ಬ್ರೇಕಿಂಗ್ ನ್ಯೂಸ್
31-03-22 09:56 pm HK Desk news ಕರ್ನಾಟಕ
ತುಮಕೂರು, ಮಾ.31 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಆಗಮಿಸಿದ್ದಾರೆ. ಸಿದ್ಧಗಂಗಾ ಶ್ರೀಗಳ ಜನ್ಮದಿನ ಹಿನ್ನೆಲೆಯಲ್ಲಿ ಅದ್ದೂರಿ ಉತ್ಸವ ನಡೆಯುತ್ತಿದ್ದು ರಾಹುಲ್ ಗಾಂಧಿಯವರು ಮಠದಲ್ಲಿ ಗದ್ದುಗೆ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ, ಮಠದ ಧ್ಯಾನ ಮಂದಿರಕ್ಕೆ ಭೇಟಿಯಿತ್ತು ಕೆಲಕಾಲ ರಾಹುಲ್ ಧ್ಯಾನ ನಿರತರಾಗಿದ್ದಾರೆ. ಬಳಿಕ ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಆನಂತರ ಮಠದ ಭಕ್ತರು ಮತ್ತು ಸಾವಿರಾರು ಮಕ್ಕಳನ್ನುದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡಿದ್ದಾರೆ. ಇವತ್ತು ನಾನು ಇಲ್ಲಿಗೆ ಬಂದಿರುವುದು ಬಹಳಷ್ಟು ಖುಷಿ ತಂದಿದೆ. ಸ್ವಾಮೀಜಿಯವರ ದರ್ಶನವಾಗಿರುವುದು, ಸ್ವಾಮೀಜಿ ಜೊತೆಗೆ ಮಾತುಕತೆ ಮಾಡಿರುವುದು ಬಹಳ ಖುಷಿ ತಂದಿದೆ. ಈ ಮೊದಲು ಕೂಡ ನಾನು ಇಲ್ಲಿಗೆ ಬಂದಿದ್ದೆ. ನನ್ನ ತಾಯಿ, ತಂದೆಯವರು ಕೂಡ ಈ ಮಠಕ್ಕೆ ಬಂದಿದ್ದರು. ನಮ್ಮ ಕುಟುಂಬ ಹಾಗೂ ಮಠದ ಸಂಬಂಧ ಹೊಸದೇನಲ್ಲ. ಮಠದೊಂದಿಗೆ ಗೌರವಯುತ ಸಂಬಂಧವಿದೆ ಎಂದು ಹೇಳಿದ್ದಾರೆ.
ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಶಿಕ್ಷಣ ದಾಸೋಹದ ಸೇವೆ ಸಂತೋಷ ತಂದಿದೆ. ಇಲ್ಲಿ ಸಾವಿರಾರು ಮಕ್ಕಳಿಗೆ ಆಶ್ರಯ ನೀಡಲಾಗಿದೆ. ಬಸವಣ್ಣನವರು ಹೇಳಿದಂತೆ, ಯಾವುದೇ ಜಾತಿ, ಧರ್ಮ, ದ್ವೇಷ ಅಸೂಯೆ ಇಲ್ಲದಂತೆ ನಾವು ಬದುಕಬೇಕೆಂಬುದು ಮಂತ್ರವಾಗಬೇಕು. ಇಲ್ಲಿ ಬೋಧಿಸುವ ಭ್ರಾತೃತ್ವ ಇಡೀ ದೇಶಕ್ಕೆ ಬೇಕಾಗಿದೆ. ದೇಶದಲ್ಲಿ ಹರಡುತ್ತಿರುವ ದ್ವೇಷ ಕಡಿಮೆಯಾಗಬೇಕಿದೆ. ಭಾತೃತ್ವ ಹರಡುತ್ತಿರುವ ಸ್ವಾಮೀಜಿ ಹಾಗೂ ಮಠದವರಿಗೆ ಧನ್ಯವಾದ ತಿಳಿಸುತ್ತೇನೆ.
ನಾನು ಶಿವಕುಮಾರಸ್ವಾಮೀಜಿ ಅವರನ್ನು ನೆನಪು ಮಾಡಿಕೊಳ್ಳುತ್ತೇನೆ. ಅವರು ತುಂಬಾ ವರ್ಷಗಳ ಕಾಲ ನಮಗೆ ಮಾರ್ಗದರ್ಶನ ನೀಡಿದರು. ಈ ಹಿಂದೆ ಶಿವಕುಮಾರ ಸ್ವಾಮೀಜಿಯವರುನ್ನೂ ಭೇಟಿ ಮಾಡಿದ್ದೆ. ಅವರು ಇಂದು ಇಲ್ಲದಿರುವುದು ನೋವುಂಟು ಮಾಡಿದೆ. ಆದರೆ ಸ್ವಾಮೀಜಿಯ ಮಾರ್ಗದರ್ಶನ ನಮ್ಮೊಂದಿಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಯುವಕರು, ದೇಶದ ಜನರು ನಡೆಯಬೇಕಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿ, ರಾಹುಲ್ ಗಾಂಧಿಯವರು ಇದೇ ಮೊದಲಲ್ಲ ಮಠಕ್ಕೆ ಭೇಟಿ ಕೊಟ್ಟಿರುವುದು. ಹಿಂದೆ ಇಂದಿರಾ ಗಾಂಧಿ ಆಗಮಿಸಿದ್ದಾಗ ಅವರದೇ ಕಾರಿನಲ್ಲಿ ಹೋಗಿದ್ದೆ. ತಮ್ಮ ಭದ್ರತಾ ಸಿಬ್ಬಂದಿಯನ್ನು ಕಾರಿನಿಂದ ಕೆಳಗಿಳಿಸಿ ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದರು ಎಂದು ಸ್ಮರಿಸಿದರು. ನಾವೆಲ್ಲರೂ ಮನುಷ್ಯರಾಗಿ ಬದುಕಬೇಕು. ದ್ವೇಷ, ಅಸೂಯೆ ದೂರ ಸರಿಸಬೇಕು. ಬಸವಣ್ಣನವರ ಸಂದೇಶದಂತೆ ನಾವು ಬದುಕ ಬೇಕಾಗಿದೆ. ನಮ್ಮ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ನಾಯಕತ್ವ ಸಂಪನ್ನವಾಗಿರಬೇಕು. ರಾಹುಲ್ ಅವರಿಗೆ ದೇವರು ಮತ್ತಷ್ಟು ಶಕ್ತಿ ತುಂಬಲಿ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.
The Siddha Ganga monastery's Lingayakya Shivakumar Swamiji Jayanti program will be held on Friday, the Thursday before which the blessings of the Siddhalinga Swamiji will be discussed and a few talks with Swamiji.KPCC President DK Shivamar, Leader of the Opposition in the Assembly Siddaramaiah, KPCC Campaign Committee Chairman MB Patila and MLA Dr G Parameshwara were present.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm