12 ದಿನಗಳಲ್ಲಿ ಪೆಟ್ರೋಲಿಗೆ 7.20 ರೂ. ಏರಿಕೆ ; ಕಚ್ಚಾ ತೈಲ ದರ ನೆಪದಲ್ಲಿ ಜನರಿಗೆ ಬರೆ! ಕಡಿಮೆ ದರದಲ್ಲಿ ತೈಲ ನೀಡುವ ರಷ್ಯಾ ತಂತ್ರಕ್ಕೆ ಅಮೆರಿಕದಿಂದ ರೇಟ್ ಇಳಿಕೆಯ ಶಾಕ್ !  

02-04-22 03:12 pm       Bengaluru Correspondent   ಕರ್ನಾಟಕ

ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಸತತ 12ನೇ ದಿನವೂ ಏರಿಕೆಯಾಗಿದ್ದು ಇಂದು ತಲಾ 80 ಪೈಸೆ ಹೆಚ್ಚಳವಾಗಿದೆ. ಇದರಂತೆ 12 ದಿನಗಳಲ್ಲಿ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಗೆ 7.20 ರೂ. ಏರಿಕೆಯಾಗಿದ್ದು, ಜನಸಾಮಾನ್ಯರ ಮೇಲೆ ಬರೆ ಬೀಳುವಂತಾಗಿದೆ.

ಬೆಂಗಳೂರು, ಎ.2: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಸತತ 12ನೇ ದಿನವೂ ಏರಿಕೆಯಾಗಿದ್ದು ಇಂದು ತಲಾ 80 ಪೈಸೆ ಹೆಚ್ಚಳವಾಗಿದೆ. ಇದರಂತೆ 12 ದಿನಗಳಲ್ಲಿ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಗೆ 7.20 ರೂ. ಏರಿಕೆಯಾಗಿದ್ದು, ಜನಸಾಮಾನ್ಯರ ಮೇಲೆ ಬರೆ ಬೀಳುವಂತಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ ನೆಪದಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ದಿನವೂ ಏರಿಸಲಾಗುತ್ತಿದೆ.

ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಪೆಟ್ರೋಲ್ ದರ ದೇಶದಲ್ಲೇ ಅತಿ ಹೆಚ್ಚಾಗಿದ್ದು, 118 ರೂ.ಗೆ ಏರಿಕೆಯಾಗಿದೆ. ಇದೇ ವೇಳೆ, ಅಲ್ಲಿ ಡೀಸೆಲ್ ದರ 102 ರೂ.ಗೇರಿದೆ. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 102.60 ರೂ., ಚೆನ್ನೈನಲ್ಲಿ 109 ರೂ., ಕೊಲ್ಕತ್ತಾದಲ್ಲಿ 112 ರೂ.. ಬೆಂಗಳೂರಿನಲ್ಲಿ 108.30 ರೂ. ಆಗಿದೆ. ಮಾ.22ರಿಂದ ದಿನವೂ ತೈಲ ದರ ಏರಿಕೆಯಾಗುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಆಗುತ್ತಿರುವುದನ್ನು ಆಧರಿಸಿ ತೈಲ ಕಂಪನಿಗಳು ದರ ಏರಿಸಿದ್ದಾಗಿ ಹೇಳಲಾಗುತ್ತಿದೆ. ಆಯಾ ರಾಜ್ಯಗಳಲ್ಲಿ ತೆರಿಗೆ ದರ ಏರಿಳಿತ ಇರುವುದರಿಂದ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವೂ ವ್ಯತ್ಯಾಸ ಇದೆ. ಕಳೆದ 12 ದಿನಗಳಲ್ಲಿ ಹತ್ತು ಬಾರಿ ದಿನಕ್ಕೆ 80 ಪೈಸೆ, ಕೆಲವು ದಿನಗಳಲ್ಲಿ 50 ಪೈಸೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ದರಕ್ಕೆ ಹೆಚ್ಚುವರಿಯಾಗಿ ಸೇರುತ್ತಾ ಹೋಗಿದೆ. ಇದರಿಂದಾಗಿ ಕರ್ನಾಟಕದಲ್ಲಿ ಪೆಟ್ರೋಲ್ ದರ 108 ಆಗಿದ್ದರೆ, ಡೀಸೆಲ್ ದರ 92 ರೂ. ತಲುಪಿದೆ.

Russia-Ukraine war LIVE updates: Ukraine continue to advance against  Russian forces near Kyiv, says UK | Hindustan Times

