ್ಲಿನ ಡ್ರಗ್ಸ್ ವ್ಯಸನದ ವಿರುದ್ಧ ಜಾಗೃತಿ ಮೂಡಿಸಿತ್ತು. ಪಂಜಾಬ್ ನಲ್ಲಿ ಅತಿ ಹೆಚ್ಚು ಯುವಕರು ಡ್ರಗ್ಸ್ ದಾಸರಾಗಿದ್ದಾರೆ. ಡ್ರಗ್ಸ್ ಜಾಗೃತಿ ಮತ್ತು ಕೃಷಿಯನ್ನು ಮುಂದಿಟ್ಟು ಪಕ್ಷ ಜನರ ಬಳಿಗೆ ಹೋಗಿತ್ತು. ಜಾಗೃತ ಮತದಾರರು ರಾಜ್ಯದೆಲ್ಲೆಡೆ ಪಕ್ಷಕ್ಕೆ ಮತ ನೀಡಿದ್ದಾರೆ. ಇದೇ ಅಜೆಂಡಾ ಇಟ್ಟುಕೊಂಡು ದೇಶಾದ್ಯಂತ ಪಕ್ಷವನ್ನು ವಿಸ್ತರಿಸಲು ಯೋಜನೆ ಹಾಕಿದ್ದು ಜನರು ಬೆಂಬಲ ನೀಡಲಿದ್ದಾರೆ ಎಂದು ಪೃಥ್ವಿ ರೆಡ್ಡಿ ಹೇಳಿದರು.
30 ದಿನದಲ್ಲಿ ಬೆಂಗಳೂರಿನ ಪ್ರತಿ ಮನೆಗೂ ಆಪ್
ಪಂಜಾಬ್ ಮತ್ತು ದೆಹಲಿಯಲ್ಲಿ ಆಗಿರುವಂತೆ ಬೆಂಗಳೂರಿನಲ್ಲೂ ಕ್ರಾಂತಿಕಾರಿ ಹೆಜ್ಜೆಯನ್ನು ಇಡಲಾಗುವುದು. ಇದಕ್ಕಾಗಿ ಮುಂದಿನ 30 ದಿನಗಳಲ್ಲಿ ಪ್ರತಿ ಮನೆಗೂ ತಲುಪಲು ಯೋಜನೆ ಹಾಕಿದ್ದೇವೆ. ದೆಹಲಿ ಮಾದರಿ ಬೆಂಗಳೂರಿಗೆ ಹೆಚ್ಚು ಹೊಂದಲಿದ್ದು, ಅಲ್ಲಿನ ಪ್ಲಾನನ್ನು ಕಾರ್ಯಗತ ಮಾಡಲಾಗುವುದು. ಇಲ್ಲಿನ ಮೂರೂ ಪಕ್ಷಗಳ ಕಾರ್ಯಕರ್ತರು, ಗೆಳೆಯರು ಪಂಜಾಬ್ ಫಲಿತಾಂಶದ ಬಳಿಕ ತಮ್ಮ ನಾಯಕರು ಗೆಲ್ಲುವ ಬಗ್ಗೆ ಖಾತ್ರಿ ಹೊಂದಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಬದಲಾವಣೆಯ ಗಾಳಿ ಬಿಸುತ್ತಿರುವುದು ಕಂಡುಬಂದಿದೆ.
ಪಕ್ಷವನ್ನು ರಾಜ್ಯದಲ್ಲೆಡೆ ವಿಸ್ತರಿಸಲು ಪ್ಲಾನ್ ಹಾಕಿದ್ದು ಮೂರು ತಿಂಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಸೂಕ್ತ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು. ಅಭ್ಯರ್ಥಿಗಳಿಗೆ ಆನಂತರ 9ರಿಂದ 10 ತಿಂಗಳಲ್ಲಿ ಪ್ರತಿ ಮನೆಗೂ ತಲುಪುವಂತೆ ಟಾಸ್ಕ್ ನೀಡಲಾಗುವುದು. ಆಮ್ ಆದ್ಮಿಯ ಉತ್ತಮ ಆಡಳಿತ ನೋಡಿದವರು, ರಾಜ್ಯದಲ್ಲಿ ಇತರರ ರೀತಿ ಹೊಲಸು ರಾಜಕೀಯ ನಡೆಸಲ್ಲ. ಹೀಗಾಗಿ ಕರ್ನಾಟಕದ ಜಾತಿ ರಾಜಕೀಯ, ಹಣಬಲದ ರಾಜಕಾರಣದ ಎದುರು ಆಮ್ ಆದ್ಮಿ ಪಕ್ಷ ಮೇಲೆ ಬರಲು ಸಾಧ್ಯವಿಲ್ಲ ಎಂದು ನಂಬಿದ್ದರು. ಆದರೆ ಪಂಜಾಬ್ ನಲ್ಲಿ ಇವೆಲ್ಲವನ್ನೂ ಪಕ್ಷ ಮೆಟ್ಟಿ ನಿಂತಿದ್ದು ಜನರು ಬದಲಾವಣೆ ಬಯಸಿದ್ದನ್ನು ಎತ್ತಿ ತೋರಿಸಿದ್ದಾರೆ. ಹೊಸ ತಳಿಗಳು ರಾಜಕೀಯಕ್ಕೆ ಬರುತ್ತಿದ್ದು, ಹೊಸತನ್ನು ತರುತ್ತಿದ್ದಾರೆ ಎಂದರು.
ಹಿಜಾಬ್ ಪ್ರಕರಣ ಬಿಜೆಪಿಯವರೇ ಹೆಣೆದ ತಂತ್ರಗಾರಿಕೆ. ಆದರೆ ಅದರಲ್ಲಿ ಅವರು ಯಶಸ್ವಿಯಾಗಿಲ್ಲ. ಇಲ್ಲಿ ಕಾಂಗ್ರೆಸ್ ಮುಸ್ಲಿಮರ ಓಲೈಕೆ ಮಾಡುತ್ತಿದ್ದರೆ, ಬಿಜೆಪಿ ಹಿಂದುಗಳ ಓಲೈಕೆಯಲ್ಲಿ ತೊಡಗಿದ್ದಾರೆ. ಆದರೆ, ಆಮ್ ಆದ್ಮಿ ಬಡವರು, ಕಾರ್ಮಿಕರು, ಎಲ್ಲ ಧರ್ಮೀಯರಲ್ಲಿ ಇರುವ ಧರ್ಮದಿಂದ ಹೊರತಾಗಿ ಮತ್ತೇನೋ ಹೊಸತನ್ನು ಬಯಸುವ ಮಂದಿಯನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಆಮೂಲಕ ಪಕ್ಷವನ್ನು ಕಟ್ಟುತ್ತೇವೆ ಎಂದು ಹೇಳಿದ್ದಾರೆ.
"The Aam Aadmi Party will emerge as an alternative force for BJP, Congress and regional party JDS in Karnataka in the next four to six weeks," said party president Prithvi Reddy.
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
12-08-25 02:49 pm
HK News Desk
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
ಮದುವೆಯಾಗುತ್ತೇನೆಂದು ನಂಬಿಸಿ ಮೋಸ, ಇಸ್ಲಾಮಿಗೆ ಮತಾಂ...
11-08-25 08:55 pm
Rabies Death, Supreme Court: ರಾಜಧಾನಿಯಲ್ಲಿ ರೇಬ...
11-08-25 02:48 pm
12-08-25 11:06 pm
Mangalore Correspondent
ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರದಲ್ಲೇ ಹೊಸ ನಿಯಮ ;...
12-08-25 08:34 pm
Pilikula Zoo Director, Mangalore Police: ಪಿಲಿ...
12-08-25 01:49 pm
Mangalore, Manipal Health Card, Silver Jubile...
12-08-25 01:09 pm
Dharmasthala Case, SIT, Radar: ಧರ್ಮಸ್ಥಳ 13ನೇ...
11-08-25 07:39 pm
12-08-25 12:36 pm
Bangalore Correspondent
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm