ಜೈನ ಹೆಣ್ಮಕ್ಕಳು ತಲೆಗೆ ಬಟ್ಟೆ ಹಾಕ್ಕೊಳಲ್ವಾ? ಸ್ವಾಮೀಜಿಗಳು ತಲೆಗೆ ಬಟ್ಟೆ ಹಾಕೋದಿಲ್ವಾ..? ಸಂತರ ಆಕ್ರೋಶಕ್ಕೆ ಕಾರಣವಾದ ಸಿದ್ದರಾಮಯ್ಯ ಮಾತು

25-03-22 08:13 pm       HK Desk news   ಕರ್ನಾಟಕ

ಜೈನ ಹೆಣ್ಮಕ್ಕಳು ತಲೆ ಮೇಲೆ ಬಟ್ಟೆ ಹಾಕ್ಕೊಳಲ್ವಾ.. ಕೆಲವು ಕಡೆ ಹಿಂದು ಹೆಣ್ಮಕ್ಕಳು ಕೂಡ ತಲೆಗೆ ಬಟ್ಟೆ ಹಾಕ್ಕೊಳ್ತಾರೆ. ಹಿಂದು ಸ್ವಾಮೀಜಿಗಳು ಕೂಡ ತಲೆ ಮೇಲೆ ಬಟ್ಟೆ ಹಾಕ್ಕೊಳ್ಳುತ್ತಿಲ್ಲವೇ.. ಮುಸ್ಲಿಂ ಹೆಣ್ಣು ಮಕ್ಕಳು ತಲೆಗೆ ಬಟ್ಟೆ ಹಾಕಿಕೊಳ್ಳುವುದನ್ನು ಕೇಳುತ್ತಿದ್ದಾರೆ.

ಮೈಸೂರು, ಮಾ.25: ಜೈನ ಹೆಣ್ಮಕ್ಕಳು ತಲೆ ಮೇಲೆ ಬಟ್ಟೆ ಹಾಕ್ಕೊಳಲ್ವಾ.. ಕೆಲವು ಕಡೆ ಹಿಂದು ಹೆಣ್ಮಕ್ಕಳು ಕೂಡ ತಲೆಗೆ ಬಟ್ಟೆ ಹಾಕ್ಕೊಳ್ತಾರೆ. ಹಿಂದು ಸ್ವಾಮೀಜಿಗಳು ಕೂಡ ತಲೆ ಮೇಲೆ ಬಟ್ಟೆ ಹಾಕ್ಕೊಳ್ಳುತ್ತಿಲ್ಲವೇ.. ಮುಸ್ಲಿಂ ಹೆಣ್ಣು ಮಕ್ಕಳು ತಲೆಗೆ ಬಟ್ಟೆ ಹಾಕಿಕೊಳ್ಳುವುದನ್ನು ಕೇಳುತ್ತಿದ್ದಾರೆ. ಹಾಕ್ಕೊಳ್ಳಿ ಬಿಡಿ, ಅದಕ್ಯಾಕೆ ತೊಂದರೆ ಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಂ ಹೆಣ್ಣು ಮಕ್ಕಳು ತಲೆಗೆ ಬಣ್ಣದ ಸಮವಸ್ತ್ರ ದುಪ್ಪಟ್ಟಾ ಹಾಕ್ಕೊಂಡು ಪರೀಕ್ಷೆಗೆ ಹಾಜರಾಗಲು ಕೇಳುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ, ಅವಕಾಶ ಕೊಡಿ ಎಂದು ಹೇಳಿದರು.

Hijab row: No re-exam for those who skipped exams, says Govt | Education  News – India TV

ರಾಜ್ಯದಲ್ಲಿ ಹಿಜಾಬ್ ವಿವಾದವನ್ನು ಹುಟ್ಟುಹಾಕಿದ್ದೇ ಬಿಜೆಪಿಯವರು. ಎರಡೂ ಧರ್ಮದವರನ್ನು ಕರೆದು ಚರ್ಚಿಸಿ ವಿವಾದಕ್ಕೆ ತೆರೆ ಎಳೆಯಬಹುದಿತ್ತು. ಉದ್ದೇಶಪೂರ್ವಕವಾಗಿ ವಿವಾದವನ್ನು ದೊಡ್ಡದು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ದೇವಸ್ಥಾನ ಪರಿಸರದಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿಷೇಧ ವಿಧಿಸುವ ಪ್ರಸ್ತಾಪಕ್ಕೆ, ಜಾತ್ರೆಗಳಲ್ಲಿ ಯಾರು ಕೂಡ ವ್ಯಾಪಾರ ಮಾಡಬಹುದು. ಮುಸ್ಲಿಮರನ್ನು ವ್ಯಾಪಾರ ನಡೆಸದಂತೆ ಬಹಿಷ್ಕರಿಸುವುದು ಅಮಾನವೀಯ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇವರೇ ಸಂಘಟನೆಗಳನ್ನು ಎತ್ತಿಕಟ್ಟಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಹೇಳಿದರು. ಆಪತ್ಕಾಲದಲ್ಲಿ ರಕ್ತದ ಅವಶ್ಯಕತೆ ಬಿದ್ದಾಗ ಯಾವುದೇ ವ್ಯಕ್ತಿಯ ರಕ್ತವನ್ನಾದರೂ ಪಡೆಯುತ್ತೇವೆ. ಇಂಥದ್ದೇ ಜಾತಿಯವನ ರಕ್ತ ಬೇಕೆಂದು ಕೇಳುತ್ತೇವಾ.. ಜೀವ ಉಳಿಸುವುದೇ ಮುಖ್ಯವಾಗುತ್ತದೆ. ಅದೇ ರೀತಿ ಮನುಷ್ಯತ್ವ ಎಂದರು ಸಿದ್ದರಾಮಯ್ಯ.

Veerashaiva seers curse Siddaramaiah, vow to defeat Congress | Deccan Herald

ಸಿದ್ದರಾಮಯ್ಯ ಮಾತಿಗೆ ಸ್ವಾಮೀಜಿಗಳ ಆಕ್ರೋಶ

ಅತ್ತ ಸಿದ್ದರಾಮಯ್ಯ ಹಿಜಾಬ್ ವಿಚಾರದಲ್ಲಿ ಮಾತನಾಡುತ್ತಾ ಸ್ವಾಮೀಜಿಗಳು ತಲೆಗೆ ಬಟ್ಟೆ ಹಾಕ್ಕೊಳಲ್ವಾ ಎಂದು ಪ್ರಶ್ನೆ ಮಾಡಿದ್ದು ಸ್ವಾಮೀಜಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ಕಡೆಗಳಲ್ಲಿ ಸ್ವಾಮೀಜಿಗಳು ಸಿದ್ದರಾಮಯ್ಯ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದು ಹೈಕೋರ್ಟ್ ತರಗತಿಗಳಲ್ಲಿ ಹಿಜಾಬ್ ಬೇಡ ಎಂದು ಮಾತ್ರ ಹೇಳಿದ್ದು. ಸಾರ್ವಜನಿಕ ಜಾಗದಲ್ಲಿ ಹಿಜಾಬ್ ನಿಷೇಧಿಸಿಲ್ಲ. ಅದಕ್ಕೆ ಬದಲಾಗಿ ಜೈನರು ಹಾಕ್ಕೊಳಲ್ವಾ.. ಸ್ವಾಮೀಜಿಗಳು ಹಾಕ್ಕೊಳಲ್ವಾ ಎಂದು ಕೇಳುತ್ತಿರುವುದು ತಪ್ಪು. ನಾವು ತರಗತಿಯಲ್ಲಿ ಹೋಗಿ ತಲೆಗೆ ಬಟ್ಟೆ ಹಾಕ್ಕೊಂಡು ಕುಳಿತಿದ್ದೇವಾ ಎಂದು ಪ್ರಶ್ನೆ ಮಾಡಿದ್ದಾರೆ.

"why don't you question the wearing of clothes on swamiji's head," siddaramaiah said. "what is wrong if muslim girls wear dupattas on their heads," siddaramaiah asked, to which sri rishikumara swamiji of kali mutt said.