ಎಪ್ರಿಲ್ ಮೊದಲ ವಾರದಲ್ಲಿ ಅಮಿತ್ ಷಾ, ಪ್ರಧಾನಿ ಮೋದಿ ರಾಜ್ಯಕ್ಕೆ ; ಸಿಎಂ ಬೊಮ್ಮಾಯಿ ಸುಳಿವು 

26-03-22 07:23 pm       Bengaluru Correspondent   ಕರ್ನಾಟಕ

ಎಪ್ರಿಲ್ ಮೊದಲ ವಾರದಲ್ಲಿ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಬಂದು ಹೋದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರೂ ರಾಜ್ಯಕ್ಕೆ ಬರಲಿದ್ದಾರೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಸುಳಿವು ನೀಡಿದ್ದಾರೆ. 

ಬೆಂಗಳೂರು, ಮಾ.26 : ಎಪ್ರಿಲ್ ಮೊದಲ ವಾರದಲ್ಲಿ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಬಂದು ಹೋದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರೂ ರಾಜ್ಯಕ್ಕೆ ಬರಲಿದ್ದಾರೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಸುಳಿವು ನೀಡಿದ್ದಾರೆ. 

ಅಮಿತ್ ಷಾ ಎಪ್ರಿಲ್ ಒಂದರಂದು ಕರ್ನಾಟಕಕ್ಕೆ ಬರಲಿದ್ದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಇದೇ ವೇಳೆ, ಬೆಂಗಳೂರಿನಲ್ಲಿ ಕ್ಷೀರಾಭಿವೃದ್ಧಿ ಬ್ಯಾಂಕ್ ಆರಂಭಿಸುವ ಬಗ್ಗೆ ಪ್ರಮುಖ ಮೀಟಿಂಗ್ ನಡೆಯಲಿದ್ದು ಅದರಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರದಲ್ಲಿ ಸಹಕಾರಿ ಸಚಿವರೂ ಆಗಿರುವ ಅಮಿತ್ ಷಾ ರಾಜ್ಯದಲ್ಲಿ ಸಹಕಾರಿ ವಲಯಕ್ಕೆ ಹೊಸ ಛಾಪು ನೀಡಲು ಮುಂದಾಗಿದ್ದಾರೆ. ಇದಕ್ಕಾಗಿ ಹೈನುಗಾರಿಕೆ ಕೃಷಿಕರಿಗೆ ಆರ್ಥಿಕ ಚೈತನ್ಯ ನೀಡುವ ನಿಟ್ಟಿನಲ್ಲಿ ಹೊಸ ಬ್ಯಾಂಕ್ ಆರಂಭಿಸಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ತಿಳಿಸಿದ್ದಾರೆ. 

Modi holds meet with Shah, Nadda - new govts in UP, Goa & Uttarakhand on  agenda | Latest News India - Hindustan Times

ಪ್ರಧಾನಿ ಮೋದಿ ಎಪ್ರಿಲ್ 5 ರಂದು ಬೆಂಗಳೂರು ಬರುವ ನಿರೀಕ್ಷೆ ಇದ್ದು ಇನ್ನೂ ದಿನ ಅಂತಿಮ ಆಗಿಲ್ಲ. ಸರಕಾರದ ಕಾರ್ಯಕ್ರಮ ಹಿನ್ನೆಲೆಯಲ್ಲಿ ಅವರು ಬರುತ್ತಿದ್ದಾರೆ. ಈ ವೇಳೆ, ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ ಆಗಲ್ಲ. ಸಂಪುಟದ ಬಗ್ಗೆ ಬೆಂಗಳೂರಿನಲ್ಲಿ ಮೀಟಿಂಗ್ ನಡೆಯಲ್ಲ. ಅಂಥ ಮೀಟಿಂಗ್ ಇದ್ದರೆ ದೆಹಲಿಗೆ ಬರಹೇಳುತ್ತಾರೆ ಎಂದು ಪ್ರಶ್ನೆ ಒಂದಕ್ಕೆ ಸಿಎಂ ಬೊಮ್ಮಾಯಿ ಉತ್ತರಿಸಿದರು. ಎಪ್ರಿಲ್ ಆರಂಭದಲ್ಲಿ ಅಮಿತ್ ಷಾ ರಾಜ್ಯ ಭೇಟಿ ವೇಳೆ ರಾಜ್ಯ ಬಿಜೆಪಿಗೆ ಸರ್ಜರಿ ನಡೆಸಲಿದ್ದಾರೆ ಎನ್ನುವ ಮಾಹಿತಿಗಳಿವೆ.

Prime Minister Narendra Modi is expected to arrive in the state on April 5. Basavaraj Bommai, CM, in Hubli, said that the matter is yet to be finalized. Amit Shah will arrive in the state on April 1. He said he will be attending the program of the Cooperative Department. The budget was presented. We have ordered the implementation at such a rapid pace . He said the committee was headed by the chief secretaries.