ರಾಯಚೂರು ನಗರಸಭೆ ಸದಸ್ಯೆ ಮಹಿಳೆಯ ಅಪಹರಣ ; ಶಾಸಕ ಶಿವರಾಜ ಪಾಟೀಲ್ ವಿರುದ್ಧ ದೂರು 

29-03-22 10:33 pm       Bengaluru Correspondent   ಕರ್ನಾಟಕ

ರಾಯಚೂರು ನಗರಸಭೆ ಸದಸ್ಯೆ ಮಹಿಳೆಯನ್ನು ರಾಯಚೂರು ಶಾಸಕ ಶಿವರಾಜ ಪಾಟೀಲ್ ಕಿಡ್ನಾಪ್ ಮಾಡಿದ್ದಾಗಿ ಪೊಲೀಸ್ ದೂರು ನೀಡಲಾಗಿದೆ. 

ಬೆಂಗಳೂರು, ಮಾ.29: ರಾಯಚೂರು ನಗರಸಭೆ ಸದಸ್ಯೆ ಮಹಿಳೆಯನ್ನು ರಾಯಚೂರು ಶಾಸಕ ಶಿವರಾಜ ಪಾಟೀಲ್ ಕಿಡ್ನಾಪ್ ಮಾಡಿದ್ದಾಗಿ ಪೊಲೀಸ್ ದೂರು ನೀಡಲಾಗಿದೆ. 

ರಾಯಚೂರು ನಗರಸಭೆ ಸದಸ್ಯೆ ಶೈನಾಜ್ ಬೇಗಂ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಬೆಳಗ್ಗೆ 5 ಗಂಟೆಗೆ ಇನೋವಾ ಕಾರಿನಲ್ಲಿ ಬಂದಿದ್ದ ತಂಡ ಬೇಗಂ ಅವರನ್ನ ಕಿಡ್ನಾಪ್ ಮಾಡಿದ್ದಾರೆಂದು ಆರೋಪ ಕೇಳಿಬಂದಿದೆ. 

ರಾಯಚೂರು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಮಾ.30 ರಂದು ಚುನಾವಣೆ ನಡೆಯಲಿದೆ.‌ ಶೈನಾಜ್ ಬೇಗಂ ರಾಯಚೂರು ನಗರಸಭೆಯ 26ನೇ ವಾರ್ಡ್ ಸದಸ್ಯೆಯಾಗಿದ್ದು ಅಧ್ಯಕ್ಷ ಚುನಾವಣೆಗೆ ಗೈರಾಗುವಂತೆ ಮಾಡಲು ಕಿಡ್ನಾಪ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.‌ ಶಾಸಕ ಶಿವರಾಜ್ ಪಾಟೀಲ್ ಕಡೆಯವರು ತಾಯಿಯನ್ನು ಕಿಡ್ನಾಪ್ ಮಾಡಿದ್ದಾಗಿ ಬೇಗಂ ಪುತ್ರ ಬೆಂಗಳೂರು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ. 

ನನ್ನ ತಾಯಿಗೆ ಮತ್ತು ನನಗೆ ಏನಾದ್ರೂ ಆದರೆ ಶಾಸಕ ಶಿವರಾಜ್ ಪಾಟೀಲ್ ನೇರ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತಾಯಿಯನ್ನ ಶಾಸಕರ ಬೆಂಬಲಿಗರ ಕೈಯಿಂದ ರಕ್ಷಿಸುವಂತೆ ವಕೀಲರ ಜೊತೆಗೆ ಬಂದ ಬೇಗಂ ಪುತ್ರ ಮನವಿ ಮಾಡಿದ್ದಾರೆ.

Raichur Municipal Council Member Shivaraja Patil has been abducted by a Raichur Municipal Council member.