ಇತಿಹಾಸದಲ್ಲಿ ಇದೇ ಮೊದಲು ಕಾಂಗ್ರೆಸ್ ಸ್ಥಿತಿ ಹೀಗಾಗಿದೆ, ರಾಜ್ಯದಲ್ಲೂ ಅದೇ ಸ್ಥಿತಿಯಾಗಲಿದೆ, ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ! 

12-03-22 10:57 am       HK Desk news   ಕರ್ನಾಟಕ

ಭಾರತದ ಇತಿಹಾಸದಲ್ಲಿ ಇದೇ ಮೊದಲು ಕಾಂಗ್ರೇಸ್ ಗೆ ಎರಡೇ ಸ್ಥಾನ ಸಿಕ್ಕಿರುವುದು. ಇದೇ ಮಾದರಿ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯಕ್ಕೂ ಅನ್ವಯಿಸುತ್ತೆ ಎಂದು ಕಾಂಗ್ರೆಸ್ ಪಕ್ಷದಿಂದ ಕಾಲು ಹೊರಗಿಟ್ಟಿರುವ ಸಿ.ಎಂ‌. ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.‌

ಕೋಲಾರ, ಮಾ.12: ಭಾರತದ ಇತಿಹಾಸದಲ್ಲಿ ಇದೇ ಮೊದಲು ಕಾಂಗ್ರೇಸ್ ಗೆ ಎರಡೇ ಸ್ಥಾನ ಸಿಕ್ಕಿರುವುದು. ಇದೇ ಮಾದರಿ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯಕ್ಕೂ  ಅನ್ವಯಿಸುತ್ತೆ ಎಂದು ಕಾಂಗ್ರೆಸ್ ಪಕ್ಷದಿಂದ ಕಾಲು ಹೊರಗಿಟ್ಟಿರುವ ಸಿ.ಎಂ‌. ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.‌

ನಾಳೆ 12 ಗಂಟೆಗೆ ಕೈ ಬಿಟ್ಟು ತೆನೆ ಹೊರಲಿದ್ದೇನೆ.‌ ನಾವೂ ಮೂಲ ಕಾಂಗ್ರೆಸಿಗ್ಗರು. ನಮ್ಮ ತಂದೆ ತಾಯಿ ಅಜ್ಜ ಎಲ್ಲಾರೂ ಸ್ವತಂತ್ರ ಹೋರಾಟಗಾರರು. ಈಗ  ಕಾಂಗ್ರೇಸ್ ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರು ಯಾರೂ ಇಲ್ಲ. 1970 ರಿಂದ ಈಚೆಗೆ ಬಂದವರು ಮೂಲ ಕಾಂಗ್ರೆಸಿಗರೇ ಅಲ್ಲ. 

ಡಿಕೆಶಿ ಹಾಗೂ ಸಿದ್ದರಾಯಮಯ್ಯ ನಡುವೆ ಸಿಎಂ ಕುರ್ಚಿಗಾಗಿ ಕಿತ್ತಾಟದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೇಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದಿಲ್ಲ. ಹೀಗಿರುವಾಗ ಸಿಎಂ ಕುರ್ಚಿಗಾಗಿ ಕಿತ್ತಾಡಲೇ ಬೇಕಲ್ಲ ಎಂದು ವ್ಯಂಗ್ಯವಾಡಿದರು. 

ಪಂಚ ರಾಜ್ಯದ ಚುನಾವಣೆಯಲ್ಲಿ ಈಗಾಗಲೇ ಕಾಂಗ್ರೇಸ್ ಪಕ್ಷ ಸೋಲುಂಡಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೇಸ್ ಎಲ್ಲ ಕಡೆ ಮೂರನೇ ಸ್ಥಾನ ಕಾಯ್ದುಕೊಳ್ಳಲಿದೆ. ನಮ್ಮ ನಿರ್ಧಾರದಂತೆ ಮುಂದಿನ  ಸರ್ಕಾರ ರಚನೆಯಾಗಲಿದೆ. ನಾನು ಇರುವ ಪಕ್ಷ ಯಾವತ್ತಿಗೂ ನಂ ವನ್ ಸ್ಥಾನದಲ್ಲಿರುತ್ತೆ. ಪಕ್ಷಕ್ಕಿಂತ ನಮ್ಮ ರಾಜ್ಯದವರು   ಪ್ರಧಾನಿಯಾಗಿದ್ದ ದೇವೇಗೌಡರೇ ಮುಖ್ಯ. ಈಗಾಗಲೇ ನಮ್ಮ ಸಮುದಾಯದ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇನೆ. ಅದರಂತೆ ಶನಿವಾರ ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರಲಿದ್ದೇನೆ ಎಂದರು ಸಿ.ಎಂ ಇಬ್ರಾಹಿಂ.

Congress has lost its power for the first time in history slams C M Ibrahim. Congress will not even win state elections in Karnataka he added.