ಸುಪ್ರೀಂ ತೀರ್ಪಿದ್ದರೂ ಮಸೀದಿಗಳ ಆಜಾನ್ ಧ್ವನಿ ತಗ್ಗಿಸಲಾಗದ ಬಿಜೆಪಿಯದ್ದು ಹೇಡಿ ಸರ್ಕಾರ ; ಪ್ರಮೋದ್ ಮುತಾಲಿಕ್ ವಾಗ್ದಾಳಿ

24-03-22 10:17 pm       HK Desk news   ಕರ್ನಾಟಕ

ಮಸೀದಿಗಳಲ್ಲಿ ಆಜಾನ್ ಕೂಗುವುದಕ್ಕೆ ಧ್ವನಿವರ್ಧಕ ಬಳಕೆಗೆ ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಕನಿಷ್ಠ ಧ್ವನಿವರ್ಧಕದ ಡೆಸಿಬಲ್ ಕಡಿಮೆ ಮಾಡಲು ಸಾಧ್ಯವಾಗದ ಹೇಡಿಗಳ ಸರ್ಕಾರ ಬಿಜೆಪಿಯದ್ದು ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಳಗಾವಿ, ಮಾ.24: ಮಸೀದಿಗಳಲ್ಲಿ ಆಜಾನ್ ಕೂಗುವುದಕ್ಕೆ ಧ್ವನಿವರ್ಧಕ ಬಳಕೆಗೆ ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಆಜಾನ್ ಕೂಗುವುದಕ್ಕೆ ಬ್ರೇಕ್ ಹಾಕಲು ಬಿಜೆಪಿ ಸರ್ಕಾರಕ್ಕೆ ಆಗಲಿಲ್ಲ. ಕನಿಷ್ಠ ಧ್ವನಿವರ್ಧಕದ ಡೆಸಿಬಲ್ ಕಡಿಮೆ ಮಾಡಲು ಸಾಧ್ಯವಾಗದ ಹೇಡಿಗಳ ಸರ್ಕಾರ ಬಿಜೆಪಿಯದ್ದು ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 5ಕ್ಕೆ ಎಲ್ಲ ಮಸೀದಿಗಳಲ್ಲಿ ಅಜಾನ್ ಕೂಗುವುದನ್ನು ಧ್ವನಿವರ್ಧಕದಲ್ಲಿ ಬಿತ್ತರಿಸಿ ಸ್ಥಳೀಯರಿಗೆ ತೊಂದರೆ ಕೊಡಲಾಗುತ್ತದೆ. ಇದರಿಂದ ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಈ ಆಜಾನ್ ಶಬ್ದ ನಮ್ಮ ಶಾಸಕರಿಗೆ, ಮಂತ್ರಿಗಳಿಗೆ, ಮುಖ್ಯಮಂತ್ರಿಗೆ ಕೇಳುತ್ತಿಲ್ಲವೇ? ಹಿಜಾಬ್ ವಿಚಾರದಲ್ಲಿ ಕೋರ್ಟ್ ತೀರ್ಪು ಹೇಳುವ ಇವರಿಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.

PIL filed in Supreme Court seeking Uniform Education Code - OrissaPOST

ಮುಸ್ಲಿಂ ಸಮುದಾಯದ ಉತ್ಪ್ರೇಕ್ಷಿತ ಕೊರಗುಗಳು | ನಿಲುಮೆ

ಮುಸ್ಲಿಮರ ಮೇಲಿನ ಆರ್ಥಿಕ ಬಹಿಷ್ಕಾರಕ್ಕೆ ಬೆಂಬಲ 

ಮುಸ್ಲಿಂ ಸಮುದಾಯಕ್ಕೆ ಧಾರ್ಮಿಕ ಕೇಂದ್ರಗಳಲ್ಲಿ ಆರ್ಥಿಕ ಬಹಿಷ್ಕಾರ ಹಾಕುತ್ತಿರುವ ಪ್ರಕ್ರಿಯೆ ಇಡೀ ರಾಜ್ಯಕ್ಕೆ ಹಬ್ಬುತ್ತಿದೆ. ಜಾತ್ರೆಯಲ್ಲಿ ಮುಸ್ಲಿಂ ಅಂಗಡಿ ಇರಬಾರದು ಅನ್ನೋದಕ್ಕೆ ಶ್ರೀರಾಮ ಸೇನೆ ಬೆಂಬಲ‌ ಇದೆ. ರಾಜ್ಯಾದ್ಯಂತ ದೇವಸ್ಥಾನ ಪರಿಸರದಲ್ಲಿ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ ಹಾಕಲು ಶ್ರೀರಾಮ ಸೇನೆ ಆಂದೋಲನ ನಡೆಸಲಿದೆ ಎಂದರು.

BJP's top leadership comes together to brainstorm over CM picks for UP and  Uttarakhand - Mail Today News

ಪಂಡಿತರ ನರಮೇಧದಲ್ಲಿ ಬಿಜೆಪಿಯದ್ದೂ ತಪ್ಪಿದೆ ! 

ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿ ಹಿಂದಿನ ಕೇಂದ್ರ ಸರ್ಕಾರದ್ದೂ ತಪ್ಪಿದೆ. ಆಗ ಕೇಂದ್ರ ಸರ್ಕಾರ ಬಿಜೆಪಿಯ ಭಾಗವಾಗಿದ್ದು, ಹಲವರು ಸಚಿವರಾಗಿದ್ದರು. ಹೀಗಿದ್ದರೂ ಆಗ ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡು ಕುಳಿತಿದ್ದರು. ಯಾಕೆ ಇವರಿಗೆ ತಡೆಯಲು ಆಗಿರಲಿಲ್ಲ ಎಂದು ಹೇಳಿದರು.

Loudspeaker in Mosques not removed even after BJP party ruling in state slams Pramod Muthalik in Karnataka.