ಜೆಡಿಎಸ್ ಪಾಲಿಗೆ ಬಿಗ್ ಶಾಕ್ ; ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ಮುಖಂಡ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ! ಚುನಾವಣೆ ವೇಳೆಗೆ ಕೇಸರಿ ಪಾಳಯಕ್ಕೆ ! 

03-04-22 10:54 pm       HK Desk news   ಕರ್ನಾಟಕ

ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಷ್ಟೇ ಸೀಮಿತವಾಗಿದ್ದ ವಿಧಾನ ಪರಿಷತ್ ಸಭಾಪತಿ, ಹಿರಿಯ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಕೊನೆಗೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹುಬ್ಬಳ್ಳಿ, ಎ.3: ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಷ್ಟೇ ಸೀಮಿತವಾಗಿದ್ದ ವಿಧಾನ ಪರಿಷತ್ ಸಭಾಪತಿ, ಹಿರಿಯ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಕೊನೆಗೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮುಂಬರುವ ಚುನಾವಣೆ ವೇಳೆಗೆ ಬಿಜೆಪಿ ಸೇರುವುದು ಬಹುತೇಕ ಖಚಿತ ಎಂದು ಬಸವರಾಜ ಹೊರಟ್ಟಿ  ತಿಳಿಸಿದ್ದಾರೆ. 

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆ ವಿಚಾರದಲ್ಲಿ ಈಗಾಗಲೇ ಚರ್ಚೆಗಳು ನಡೆದಿವೆ. ಬಹುತೇಕ ಮುಂದಿನ ದಿನಗಳಲ್ಲಿ ಬಿಜೆಪಿ ಸೇರುವುದು ಖಚಿತ. ಈಗ ಸಭಾಪತಿ ಸ್ಥಾನದಲ್ಲಿರುವುದರಿಂದ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವುದಕ್ಕೆ ಆಗಲ್ಲ. ಮುಂದೆ ನಾನೇ ಈ ಬಗ್ಗೆ ತಿಳಿಸಲಿದ್ದೇನೆ ಎಂದು ತಿಳಿಸಿದರು. 

This is a golden period for me: BS Yediyurappa | Deccan Herald

ಬಿಜೆಪಿ ನಾಯಕರೊಂದಿಗೆ ಈ ಬಗ್ಗೆ ಮಾತುಕತೆ ಆಗಿದೆ. ಎಲ್ಲ ನಾಯಕರಿಂದಲು ಸಹಮತ ವ್ಯಕ್ತವಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಮುಖ್ಯಮಂತ್ರಿ, ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಸಹಮತ ತೋರಿದ್ದಾರೆ ಎಂದು ಹೊರಟ್ಟಿ ಹೇಳಿದರು. 

HD Kumarswamy led coalition government falls in Karnataka; BJP to stake  claim - The Indian Wire

ಯಾವಾಗ ಬಿಜೆಪಿ ಸೇರುತ್ತೀರಿ ಎಂಬ ಪ್ರಶ್ನೆಗೆ, ಬಹುತೇಕ ಮುಂದಿನ ಚುನಾವಣೆ ಘೋಷಣೆಯಾದ ನಂತರ ಬಿಜೆಪಿ ಸೇರ್ಪಡೆ ಪ್ರಕ್ರಿಯೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೂ ಈ ವಿಷಯವಾಗಿ ಚರ್ಚಿಸಿದ್ದೇನೆ. ಎಲ್ಲರ ಅನುಮತಿ ಪಡೆದು ಬಿಜೆಪಿ ಸೇರುತ್ತಿದ್ದೇನೆ ಎಂದರು. ಬಸವರಾಜ ಹೊರಟ್ಟಿ ಜನತಾ ಪರಿವಾರದ ಹಿರಿಯ ಮುಖಂಡರಾಗಿದ್ದು ಉತ್ತರ ಕರ್ನಾಟಕದಲ್ಲಿ ಇರುವ ಜೆಡಿಎಸ್ ಪಾಲಿನ ಏಕೈಕ ಲಿಂಗಾಯತ ಪ್ರಭಾವಿ ಮುಖಂಡ. ಇವರ ಬಿಜೆಪಿ ಸೇರ್ಪಡೆಯಿಂದ ಹುಬ್ಬಳ್ಳಿ- ಧಾರವಾಡದಲ್ಲಿ ಬಿಜೆಪಿಗೆ ಮತ್ತಷ್ಟು ಶಕ್ತಿ ಸಿಗಲಿದೆ. ಅಲ್ಲದೆ, ಪರಿಷತ್ ಸಭಾಪತಿ ಸ್ಥಾನವನ್ನೂ ಹೊರಟ್ಟಿ ಉಳಿಸಿಕೊಳ್ಳಲಿದ್ದಾರೆ.

The Vidhan Sabha Chairperson, senior JDS leader Basavaraja, who was limited to the rumor that the BJP will be joining the party, has finally made it clear. The BJP is almost certain to join the forthcoming elections, Basavaraja said.