ಬ್ರೇಕಿಂಗ್ ನ್ಯೂಸ್
01-04-22 08:56 pm Bengaluru Correspondent ಕರ್ನಾಟಕ
ಬೆಂಗಳೂರು, ಎ.1: ನಾನು ಬಿಜೆಪಿಯ ಸದಸ್ಯ, ಹಾಗೆಂದು ಸತ್ಯವನ್ನು ಹೇಳಲೇಬೇಕಾಗುತ್ತದೆ. ಹಿಜಾಬ್ ಮತ್ತು ಹಲಾಲ್ ವಿವಾದ ಎಬ್ಬಿಸಿರುವುದರ ಹಿಂದೆ ವಿಶ್ವ ಹಿಂದು ಪರಿಷತ್ ಮತ್ತು ಆರೆಸ್ಸೆಸ್ ಷಡ್ಯಂತ್ರ ಇದೆ. ಈ ರೀತಿ ಸಮಾಜದಲ್ಲಿ ಸಾಮರಸ್ಯ ಕದಡುವುದು ಸರಿಯಲ್ಲ. ಈ ಬಗ್ಗೆ ಅಗತ್ಯವಾಗಿ ರಾಜ್ಯ ಸರಕಾರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಧ್ಯಪ್ರವೇಶ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ, ಹಿರಿಯ ಮುಖಂಡ ಎಚ್.ವಿಶ್ವನಾಥ್ ಅಭಿಪ್ರಾಯ ಪಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ವಿಶ್ವನಾಥ್, ಹಲಾಲ್ ಅನ್ನುವುದನ್ನು ಹಲವು ವರ್ಷಗಳಿಂದಲೂ ಅನುಸರಿಸಿ ಬರುತ್ತಿದ್ದಾರೆ. ಈಗ ಅದನ್ನು ಸರಿಯಲ್ಲ ಎಂದು ಅಲ್ಲಗಳೆಯುವುದಕ್ಕೆ ಆಗಲ್ಲ. ಅಲ್ಲದೆ, ದೇವಸ್ಥಾನ ಪರಿಸರದಲ್ಲಿ ಒಂದು ವರ್ಗವನ್ನು ನೀವು ವ್ಯಾಪಾರ ಮಾಡುವಂತಿಲ್ಲ ಎಂದು ಹೇಳುವುದೂ ಸರಿಯಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ನಡೆಸುತ್ತಿದೆ. ಆರೆಸ್ಸೆಸ್ ಅಥವಾ ವಿಶ್ವ ಹಿಂದು ಪರಿಷತ್ ಆಡಳಿತ ನಡೆಸುತ್ತಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುತ್ತಿದ್ದರೆ ಇಂಥ ವಿಚಾರಗಳು ಮುನ್ನೆಲೆಗೆ ಬರುತ್ತಿರಲಿಲ್ಲ. ಹಾಗಾಗಿ ಯಡಿಯೂರಪ್ಪ ಈ ಬಗ್ಗೆ ಮಧ್ಯಪ್ರವೇಶ ಮಾಡಿ, ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ಹೇಳಿದರು.
ಭಾರತ ಬಹು ಧರ್ಮ, ಭಾಷೆಗಳುಳ್ಳ ವಿಭಿನ್ನ ದೇಶ. ಈ ದೇಶಕ್ಕೆ ಅಂಬೇಡ್ಕರ್ ಒಳ್ಳೆಯ ಸಂವಿಧಾನ ನೀಡಿದ್ದಾರೆ. ಈ ದೇಶದಲ್ಲಿ ಯಾವುದೇ ವ್ಯಕ್ತಿ ಯಾವುದೇ ಧರ್ಮ ಅಥವಾ ಯಾವುದೇ ದೇವರನ್ನು ಪೂಜಿಸಲು ಸ್ವತಂತ್ರನಿದ್ದಾನೆ. ಸಂವಿಧಾನದಲ್ಲಿ ಎಲ್ಲಿ ಕೂಡ ಹಿಂದುತ್ವದ ಬಗ್ಗೆ ಉಲ್ಲೇಖ ಇಲ್ಲ. ಆದರೆ 12ನೇ ಶತಮಾನದಲ್ಲಿ ಬಸವಣ್ಣ ಬೋಧಿಸಿದ ಸಮಾನತೆ ಮತ್ತು ಮಾನವತೆಯ ತತ್ವವನ್ನು ಸಿಎಂ ಬೊಮ್ಮಾಯಿ ಉಲ್ಲಂಘಿಸುತ್ತಿದ್ದಾರೆ ಎಂದು ವಿಶ್ವನಾಥ್ ಹೇಳಿದರು.
ನಮ್ಮ ಮುಖ್ಯಮಂತ್ರಿಯ ಹೆಸರು ಬಸವಣ್ಣ. ಆದರೆ ಬಸವ ತತ್ವವನ್ನು ಉಲ್ಲಂಘಿಸುತ್ತಿದ್ದಾರೆ ಅನಿಸುತ್ತಿದೆ. ಯಾರು ಕೂಡ ಮತಾಂತರ ನಿಷೇಧ ಕಾನೂನನ್ನು ಒಪ್ಪಲ್ಲ. ಹಲವು ಆರೆಸ್ಸೆಸ್ ನಾಯಕರ ಮಕ್ಕಳು ಇತರ ಧರ್ಮೀಯರನ್ನು ಮದುವೆಯಾಗಿದ್ದಾರೆ. ಅವರನ್ನು ಜೈಲಿಗೆ ತಳ್ಳಲು ಸಾಧ್ಯವಿದೆಯೇ.. ಸಿನಿಮಾ ನಟ-ನಟಿಯರು ಮುಸ್ಲಿಮರನ್ನು ಮದುವೆಯಾಗಿದ್ದಾರೆ. ಅವರನ್ನು ಏನು ಮಾಡಲು ಆಗುತ್ತೆ ಎಂದು ಪ್ರಶ್ನಿಸಿದರು.
ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಡಬಲ್ ಗೇಮ್ ಆಡುತ್ತಿದ್ದಾರೆ. ವಿಧಾನಸಭೆಯ ಹೊರಗೆ ನಿಂತು ನಾವು ಮುಸ್ಲಿಮರ ಹಕ್ಕಿಗಾಗಿ ಧರಣಿ ಮಾಡಿದ್ದೇವೆ ಎನ್ನುತ್ತಾರೆ. ಒಳಗಿದ್ದಾಗ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಬಸವಣ್ಣನ ತತ್ವ ಬೋಧಿಸುವ ಮಠಗಳ ಸ್ವಾಮೀಜಿಗಳು ಮೌನವಾಗಿದ್ದಾರೆ. ಚಿತ್ರದುರ್ಗದ ಸ್ವಾಮೀಜಿಗೆ ಸರಕಾರದಿಂದ ಅನುದಾನ ಕೊಟ್ಟು ಬಾಯಿ ಮುಚ್ಚಿಸಿದ್ದಾರೆ. ಚಿಂತಕರು, ಸಾಹಿತಿಗಳು ಕೂಡ ಮೌನವಾಗಿದ್ದಾರೆ. ಅವರು ರಾಜ್ಯೋತ್ಸವ ಪ್ರಶಸ್ತಿಗಷ್ಟೇ ಸೀಮಿತರಾಗಿದ್ದಾರೆ ಎಂದು ದೂರಿದರು.
I am a BJP (BJP) member, but must say the reality. Former minister H Vishwanath, who has accused the VHP and the RSS of hijab and halal, has appealed to the government and former chief minister BS Yediyurappa to intervene.Speaking to reporters in Delhi, he said the Halal cut has been going on for many years. It is not fair to say that a community should not do business near the temple. The state government has urged me to intervene immediately.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm