ಬ್ರೇಕಿಂಗ್ ನ್ಯೂಸ್
30-03-22 02:47 pm HK Desk news ಕರ್ನಾಟಕ
ಚಿತ್ರದುರ್ಗ, ಮಾ.30: ಅವಧಿ ಪೂರ್ವ ಎಲೆಕ್ಷನ್ ಮಾಡಿದ ಎಲ್ಲರೂ ಅಲ್ಲಿಗೇ ಮುಗಿದು ಹೋಗಿದ್ದಾರೆ. ಎಸ್.ಎಂ ಕೃಷ್ಣ ಅವಧಿಯಲ್ಲಿ ಆರು ತಿಂಗಳ ಮುನ್ನವೇ ಚುನಾವಣೆ ನಡೆಸಿದ್ದರು. ಅವರೂ ಮತ್ತೆ ಅಧಿಕಾರಕ್ಕೆ ಬರಲಿಲ್ಲ. ಅವಧಿ ಪೂರ್ವ ಎಲೆಕ್ಷನ್ ಯಾಕೆ ಮಾಡುತ್ತಾರೆ ಅಂದ್ರೆ, ಜನರಿಗೆ ಮತ್ತು ಆಳುವವರಿಗೆ ಸರಕಾರದ ಬಗ್ಗೆ ನಂಬಿಕೆ ಉಳಿದಿಲ್ಲ ಎಂದರ್ಥ ಎಂದು ವಿಶ್ಲೇಷಿಸಿದ್ದಾರೆ ಹಿರಿಯ ನಾಯಕ, ಶಾಸಕ ಜಿಟಿ ದೇವೇಗೌಡ.
ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇದ್ದಾಗ, ಅವಧಿ ಪೂರ್ವ ಚುನಾವಣೆ ಮಾಡುತ್ತಾರೆ ಅಂದರೆ ಸರ್ಕಾರದ ಮೇಲೆ ಜನರಿಗೆ ಮತ್ತು ಆಳುವವರಿಗೆ ನಂಬಿಕೆ ಇಲ್ಲ ಎಂದೇ ಅರ್ಥ. ಅವಧಿ ಪೂರ್ವ ಚುನಾವಣೆ ಯಾರು ಆಡಳಿತ ನಡೆಸುತ್ತಿದ್ದಾರೋ ಅವರಿಗೇ ಅನಾಹುತ ಎಂದು ಹೇಳಿದ್ದಾರೆ.
ಜಾತ್ರೆಗಳಲ್ಲಿ ಮುಸ್ಲಿಂ ಅಂಗಡಿ ನಿಷೇಧ ವಿಚಾರದಲ್ಲಿ ಪ್ರತಿಕ್ರಿಯಿಸಿದ ಜಿಟಿಡಿ, ವಾಲ್ಮೀಕಿ ಹೇಗಿದ್ದ ಹೇಗಾದರು ಅಂತ ಬಹಳ ಮಂದಿ ಹೇಳುತ್ತಾರೆ. ಬಿಜ್ಜಳನ ಕಾಲದಲ್ಲಿ ಬಸವಣ್ಣ ಏನಾಗಿದ್ದರು, ಆನಂತರ ಏನಾಗಿದ್ದರು ಅನ್ನೋದು ಗೊತ್ತು. ಯಾವುದೇ ವ್ಯಕ್ತಿ ಇಂಥದ್ದೆ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಲ್ಲ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ.
ಆಡಳಿತ ನಡೆಸುವವರಲ್ಲಿ ಒಳ್ಳೆಯ ಭಾವನೆ ಇರಬೇಕು. ಈ ನಾಡಿನಲ್ಲಿ ಇರೋದು ಗಂಡು ಮತ್ತು ಹೆಣ್ಣು ಎರಡು ಜಾತಿಗಳು ಮಾತ್ರ. ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡುತ್ತಾರೆ, ರಾಜರು ಇಂದು ಯಾರು ಕೂಡ ಉಳಿದಿಲ್ಲ. ಸತ್ತವರನ್ನೇ ಹುಡುಕಿಕೊಂಡು ಹೋಗುತ್ತೀರಾ, ಸತ್ತವರನ್ನ ಮತ್ತೆ ಮತ್ತೆ ಹೊರ ತೆಗೆಯುತ್ತಿದ್ದೀರಿ ಯಾಕೆ. ಅವರ ಮೂಳೆಗಳು ಕೂಡ ಈಗ ಉಳಿದಿಲ್ಲ. ಪಾಠದಲ್ಲಿ ಉಳಿಸಿ, ತೆಗೆಯಿರಿ ಎಂದು ಮಕ್ಕಳು ಹೇಳುತ್ತಾರೆಯೇ. ಟಿಪ್ಪು ಸುಲ್ತಾನ್ ಆದರೂ ತೆಗೆಯಿರಿ, ರಾಜರನ್ನಾದರೂ ತೆಗೆಯಿರಿ. ಅವರೆಲ್ಲ ಯುದ್ದಗಳನ್ನ ಮಾಡಿದ್ದಾರೆ, ಹೊಂದಾಣಿಕೆನೂ ಮಾಡಿದ್ದಾರೆ. ಚೀನಾ ಜೊತೆಗೆ ಭಾರತ ಮಾತುಕತೆ, ಒಪ್ಪಂದ ಎಲ್ಲ ಮಾಡುತ್ತೆ. ಹಾಗಂತ, ಅದರ ಬಗ್ಗೆ ಕಲಿಯೋದು ತಪ್ಪಾಗುತ್ತದೆಯೇ..?
ನಮ್ಮ ದೇಶದಲ್ಲಿ ಹುಟ್ಟಿದ ನಮ್ಮ ಅಣ್ಣ ತಮ್ಮಂದಿರು ಏನು ಪಾಪ ಮಾಡಿದ್ದಾರೆ. ಅವರನ್ನು ವ್ಯಾಪಾರ ಮಾಡಬೇಡಿ ಎಂದು ತಡೆದಲ್ಲಿ ಅವರು ಎಲ್ಲಿ ಹೋಗಬೇಕು. ಆ ರೀತಿಯ ತಾರತಮ್ಯ ಮಾಡೋದು ಸರಿಯಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆ ಬರುವ ರೀತಿ ಕಾನೂನು ಜಾರಿಗೆ ತನ್ನಿ ಎನ್ನೋದು ನನ್ನ ಕಳಕಳಿ ಎಂದು ಜಿಟಿ ದೇವೇಗೌಡ ಹೇಳಿದರು.
All those who did the pre-election election are over. The election was held six months before SM Krishna's term. They never came to power again. Why does a pre-election election Andrea analyzes the people and the rulers who have no faith in the government?
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm