ಬ್ರೇಕಿಂಗ್ ನ್ಯೂಸ್
19-03-22 09:05 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.19: ಮಾಗಡಿ ತಾಲೂಕಿನ ತಹಸೀಲ್ದಾರ್ ವರ್ಗಾವಣೆ ವಿಚಾರದಲ್ಲಿ ಸಚಿವರಾದ ಅಶ್ವತ್ಥ ನಾರಾಯಣ ಮತ್ತು ಆರ್.ಅಶೋಕ್ ವಿಧಾನಸಭೆ ಮೊಗಸಾಲೆಯಲ್ಲೇ ಪರಸ್ಪರ ಕಿತ್ತಾಡಿಕೊಂಡಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಎರಡು ದಿನಗಳ ಹಿಂದೆ ನಡೆದಿರುವ ಘಟನೆಯನ್ನು ಪ್ರತ್ಯಕ್ಷದರ್ಶಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅಶ್ವತ್ಥ ನಾರಾಯಣ ಅವರು ಮಾಗಡಿ ತಾಲೂಕಿನ ತಹಸೀಲ್ದಾರ್ ಶ್ರೀನಿವಾಸ್ ಅವರನ್ನು ವರ್ಗಾವಣೆ ನಡೆಸುವಂತೆ ಕಂದಾಯ ಸಚಿವ ಅಶೋಕ್ ಗೆ ಪತ್ರ ಬರೆದಿದ್ದರು ಎನ್ನಲಾಗಿದೆ. ಶ್ರೀನಿವಾಸ್ ಬದಲಿಗೆ ಬೇರೂಬ್ಬ ಅಧಿಕಾರಿಯನ್ನು ನೇಮಕ ಮಾಡುವಂತೆ ಪತ್ರದಲ್ಲಿ ಕೇಳಿಕೊಂಡಿದ್ದರು. ಆದರೆ, ಕಂದಾಯ ಸಚಿವರು ಇದನ್ನು ಮಾನ್ಯ ಮಾಡದೆ ಆದೇಶ ಪತ್ರ ಹೊರಡಿಸಿರಲಿಲ್ಲ. ತಹಸೀಲ್ದಾರ್ ಆಗಿರುವ ಅಧಿಕಾರಿಗೆ ಪ್ರಭಾವಿ ಮಠಾಧೀಶರೊಬ್ಬರ ಬೆಂಬಲ ಇರುವುದರಿಂದ ವರ್ಗಾವಣೆ ಸಾಧ್ಯವಿಲ್ಲ ಎಂದು ಅಶೋಕ್ ತಿಳಿಸಿದ್ದರು ಎನ್ನಲಾಗಿದೆ.
ಗುರುವಾರ ಮಧ್ಯಾಹ್ನ ಇಬ್ಬರು ಸಚಿವರು ಕೂಡ ವಿಧಾನಸಭೆ ಮೊಗಸಾಲೆಯಲ್ಲಿ ಮುಖಾಮುಖಿಯಾಗಿದ್ದು, ಸಚಿವ ಅಶ್ವತ್ಥ ನಾರಾಯಣ ತಹಸೀಲ್ದಾರ್ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ನಾನೊಬ್ಬ ಅಲ್ಲಿನ ಉಸ್ತುವಾರಿ ಸಚಿವ. ನನ್ನ ಮಾತಿಗೆ ಅಷ್ಟೂ ಬೆಲೆ ಇಲ್ಲವೇ.. ಹಲವು ಬಾರಿ ಕೇಳಿಕೊಂಡರೂ ವರ್ಗಾವಣೆ ಮಾಡಲ್ಲ ಎಂದರೆ ಹೇಗೆ ಎಂದು ಏರಿದ ದನಿಯಲ್ಲಿ ಅಶೋಕ್ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಇದರಿಂದ ಸಿಟ್ಟಾದ ಸಚಿವ ಅಶೋಕ್, ನನ್ನ ಇಲಾಖೆಯಲ್ಲಿ ಯಾರನ್ನು ಎಲ್ಲಿಗೆ, ಯಾವಾಗ ವರ್ಗಾವಣೆ ಮಾಡಬೇಕು ಅನ್ನೋದು ನನಗೆ ಗೊತ್ತಿದೆ. ನಾನು ಪಕ್ಷದಲ್ಲಿ ನಿಮಗಿಂತ ಹಿರಿಯವನು. ವರ್ಗಾವಣೆ ಬಗ್ಗೆ ನಿಮ್ಮಿಂದ ಕಲಿಯಬೇಕಾಗಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ. ಇದೇ ವಿಚಾರದಲ್ಲಿ ಇಬ್ಬರು ಕೂಡ ಏಕವಚನದಲ್ಲಿ ನಿಂದಿಸಿಕೊಂಡಿದ್ದು, ನೀನು ನಿನ್ನ ಇಲಾಖೆಯಲ್ಲಿ ಏನೇನು ಮಾಡಿಕೊಂಡಿದ್ದೀಯ ಅನ್ನೋದು ಗೊತ್ತಿದೆ ಎಂದು ಪ್ರತಿಯಾಗಿ ಅಶ್ವತ್ಥ ನಾರಾಯಣ ನಿಂದಿಸಿದ್ದಾರೆ. ಅಲ್ಲದೆ, ಇಬ್ಬರೂ ಕೈ ಮಿಲಾಯಿಸುವ ಹಂತಕ್ಕೆ ಬಂದಿದ್ದು, ಅಶ್ವತ್ಥ ನಾರಾಯಣ ಏರಿ ಬಂದಿದ್ದನ್ನು ನೋಡಿ ಅಶೋಕ್ ಕೂಡ ಎದ್ದು ನಿಂತಿದ್ದಾರೆ. ಈ ವೇಳೆ, ಅಲ್ಲಿದ್ದ ಇತರ ಸಚಿವರು, ಶಾಸಕರು ಇಬ್ಬರನ್ನೂ ಸಮಾಧಾನ ಪಡಿಸಿದ್ದಾರೆ.
Two senior ministers from Bengaluru, R Ashoka and CN Ashwath Narayan have been fighting off each other since 2019. The argument raged for some time after the transfer of two tahsildars from Ramanagara district.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 03:20 pm
HK News Staffer
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
ನಂದಿಗ್ರಾಮ, ರೇಜಿನಗರದಲ್ಲಿ ಬಿಜೆಪಿಗೆ ಭರ್ಜರಿ ಜಯ ;...
09-10-26 11:04 pm
10-10-26 09:27 pm
HK News Staffer
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
ಮೂಡುಶೆಡ್ಡೆ ; ಮುಸ್ಲಿಮರ ದಫನಕ್ಕೆ 2 ಎಕರೆ ಪಿಲಿಕುಳದ...
10-10-26 03:21 pm
Nana patekar: ಮಂಗಳೂರು, ಉಡುಪಿಯೊಂದಿಗೆ ನಾನಾ ಪಾಟೇ...
08-10-26 04:30 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm