ನೀವೇ ಪ್ರಶ್ನೆ ಕೇಳಿ ನೀವೇ ವಿವಾದ ಮಾಡುತ್ತೀರಲ್ಲಾ... ಹಿಜಾಬಿಗೂ ದುಪ್ಪಟ್ಟಕ್ಕೂ ವ್ಯತ್ಯಾಸ ಗೊತ್ತಿಲ್ವಾ ನಿಮಗೆ..? ಮಾಧ್ಯಮದ ವಿರುದ್ಧ ಸಿದ್ದರಾಮಯ್ಯ ಗರಂ ! 

26-03-22 06:32 pm       HK Desk news   ಕರ್ನಾಟಕ

ಸ್ವಾಮೀಜಿಗಳ ಶಿರವಸ್ತ್ರದ ಹೇಳಿಕೆ ವಿವಾದ ಆಗಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ.

ಮೈಸೂರು, ಮಾ.26 : ಸ್ವಾಮೀಜಿಗಳ ಶಿರವಸ್ತ್ರದ ಹೇಳಿಕೆ ವಿವಾದ ಆಗಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ. ನೀವೇ ಪ್ರಶ್ನೆ ಕೇಳಿ, ನೀವೇ ವಿವಾದ ಮಾಡುತ್ತೀರಲ್ಲಾ ಎಂದು ಮರು ಪ್ರಶ್ನೆ ಹಾಕಿದ್ದಾರೆ. 

ನಾನು ಸ್ವಾಮೀಜಿಗಳ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ. ನಾನು ನಿನ್ನೆ ಹಿಜಾಬ್ ಪದವೇ ಬಳಸಿಲ್ಲ. ಹಿಜಾಬ್ ಗೂ ದುಪ್ಪಟಕ್ಕೂ ವ್ಯತ್ಯಾಸ ಗೊತ್ತಿಲ್ವಾ ನಿಮಗೆ.? ಹಿಜಾಬೇ ಬೇರೆ, ದುಪ್ಪಟವೇ ಬೇರೆ. ಜನ ಸಾರ್ವಜನಿಕವಾಗಿ ಯಾವ ಯಾವ ವಸ್ತ್ರ ಬಳಸುತ್ತಾರೆಂದು ಹೇಳಿದ್ದೇನೆ. ಇದನ್ನು ಯಾವುದಕ್ಕೋ ನೀವು ಲಿಂಕ್ ಮಾಡಿ ವಿವಾದ ಸ್ಪಷ್ಠಿಸಿದ್ದೀರಿ ಎಂದು ಟೀಕಿಸಿದ್ದಾರೆ. 

ನನಗೆ ಹಿಂದಿನಿಂದಲೂ ಸ್ವಾಮೀಜಿಗಳ ಮೇಲೆ ಅಪಾರ ಗೌರವವಿದೆ. ನಾನು ಮಠಗಳ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ. ದುಪ್ಪಟ್ಟ ಹಾಕಿಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕೊಡಿ ಅಂತ ಕೇಳಿದ್ದೇನೆ. ನಾನು ಸಮವಸ್ತ್ರದ ವಿರೋಧಿ ಅಲ್ಲ. ಸಮವಸ್ತ್ರದ ಜೊತೆ ಅದೇ ಬಣ್ಣದ ದುಪ್ಪಟ್ಟಾಕ್ಕೆ ಅವಕಾಶ ನೀಡಿ ಅಂತ ಕೇಳಿದ್ದೇನೆ, ಇದರಲ್ಲಿ ತಪ್ಪೇನಿದೆ. ನಾನು ಸಲಹೆ ಕೊಟ್ಟಿದ್ದೇನೆ. ಸ್ವೀಕರಿಸುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಮಾಧ್ಯಮಗಳ ಪ್ರಶ್ನೆಗೆ ಫುಲ್ ಗರಂ ಆಗಿಯೇ ಉತ್ತರ ಕೊಟ್ಟಿದ್ದಾರೆ.

Opposition leader Siddaramaiah today issued a statement in opposition to the High Court's ruling on the issue of Hijab by Muslim students. That said. The speech has sparked controversy across the state, with many Swamiji responding. Meanwhile , former CM Siddaramaiah has tweeted his statement comparing Swamiji's clothes to hijabs .