SSLC ಪರೀಕ್ಷೆಯಲ್ಲಿ ಗೋಲ್ ಮಾಲ್ ; ಓರ್ವ ಯುವತಿ ಸೇರಿದಂತೆ 6 ನಕಲಿ ಅಭ್ಯರ್ಥಿಗಳ ಬಂಧನ 

28-03-22 08:14 pm       HK Desk news   ಕರ್ನಾಟಕ

ರಾಜ್ಯಾದ್ಯಂತ ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನವೇ ಚಿಕ್ಕೋಡಿಯ ಆರ್‌ಡಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಸಲಿ ವಿದ್ಯಾರ್ಥಿಗಳ ಪರವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಬಂದಿದ್ದ ಓರ್ವ ಯುವತಿ ಸೇರಿದಂತೆ  ಆರು ಮಂದಿಯನ್ನು ಬಂಧಿಸಲಾಗಿದೆ.

ಬೆಳಗಾವಿ, ಮಾ 28: ರಾಜ್ಯಾದ್ಯಂತ ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನವೇ ಚಿಕ್ಕೋಡಿಯ ಆರ್‌ಡಿ ಕಾಲೇಜಿನ ಪರೀಕ್ಷಾಕೇಂದ್ರದಲ್ಲಿ ಅಸಲಿ ವಿದ್ಯಾರ್ಥಿಗಳ ಪರವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಬಂದಿದ್ದ ಓರ್ವ ಯುವತಿ ಸೇರಿದಂತೆ  ಆರು ಮಂದಿಯನ್ನು ಬಂಧಿಸಲಾಗಿದೆ.

ವಿದ್ಯಾರ್ಥಿಗಳ ಹಾಲ್ ಟಿಕೇಟ್ ಪರಿಶೀಲಿಸುತ್ತಿದ್ದಾಗ ಆರು ಮಂದಿ ಸಿಕ್ಕಿಬಿದ್ದಿದ್ದಾರೆ. ಪರೀಕ್ಷೆಗೆ ಹಾಜರಾಗಬೇಕಿದ್ದ ನಿಜವಾದ ವಿದ್ಯಾರ್ಥಿಗಳ ಬದಲಿಗೆ ಪರೀಕ್ಷೆ ಬರೆಯಲು ಇವರು ಬಂದಿದ್ದರು. ಕೂಡಲೇ ಆರು ಮಂದಿಯನ್ನು ಅಧಿಕಾರಿಗಳು ರೆಡ್‌ಹ್ಯಾಂಡ್‌ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಗೋಕಾಕ ತಾಲೂಕಿನ ರಾಹುಲ್ ಕಿಲ್ಲಿಕೇಟರ್, ಕೊಂಕಣಿವಾಡಿಯ ಭೀಮಶಿ ಹುಲಿಕುಂದ, ಬಾಗಲಕೋಟೆ ಜಿಲ್ಲೆಯ ಕಾರ್ತಿಕ್ ಕುಂಬಾರ್, ಬಾಗಲಕೋಟೆ ಜಿಲ್ಲೆಯ ಸಿದ್ದು ಜೋಗಿ, ಗಿರಿಸಾಗರದ ಮಹಾಂತೇಶ ಡೊಳ್ಳಿನವರ್, ಬಾಗಲಕೋಟೆ ಜಿಲ್ಲೆಯ ಸವಿತಾ ಹೊಸೂರು ಎಂದು ಗುರುತಿಸಲಾಗಿದೆ.

SSLC Exam Six people found writing sslc exams of different students with fake hall ticket in Chikodi.