ಬ್ರೇಕಿಂಗ್ ನ್ಯೂಸ್
12-03-22 09:15 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.12: ಆರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮೂಕ ಹುಡುಗನನ್ನು ಆಧಾರ್ ಕಾರ್ಡಿನ ಬೆರಳಚ್ಚು ಮತ್ತೆ ತಾಯಿ ಮಡಿಲು ಸೇರಿಸಿದ ಘಟನೆ ಬೆಳಕಿಗೆ ಬಂದಿದೆ. 2016ರಲ್ಲಿ ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಹತ್ತು ವರ್ಷದ ಹುಡುಗ ಭರತ್ ಕುಮಾರ್ ಮತ್ತೆ ತಾಯಿ ಮಡಿಲು ಸೇರಿದ್ದಾನೆ.
ಯಲಹಂಕದಲ್ಲಿ ಬೀದಿ ಬದಿ ತರಕಾರಿ ಮಾರುತ್ತಿದ್ದ ಪಾರ್ವತಮ್ಮ 2016ರಲ್ಲಿ ತನ್ನ ಮಗ ಭರತ್ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ತನ್ನ ಮಗನನ್ನು ಯಾರೋ ಅಪಹರಣ ಮಾಡಿದ್ದಾರೆ, ಆತನಿಗೆ ಮಾತು ಬರುವುದಿಲ್ಲ ಎಂದು ದೂರಿನಲ್ಲಿ ಹೇಳಿದ್ದರು. ಆನಂತರ ಪೊಲೀಸರನ್ನು ಸಾಕಷ್ಟು ಬಾರಿ ಎಡತಾಕಿದರೂ, ಭರತ್ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ.
ಆನಂತರ, ಹತ್ತು ತಿಂಗಳ ಬಳಿಕ ಭರತ್ ಕುಮಾರ್ ಮಹಾರಾಷ್ಟ್ರದ ನಾಗಪುರಕ್ಕೆ ತಲುಪಿದ್ದ. ಬೆಂಗಳೂರಿನಿಂದ ರೈಲಿನಲ್ಲಿ ತೆರಳಿದ್ದ ಆತನನ್ನು ಅಲ್ಲಿನ ಪೊಲೀಸರು ಮಾಹಿತಿ ಕೇಳಿದ್ದರು. ಆನಂತರ, ಸರಿಯಾದ ಮಾಹಿತಿ ಸಿಗದೆ ಹುಡುಗನನ್ನು ಪೊಲೀಸರು ಪುನರ್ವಸತಿ ಕೇಂದ್ರಕ್ಕೆ ಹಾಕಿದ್ದರು. ಕೇಂದ್ರದ ಸಿಬಂದಿ ಇತ್ತೀಚೆಗೆ ಭರತ್ ಕುಮಾರನ ಆಧಾರ್ ಕಾರ್ಡ್ ಮಾಡಿಸಲು ಯತ್ನಿಸಿದ್ದರು. ಆದರೆ ಆಧಾರ್ ಕಾರ್ಡ್ ಮಾಡಿಸಲು ಬೆರಳಚ್ಚು ನೀಡಿದಾಗ, ಭರತ್ ಕುಮಾರ್ ಅದಾಗಲೇ ಕಾರ್ಡ್ ಮಾಡಿಸಿರುವುದು ಕಂಡುಬಂದಿದೆ.
ಭರತ್ ಕುಮಾರ್ ವಿಳಾಸ ಬೆಂಗಳೂರಿನಲ್ಲಿರುವುದನ್ನು ಆಧಾರ್ ತೋರಿಸಿದ್ದು, ಪುನರ್ವಸತಿ ಕೇಂದ್ರದ ಸಿಬಂದಿ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಾಗಪುರ ಪೊಲೀಸರು ಬಳಿಕ ಬೆಂಗಳೂರಿನ ಪೊಲೀಸರನ್ನು ಸಂಪರ್ಕಿಸಿದ್ದು, ವಿಳಾಸದ ಮೂಲಕ ತಾಯಿಯನ್ನು ಸಂಪರ್ಕಿಸಿದ್ದಾರೆ. ಇದೀಗ ತಾಯಿ ಪಾರ್ವತಮ್ಮ ನಾಗಪುರಕ್ಕೆ ತೆರಳಿ, ತನ್ನ ಮಗನನ್ನು ಪತ್ತೆ ಮಾಡಿದ್ದಾರೆ. ಆಧಾರ್ ಕಾರ್ಡ್ ಚಹರೆ ತನ್ನ ಮಗನನ್ನು ಪತ್ತೆ ಮಾಡಿಸಿದ್ದಕ್ಕೆ ತಾಯಿ ಕೃತಜ್ಞತೆ ಹೇಳಿದ್ದಾರೆ.
In a joint operation, authorities in Karnataka and Maharashtra managed to reunite a speech impaired boy with his mother after six years with the help of fingerprints on an Aadhaar card.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm