ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ನಿಲ್ಲೋದಿಲ್ಲ ; ಜಿಟಿ ದೇವೇಗೌಡರಿಗೆ ಕ್ಷೇತ್ರ ಬಿಟ್ಟುಕೊಡುವ ಸುಳಿವು ಕೊಟ್ಟ ಸಿದ್ದರಾಮಯ್ಯ 

13-03-22 03:19 pm       HK Desk news   ಕರ್ನಾಟಕ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡಲ್ಲ. ನನಗೆ ಈಗಾಗಲೇ ನಾಲ್ಕೈದು ಕ್ಷೇತ್ರದಿಂದ ನಿಲ್ಲಲು ಕಾರ್ಯಕರ್ತರು ಆಫರ್ ನೀಡುತ್ತಿದ್ದಾರೆ. ಆದ್ರೆ‌ ಈವರೆಗೂ ಎಲ್ಲಿ ನಿಲ್ಲಬೇಕು ಎಂದು ತೀರ್ಮಾನ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.‌

ಮಂಡ್ಯ, ಮಾ.13: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡಲ್ಲ. ನನಗೆ ಈಗಾಗಲೇ ನಾಲ್ಕೈದು ಕ್ಷೇತ್ರದಿಂದ ನಿಲ್ಲಲು ಕಾರ್ಯಕರ್ತರು ಆಫರ್ ನೀಡುತ್ತಿದ್ದಾರೆ. ಆದ್ರೆ‌ ಈವರೆಗೂ ಎಲ್ಲಿ ನಿಲ್ಲಬೇಕು ಎಂದು ತೀರ್ಮಾನ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.‌

ಈ ಬಗ್ಗೆ ಯೋಚನೆ ಮಾಡಿ ತೀರ್ಮಾನ ತೀರ್ಮಾನ ಮಾಡುತ್ತೇನೆ. ಆದ್ರೆ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡೋದಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸಿದ್ದರಾಮಯ್ಯ ಮಾತನಾಡಿದ್ದಾರೆ.‌ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ನಿಲ್ಲೋದಿಲ್ಲ ಎನ್ನುವ ಮೂಲಕ ಜಿಟಿ ದೇವೇಗೌಡರಿಗೆ ಕ್ಷೇತ್ರವನ್ನು ಬಿಟ್ಟು ಕೊಡುವ ಸುಳಿವು ನೀಡಿದ್ದಾರೆ. ‌

Karnataka Covid 19 clusters: CM Basavaraj Bommai calls emergency meeting-  The New Indian Express

ನನ್ನ ಪ್ರಕಾರ ಅವಧಿಗು ಮುನ್ನ ಚುನಾವಣೆ ಬರಲ್ಲ. ಈ ಬಗ್ಗೆ ಬಿಜೆಪಿ ನಾಯಕರು ಕೂಡ ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಸಿಟಿ ರವಿ ಸೇರಿದಂತೆ ಹಲವರು ಹೇಳಿದ್ದಾರೆ. ಅವಧಿಗೂ ಮುನ್ನ ಯಾಕಾಗಿ ಚುನಾವಣೆ ಮಾಡ್ತಾರೆ. ಏಪ್ರಿಲ್ ನಲ್ಲಿ ಚುನಾವಣೆ ಇರೋದು. ಇದೆಲ್ಲ ಬರೀ ಊಹಾಪೋಹಗಳು ಅಷ್ಟೇ. ಅವಧಿಗು ಮುನ್ನ ಚುನಾವಣೆ ಬಂದ್ರೆ ನಾವು ಸಿದ್ದರಿದ್ದೇವೆ.‌ ಜನರು ನಮ್ಮ ಪರವಾಗಿದ್ದಾರೆ. ಗೆಲುವು ನಮ್ಮದೇ ಆಗಿರುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ‌

Disgruntled Karnataka MLC Ibrahim quits Congress after its rout in Assembly  polls | Elections News,The Indian Express

ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ! 

ಹಿರಿಯ ನಾಯಕ ಸಿಎಂ ಇಬ್ರಾಹಿಂ ಕಾಂಗ್ರೆಸ್ ತೊರೆದ ವಿಚಾರದ ಪ್ರಶ್ನೆಗೆ, ವಲ್ಲದ ಗಂಡನಿಗೆ ಮೊಸರಲ್ಲು ಕಲ್ಲು ಅಂತಾರಲ್ಲ. ಆ ರೀತಿ ಆಗಿದೆ ಇಬ್ರಾಹಿಂ ಆರೋಪಗಳು. ಪಕ್ಷದಿಂದ ಬಿಡ್ತಾ ಇರೋದ್ರಿಂದ ಆರೋಪ ಮಾಡ್ತಿದ್ದಾರೆ. ಕಾಂಗ್ರೆಸ್ ಪಕ್ಷ ಇಬ್ರಾಹಿಂಗೆ ಎಲ್ಲವನ್ನು ಕೊಟ್ಟಿದೆ. ಆದ್ರೆ ಮನುಷ್ಯನಿಗೆ ಆಸೆ ಇರಬೇಕು, ದುರಾಸೆ ಇರಬಾರದು.‌ ಹಾಲಿ ಶಾಸಕ ಸಂಗಮೇಶ್ ಗೆ ಟಿಕೆಟ್ ತಪ್ಪಿಸಿ ಭದ್ರಾವತಿಯಲ್ಲಿ ಇಬ್ರಾಹಿಂಗೆ ಟಿಕೆಟ್ ಕೊಟ್ಟಿದ್ದೇವು. ಅಲ್ಲಿಯು ಆತ ಸೋತ. ಅದಾದ‌ ಮೇಲೆ ಎಂಎಲ್ ಸಿ ಮಾಡಿದ್ವಿ. ಎಂಎಲ್‌ಸಿ ಯನ್ನು ರಿನಿವಲ್ ಮಾಡಿದ್ವಿ. ಆದ್ರು ಕೂಡ ಪಕ್ಷ ಬಿಟ್ಟೋಗಿದ್ದಾನೆ. ನಾನು ಪಕ್ಷ ಬಿಡಬೇಡ ಅಂತ ಫೋನ್ ಮಾಡಿ ಹೇಳಿದೆ.‌ ಆದ್ರೆ ಲೀಡರ್ ಆಫ್ ಅಪೋಸಿಷನ್ ಸಿಗಲಿಲ್ಲ ಅಂತ ಪಕ್ಷ ಬಿಟ್ಟಿದ್ದಾರೆ. ರಾಜಕಾರಣದಲ್ಲಿ ಆಸೆಗಳಿರಬೇಕು ಆದ್ರೆ ದುರಾಸೆ ಇರಬಾರದು ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

Chamundeswari is not contesting again in the constituency. Activists are already offering me to stand by four quarters. Former CM Siddaramaiah has said that he has not decided where to stand.