ಕಡಿಮೆ ದರಕ್ಕೆ ತೈಲ ವಿಕ್ರಯಕ್ಕೆ ರಷ್ಯಾ ಪ್ಲಾನ್

ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮ ಕಚ್ಚಾ ತೈಲದ ದರ ಏರಿಕೆಯಾಗಿತ್ತು. ಇದರ ಪರೋಕ್ಷ ಪರಿಣಾಮ ಜಗತ್ತಿನ ನಾನಾ ದೇಶಗಳ ಮೇಲಾಗಿದ್ದು, ಆಯಾ ದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ದರವು ವಿಪರೀತ ಏರತೊಡಗಿತ್ತು. ಇದೇ ಸಂದರ್ಭದಲ್ಲಿ ರಷ್ಯಾ ತನ್ನ ಮೇಲೆ ಅಮೆರಿಕ ಸೇರಿದಂತೆ ಯುರೋಪ್ ರಾಷ್ಟ್ರಗಳು ವ್ಯಾಪಾರ ನಿರ್ಬಂಧ ಹೇರಿರುವುದರಿಂದ ತೃತೀಯ ಜಗತ್ತಿನ ದೇಶಗಳಿಗೆ ಕಡಿಮೆ ದರದಲ್ಲಿ ತೈಲವನ್ನು ನೀಡಲು ಮುಂದಾಗಿತ್ತು. ಭಾರತವು ಕೂಡ ರಷ್ಯಾದಿಂದ ಕಡಿಮೆ ದರದಲ್ಲಿ ತೈಲ ಪಡೆಯಲು ಮುಂದಾಗಿತ್ತು. ಭಾರತವು ಅಮೆರಿಕ, ಸೌದಿ ಅರೇಬಿಯಾ ಮತ್ತು ರಷ್ಯಾದಿಂದ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುತ್ತಿದೆ.

ಇಂಥ ಸಂದರ್ಭದಲ್ಲೇ ಅಮೆರಿಕವು ರಷ್ಯಾಕ್ಕೆದುರಾಗಿ ಮುಯ್ಯಿಗೆ ಮುಯ್ಯಿ ಎನ್ನುವಂತೆ ತನ್ನ ತೈಲ ದರವನ್ನು ದಿಢೀರ್ ಇಳಿಕೆ ಮಾಡಿದೆ. ಮಾರ್ಚ್ 23ಕ್ಕೆ ಕಚ್ಚಾ ತೈಲ ದರವು 120 ಡಾಲರ್ ಗೆ ಏರಿಕೆಯಾಗಿ ನಾಗಾಲೋಟದ ಮುನ್ಸೂಚನೆ ನೀಡಿತ್ತು. ಆದರೆ ಎಪ್ರಿಲ್ 1ರಂದು ಅಮೆರಿಕವು ತನ್ನ ದಾಸ್ತಾನು ಕೇಂದ್ರಗಳಿಂದ ಕಚ್ಚಾ ತೈಲವನ್ನು ಬಿಡುಗಡೆ ಮಾಡಿದ್ದು, ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ದಿಢೀರ್ ಇಳಿಕೆಯಾಗಿದೆ.

I will be a President for all Americans: Joe Biden after winning US  Presidential election | World News | Zee News

ರಷ್ಯಾ ತಂತ್ರಕ್ಕೆ ತೈಲದ ದರ ಇಳಿಕೆಯ ಶಾಕ್

ಅಮೆರಿಕದ ಬ್ರೆಂಟ್ ಕಚ್ಚಾ ತೈಲ ದರವು ಎಪ್ರಿಲ್ 1ರಂದು 105 ಡಾಲರ್ ಗೆ ಇಳಿಕೆಯಾಗಿದೆ. ಅಲ್ಲದೆ, ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಏರುತ್ತಿರುವ ತೈಲ ದರವನ್ನು ನಿಯಂತ್ರಿಸುವುದಕ್ಕಾಗಿ ದಿನಕ್ಕೆ 10 ಲಕ್ಷ ಬ್ಯಾರಲ್ ಗಳಂತೆ ಮುಂದಿನ ಆರು ತಿಂಗಳ ವರೆಗೆ ಮಾರುಕಟ್ಟೆಗೆ ತೈಲ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇದರಿಂದಾಗಿ ಕಡಿಮೆ ದರದಲ್ಲಿ ತೈಲವನ್ನು ನೀಡಲು ಮುಂದಾಗಿರುವ ರಷ್ಯಾಕ್ಕೆ ಅಮೆರಿಕ ಶಾಕ್ ನೀಡಿದೆ. ಇದರ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರವು ನಿಯಂತ್ರಣಕ್ಕೆ ಬರುವ ಸಾಧ್ಯತೆಯಿದೆ. ಅಲ್ಲದೆ, ಭಾರತ ಸೇರಿದಂತೆ ರಷ್ಯಾದ ಮಿತ್ರ ರಾಷ್ಟ್ರಗಳು ಕಡಿಮೆ ದರಕ್ಕೆ ತೈಲವನ್ನು ಪಡೆಯಲು ಮುಂದಾದ ಬೆನ್ನಲ್ಲೇ ಅಮೆರಿಕವು ದರವನ್ನೇ ಇಳಿಸಿದ್ದು ಜಾಗತಿಕ ತೈಲ ಮಾರುಕಟ್ಟೆಯ ನಿಯಂತ್ರಣ ಸಾಧಿಸಿದೆ. ಹೀಗಾಗಿ ರಷ್ಯಾವು ತನ್ನ ತೈಲವನ್ನು ಮಾರಲು ಇದಕ್ಕಿಂತಲೂ ಕಡಿಮೆಗೆ ಇಳಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.

Petrol and diesel prices were hiked today by 80 paise a litre each, taking the total increase in rates in the last 12 days to ₹ 7.20 per litre. Petrol in Delhi will now cost ₹ 102.61 per litre as against ₹ 101.81 previously, while diesel rates have gone up from ₹ 93.07 per litre to ₹ 93.87, according to a price notification of state fuel retailers.