ಹಿಜಾಬ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ 2ನೇ ಅರ್ಜಿ ; ಖುರಾನ್, ಹದೀಸ್ ಬಗ್ಗೆ ತಪ್ಪಾಗಿ ಅರ್ಥೈಸಿದ್ದಾಗಿ ಮುಸ್ಲಿಂ ಲಾ ಬೋರ್ಡ್ ಆಕ್ಷೇಪ 

28-03-22 04:34 pm       Bengaluru Correspondent   ಕರ್ನಾಟಕ

ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ನ್ಯಾಯಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ತೀರ್ಪು ಮರು ಪರಿಶೀಲನೆ ನಡೆಸುವಂತೆ ಕೇಳಿಕೊಂಡಿದೆ.‌

ಬೆಂಗಳೂರು, ಮಾ.28 : ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ನ್ಯಾಯಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ತೀರ್ಪು ಮರು ಪರಿಶೀಲನೆ ನಡೆಸುವಂತೆ ಕೇಳಿಕೊಂಡಿದೆ.‌ 

ಮೊಹಮದ್ ರಹೀಂ, ಮುನೀಸಾ ಬುಸ್ರಾ, ಜೆಲಿಸಾ ಸುಲ್ತಾನಾ ಎಂಬವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ 2ನೇ ಅರ್ಜಿ ಇದಾಗಿದೆ. 

ಇಸ್ಲಾಂನಲ್ಲಿ ಹಿಜಾಬ್ ಅವಿಭಾಜ್ಯ ಅಂಗವಲ್ಲ. ಹಾಗಾಗಿ ಸರ್ಕಾರ ಸೂಚಿಸಿದ ಸಮವಸ್ತ್ರ ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿತ್ತು. ತೀರ್ಪಿನಲ್ಲಿ ಕುರಾನ್ ಬಗ್ಗೆ ತಪ್ಪಾದ ವ್ಯಾಖ್ಯಾನ ಮಾಡಿದ್ದು, ಹದೀಸ್ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ಇಸ್ಲಾಮಿಕ್ ಕಾನೂನುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಈ ಬಗ್ಗೆ ಹೈಕೋರ್ಟ್ ತೀರ್ಪನ್ನು ಮರುಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದೆ. 

Hijab ban: All India Muslim Personal Law Board moves SC against Karnataka  HC judgement

ಇದಕ್ಕೂ ಮುನ್ನ ಕೇರಳದ ಮುಸ್ಲಿಂ ಸಂಘಟನೆಯೊಂದು ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ದಾಖಲಿಸಿತ್ತು. ಸಮಸ್ತ ಕೇರಳ ಜಮಾತ್ ಉಲ್ ಉಲಾಮಾ ಸಂಘಟನೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ಕುರಾನ್ ಪ್ರಕಾರ ಮಹಿಳೆಯು ಕುತ್ತಿಗೆ, ತಲೆ ಮುಚ್ಚಿಕೊಳ್ಳುವುದು ಕಡ್ಡಾಯ ಎಂದು ಅರ್ಜಿಯಲ್ಲಿ ವಾದಿಸಿದೆ.

Islamic clerics organization "Samastha Kerala Jem-iyyathul Ulama" has filed a special leave petition in the Supreme Court against which upheld the ban on hijab in classrooms after holding that the wearing of headscarves by Muslim women was not an essential religious practice of Islam. The organization contends that the High Court's judgment is based on an erroneous interpretation of the Holy Quran and the Hadis and a wrongunderstanding of the Islamic law.