ಬ್ರೇಕಿಂಗ್ ನ್ಯೂಸ್
28-03-22 07:25 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.28: ಪಾಕಿಸ್ಥಾನದ ರಿಪಬ್ಲಿಕ್ ಡೇ ಹಿನ್ನೆಲೆಯಲ್ಲಿ ವಾಟ್ಸಪ್ ಸ್ಟೇಟಸ್ ಹಾಕ್ಕೊಂಡಿದ್ದ ಬಾಗಲಕೋಟ ಮೂಲದ 25 ವರ್ಷದ ಮುಸ್ಲಿಮ್ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ರಸಾ ವಿದ್ಯಾರ್ಥಿನಿಯೂ ಆಗಿರುವ ಬಾಗಲಕೋಟ ಜಿಲ್ಲೆಯ ಮುಧೋಳ್ ನಗರದ ನಿವಾಸಿ ಕುತುಮಾ ಶೇಖ್ ಬಂಧಿತ ವಿದ್ಯಾರ್ಥಿನಿ. ಮಾರ್ಚ್ 23ರ ಪಾಕಿಸ್ಥಾನದ ರಿಪಬ್ಲಿಕ್ ಡೇಯ ದಿನ ಈಕೆ ತನ್ನ ಮೊಬೈಲಿನಲ್ಲಿ ಉರ್ದು ಭಾಷೆಯಲ್ಲಿ ವಾಟ್ಸಪ್ ಸ್ಟೇಟಸ್ ಹಾಕ್ಕೊಂಡಿದ್ದಳು. ‘’ಅಲ್ಲಾ ಹರ್ ಮುಲ್ಕ್ ಮೇ ಇತ್ತಿಹಾದ್.. ಅಮನ್, ಸುಕೂನ್, ಅತಾ ಫಾರ್ಮಾ ಮೌಲಾ...’’ ಹೀಗೆಂದು ಪಾಕಿಸ್ಥಾನದ ಪರವಾಗಿ ಬರೆದಿದ್ದಾಳೆಂದು ಪೊಲೀಸ್ ದೂರು ದಾಖಲಾಗಿತ್ತು.
‘’ಓ ಅಲ್ಲಾ.. ಎಲ್ಲ ದೇಶಗಳಿಗೂ ಶಾಂತಿ, ಸೌಹಾರ್ದತೆಯಿಂದ ಇರಲೆಂದು ಆಶೀರ್ವದಿಸು..’’ ಎಂಬುದು ಆಕೆ ಬರೆದಿರುವ ಪದಗಳ ಕನ್ನಡ ಅನುವಾದ ಆಗಿದ್ದು ನಿರ್ದಿಷ್ಟವಾಗಿ ಪಾಕಿಸ್ಥಾನದ ಪದ ಉಲ್ಲೇಖ ಆಗಿರಲಿಲ್ಲ. ಆದರೆ ಈ ಸ್ಟೇಟಸ್ ವೈರಲ್ ಆಗುತ್ತಿದ್ದಂತೆ ಸಂಘಟನೆಯೊಂದರ ಕಾರ್ಯಕರ್ತ ಅರುಣ್ ಕುಮಾರ್ ಭಜಂತ್ರಿ ಎಂಬಾತ ಮುಧೋಳ ಠಾಣೆಗೆ ದೂರು ನೀಡಿದ್ದು ಈ ಸ್ಟೇಟಸ್ ಮೂಲಕ ಸಾಮರಸ್ಯ ಕದಡುವ ಯತ್ನ ಮಾಡಿದ್ದಾಗಿ ದೂರಿದ್ದ. ಯುವತಿ ವಿರುದ್ಧ ಪೊಲೀಸರು ಸೆಕ್ಷನ್ 153 (ಎ) ಮತ್ತು 505 (2) ಅಡಿ ಪ್ರಕರಣ ದಾಖಲಿಸಿದ್ದು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಕುತುಮಾ ಶೇಖ್ ಳನ್ನು ಮಾ.24ರಂದು ಪೊಲೀಸರು ವಶಕ್ಕೆ ಪಡೆದಿದ್ದರು. ಮರುದಿನವೇ ಆಕೆಗೆ ನ್ಯಾಯಾಲಯದ ಮೂಲಕ ಜಾಮೀನು ದೊರಕಿತ್ತು. ಪಾಕಿಸ್ಥಾನದ ರಿಪಬ್ಲಿಡ್ ಡೇ ದಿನವನ್ನು ಆಚರಿಸುವುದು ಆಕೆಯ ಉದ್ದೇಶ ಆಗಿತ್ತು. ಆ ಬಗ್ಗೆ ನಾವು ಕೂಡಲೇ ಸ್ಪಂದಿಸದಿದ್ದರೆ, ಪ್ರತಿಭಟನೆ, ಗಲಭೆಗಳಿಗೆ ಕಾರಣವಾಗುತ್ತಿತ್ತು. ಹಾಗಾಗಿ ಕೂಡಲೇ ಆಕೆಯ ವಿರುದ್ಧ ಕ್ರಮ ಜರುಗಿಸಿದ್ದೆವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
A 25-year-old woman was arrested in Karnataka's Bagalkot district on Monday for allegedly posting a Whatsapp status that wished Pakistan on its Republic Day, according to the superintendent of police. The woman, Kuthma Sheikh, is a Mudhol native and a student at a neighbouring madrasa.According to authorities, she wrote in Urdu on her WhatsApp status on March 23, Pakistan's Republic Day, “Allah Har Mulk me Ittihaad…Aman...Sukoon…Ata Farma Maula." Which translates to "May God bless every nation with peace, unity, and harmony."
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 10:06 pm
Mangalore Correspondent
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
Ullal, Mangalore: ಸಮುದ್ರ ಮಧ್ಯದಲ್ಲೇ ಪೋರ್ಚುಗೀಸರ...
17-09-25 01:34 pm
Dharmasthala, Lakshmish Tolpadi, Mangalore: ಧ...
16-09-25 07:48 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm