ಬ್ರೇಕಿಂಗ್ ನ್ಯೂಸ್
29-03-22 04:26 pm HK Desk news ಕರ್ನಾಟಕ
ಶಿವಮೊಗ್ಗ, ಮಾ.29 : ಮಾಮೂಲಿ ಪಡ್ಕೊಂಡು ಜೇಬು ತುಂಬಿಸ್ಕೊಳ್ಳುತ್ತಾ ಹಾಯಾಗಿರುವ ಪೊಲೀಸರ ಪಾಲಿಗೆ ಗ್ರಹಚಾರ ಕೈಕೊಟ್ಟಾಗ ಏನಾಗುತ್ತೆ ಅನ್ನೋದಕ್ಕೆ ಈ ಪ್ರಕರಣ ನಿದರ್ಶನ. ಅಪರೂಪಕ್ಕೆ ಎಂಬಂತೆ ಶಿವಮೊಗ್ಗ ಎಸ್ಪಿ ಸಾಹೇಬ್ರು ತೀರ್ಥಹಳ್ಳಿ ರಸ್ತೆಯಲ್ಲಿ ಬರುತ್ತಿದ್ದಾಗ ಮರಳು ಲಾರಿ ಎದುರಾಗಿತ್ತು. ಇಷ್ಟೊತ್ತಿಗೆ ಮರಳು ಎಲ್ಲಿ ಸಾಗಿಸ್ತಿದೀಯಾ ಎಂದು ಚಾಲನಲ್ಲಿ ಕೇಳಿದ್ದಾರೆ. ಲಾರಿ ಚಾಲಕ ಸರ್, ಇದು ಮಾಳೂರು ಎಸ್ಸೈ ಕಡೇದು ಎಂದು ನಿಜ ಬಾಯಿ ಬಿಟ್ಟಿದ್ದಾನೆ. ಚಾಲಕನ ಮಾತು ಕೇಳಿ ತಲೆ ಗಿರ್ ಆಗಿದ್ದ ಎಸ್ಪಿ ನೇರವಾಗಿ ಮಾಳೂರು ಎಸ್ಸೈಗೆ ಪೋನ್ ತಿರುವಿ ಹಾಕಿ ಮುಖಕ್ಕೆ ಜಾಡಿಸಿದ್ದರು. ಅಷ್ಟಕ್ಕೆ ಮುಗೀತಿದ್ರೆ ವಿಷ್ಯ ಅಲ್ಲಿಗೇ ಚುಕ್ತಾ ಆಗ್ತಿತ್ತು. ಆದರೆ ಎಸ್ಪಿ ಮೇಲಿನ ಕೋಪವನ್ನು ಎಸ್ಸೈ ಮರಳು ಮಾಲೀಕನ ಮೇಲೆ ತೀರಿಸಿಕೊಂಡು ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ತನ್ನದೇ ಕಾಲ ಬುಡಕ್ಕೆ ತಪ್ಪಲಿ ಎಳಕ್ಕೊಂಡಿದ್ದಾನೆ. ಅಲ್ಲದೆ, ಗೃಹ ಸಚಿವರ ಊರಲ್ಲಿ ನಡೀತಿದ್ದ ಮರಳು ದಾದಾಗಿರಿಯನ್ನೂ ಹೊರಗೆ ಹಾಕಿದ್ದಾನೆ.
ಕಳೆದ ಶನಿವಾರ ತೀರ್ಥಹಳ್ಳಿಯಲ್ಲಿ ಶಿಕಾರಿ ಫೈರಿಂಗ್ ನಡೆದು ಓರ್ವ ಸಾವನ್ನಪ್ಪಿದ ಘಟನೆ ನಡೆದಿತ್ತು. ಪ್ರಕರಣದ ಬಳಿಕ ಶಿವಮೊಗ್ಗ ಎಸ್ಪಿ ಲಕ್ಷ್ಮಿಪ್ರಸಾದ್ ಘಟನಾ ಸ್ಥಳಕ್ಕೂ ಭೇಟಿ ನೀಡಿದ್ದರು. ಆದ್ರೆ ಅಲ್ಲಿಂದ ಶಿವಮೊಗ್ಗಕ್ಕೆ ವಾಪಸ್ಸು ಬರುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ನಡೆದ ಘಟನೆ ರಾಜ್ಯದ ಗೃಹಸಚಿವರ ಸ್ವಂತ ಊರಲ್ಲಿ ಪೊಲೀಸರು ನಡೆಸುತ್ತಿರುವ ಮರಳು ಮಾಫಿಯಾವನ್ನು ಹೊರಗೆ ತರಿಸಿದೆ. ಇದಕ್ಕೆ ಕಾರಣವಾಗಿದ್ದು ಮಾಳೂರು ಎಸ್ಐ ಜಯ ನಾಯಕ್ ಮರಳು ಮಾಲೀಕನಿಗೆ ಕರೆ ಮಾಡಿ ಆವಾಜ್ ಹಾಕಿದ್ದು.
ಎಸ್ಪಿ ತನಗೆ ಬೈದಿದ್ದನ್ನು ಕೇಳಿ ಕೆರಳಿಹೋದ ಎಸ್ಐ ಜಯ ನಾಯಕ್ ಮರಳು ಮಾಲೀಕ ಮತ್ತು ಅದರ ಚಾಲಕನಿಗೆ ಕರೆ ಮಾಡಿ ಬೈದಿದ್ದಾನೆ. ಇಬ್ಬರಿಗೂ ಮಾತಿಗೆ ಮಾತು ಆಗಿದ್ದು ಮರಳು ಮಾಲೀಕ ಹೋಮ್ ಮಿನಿಸ್ಟರ್ ಗೆ ಹೇಳ್ತೀನಿ, ಏನು ಮಾಡಬೇಕು ಗೊತ್ತು ಎಂದು ತಿರುಗಿ ಬೈದಿದ್ದಾನೆ. ಅದಕ್ಕೆ ಎಸ್ಐ ಜಯ ನಾಯಕ್ ಸೊಂಟದ ಕೆಳಗಿನ ಭಾಷೆಯಲ್ಲಿ ಅವಾಚ್ಯವಾಗಿ ನಿಂದಿಸಿದ್ದು ನೀನ್ ಹೇಗೆ ದಂಧೆ ಮಾಡ್ತೀಯಾ ನೋಡ್ಕೊಳ್ತೀನಿ.. ನಿನ್ನ ದಂಧೆ ಮಾಡೋದಕ್ಕೆ ಬಿಡೋದಿಲ್ಲ.. ಬೆಳಗ್ಗೆ ಗಾಡಿ ತಗೊಂಡ್ ಬಾ ಸ್ಟೇಷನ್ಗೆ ಎಂದು ಆವಾಜ್ ಹಾಕಿದ್ದ. ಪ್ರತಿಯಾಗಿ ಜ್ಞಾನೇಂದ್ರರಿಗೆ ಹೇಳ್ತೀನಿ ಎಂದಿದ್ದಕ್ಕೆ ಹೋಮ್ ಮಿನಿಸ್ಟರ್ಗೆ ಹೇಳ್ತೀಯಾ, ಹೇಳ್ಕೋ ಹೋಗೋ ಮಗನೇ ಎಂದು ಗದರಿಸಿದ್ದಾನೆ.
ಆಡಿಯೋ ರೆಕಾರ್ಡ್ ಮಾಡ್ಕಂಡು ಯಾರಿಗೆ ಹೇಳ್ತೀಯೋ ಹೇಳ್ಕೋ.. ನನ್ನನ್ನು ಎನೂ ಮಾಡಲು ಆಗೋದಿಲ್ಲ. ಎದುರಿರುತ್ತಿದ್ರೆ ನಿನ್ನ ಬೂಟು ಕಾಲಲ್ಲಿ ಒದೀತ್ತಿದ್ದೆ, ನಿನ್ನ ಲಾರಿ ಒಡೆದಾಕ್ತಿದ್ದೆ ಎಂದು ಹೇಳುತ್ತಿರುವುದನ್ನು ಮರಳು ಲಾರೀ ಮಾಲೀಕ ರೆಕಾರ್ಡ್ ಮಾಡಿಕೊಂಡಿದ್ದಾರೆ. ಸದ್ಯ ಈ ಆಡಿಯೋ ಮರಳು ಲಾರೀ ಮಾಲೀಕರ ನಡುವೆ ವೈರಲ್ ಆಗಿದ್ದು , ಮೊದಲೇ ಲಾಸಲ್ಲಿದ್ದೇವೆ, ಇದರ ನಡುವೆ ಈ ರೀತಿಯ ಅವಮಾನ ಸಹಿಸಲಾಗದು ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ತಿಂಗಳಿಗೆ ಮಾಮೂಲಿ ಲೆಕ್ಕದಲ್ಲಿ ಇವ್ರಿಗೆ 30 ಸಾವಿರ ಕೊಟ್ಟರೂ, ಸಾಲುತ್ತಿಲ್ಲ.. ಒಬ್ಬೊಬ್ರಿಗೆ ಅಷ್ಟಿಷ್ಟು ಕೊಡಬೇಕು ಎಂದು ಹಲುಬಿದ್ದಾರೆ.
ಆವಾಜ್ ಹಾಕಿದ ಎಸ್ಐ ಅಮಾನತು
ಮಾಳೂರು ಠಾಣೆ ಎಸ್ಐ ಜಯನಾಯಕ್ ವಿರುದ್ಧ ಈ ಹಿಂದೆಯೂ ಹೋಮ್ ಮಿನಿಸ್ಟರ್ ಆರಗ ಜ್ಞಾನೇಂದ್ರರಿಗೆ ಸಾಕಷ್ಟು ದೂರುಗಳು ಹೋಗಿದ್ದವು. ಆದರೆ ಸಚಿವರು ತಿದ್ದಿಕೊಂಡು ಕೆಲಸ ಮಾಡಲು ಸೂಚಿಸಿದ್ದರೇ ವಿನಾ ಕ್ರಮ ಜರುಗಿಸಿರಲಿಲ್ಲ. ಇದೀಗ ಎಸ್ಐ, ಹೋಮ್ ಮಿನಿಸ್ಟರ್ ಬಗ್ಗೆನೂ ಕೇವಲವಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು ಜಯನಾಯಕ್ ಪಾಲಿಗೆ ಉರುಳಾಗಿದೆ. ಆಡಿಯೋ ಕೇಳಿಸಿಕೊಂಡು ಸಿಟ್ಟಾದ ಪೂರ್ವ ವಲಯ ಐಜಿ ತ್ಯಾಗರಾಜನ್, ಎಸ್ಐ ಜಯನಾಯಕ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
Shivamogga Police Sub Inspector involved in high level sand mafia, suspended by SP after his acts came to light after a same track was stopped by SP Lakshmi Prasad. The suspended SI has been identified as Jaya Nayak.
06-02-25 07:55 pm
Bangalore Correspondent
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
06-02-25 10:16 pm
Mangalore Correspondent
Prasad Attavar, Saloon Attack, Mangalore: ಮಸಾ...
05-02-25 10:51 pm
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
06-02-25 09:32 pm
HK News Desk
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm