ಸಂಪುಟಕ್ಕೆ ಸರ್ಜರಿ ; ಏಳೆಂಟು ಹಿರಿಯ ಸಚಿವರು ಔಟ್ ಆಗೋದು ಖಚಿತ, ಚುನಾವಣೆ ದೃಷ್ಟಿಯಲ್ಲಿ ಸಂಪುಟ ಕಸರತ್ತು, ಯಾರಿಗೆ ಲಕ್, ಯಾರು ಔಟ್ ?

05-04-22 07:26 pm       Bengaluru Correspondent   ಕರ್ನಾಟಕ

ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ದೃಷ್ಟಿ ಇರಿಸಿಕೊಂಡು ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿ ನಡೆಸಲು ಕೇಂದ್ರ ನಾಯಕರು ಮುಂದಾಗಿದ್ದಾರೆ.

ಬೆಂಗಳೂರು, ಎ.5: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ದೃಷ್ಟಿ ಇರಿಸಿಕೊಂಡು ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿ ನಡೆಸಲು ಕೇಂದ್ರ ನಾಯಕರು ಮುಂದಾಗಿದ್ದಾರೆ. ಇದೇ ವೇಳೆ, ಹಾಲಿ ಇರುವ ಹಿರಿಯ ಸಚಿವರು ಮತ್ತು ಸಚಿವ ಖಾತೆ ನಿಭಾಯಿಸುವಲ್ಲಿ ನಿರ್ಲಕ್ಷ್ಯ ತೋರಿರುವ ಆಧಾರದಲ್ಲಿ ಎಂಟರಿಂದ ಹತ್ತು ಸಚಿವರನ್ನು ಕೈಬಿಟ್ಟು ಹೊಸಬರಿಗೆ ಸ್ಥಾನ ನೀಡುವುದು ಖಾತ್ರಿಯಾಗಿದೆ. ಹೀಗಾಗಿ ಸಂಪುಟ ವಿಸ್ತರಣೆಯ ಬದಲು ಪುನಾರಚನೆ ಆಗುವ ಸಾಧ್ಯತೆ ಕಂಡುಬಂದಿದೆ. ಯಾರೆಲ್ಲ ಸಚಿವರನ್ನು ಕೈಬಿಡಬೇಕು ಎನ್ನುವ ಪಟ್ಟಿ ಹಿಡಿದು ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ.

ಸದ್ಯಕ್ಕೆ ನಾಲ್ಕು ಸಚಿವ ಸ್ಥಾನಗಳು ಖಾಲಿಯಿದ್ದು, ಅದನ್ನು ಭರ್ತಿ ಮಾಡುವ ಜೊತೆಗೆ ಚುನಾವಣೆ ಮುಂದಿಟ್ಟು ಸಂಪುಟ ರಚಿಸಲು ಕೇಂದ್ರ ನಾಯಕರು ಮುಂದಾಗಿದ್ದಾರೆ. ಬಿಜೆಪಿ ರಾಜ್ಯ ನಾಯಕರು ಮತ್ತು ಆರೆಸ್ಸೆಸ್ ಸೂಚನೆಯಂತೆ ಸಿಎಂ ಬಸವರಾಜ ಬೊಮ್ಮಾಯಿ ಅಳೆದು ತೂಗಿ ಪಟ್ಟಿ ರಚಿಸಲು ದೆಹಲಿ ವರಿಷ್ಠರತ್ತ ತೆರಳಿದ್ದಾರೆ. ಸಂಪುಟ ಪುನಾರಚನೆ ಸುಳಿವು ಸಿಗುತ್ತಿದ್ದಂತೆ ಸ್ಥಾನ ಕಳಕೊಳ್ಳುವ ಸಚಿವರು ಮತ್ತು ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ಕೂಡ ದೆಹಲಿಗೆ ತೆರಳಿದ್ದಾರೆ.

People of Karnataka suffering due to politics over hijab, halal: Eshwarappa  | Deccan Herald

Remove C P Yogeshwar from Cabinet, MLA demands | Deccan Herald

ಕೆಲವು ಮೂಲಗಳ ಪ್ರಕಾರ, ಏಳೆಂಟು ಮಂದಿಯನ್ನು ಸಚಿವ ಸ್ಥಾನದಿಂದ ಕೈಬಿಟ್ಟು ಜಾತಿ ಸಮೀಕರಣದ ಜೊತೆಗೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ಸಮತೋಲನ ಆಗುವ ರೀತಿ ಸಂಪುಟ ಪುನಾರಚನೆ ಆಗಲಿದೆ ಎನ್ನಲಾಗುತ್ತಿದೆ. ಸಚಿವ ಸ್ಥಾನದಿಂದ ಕೈಬಿಡುವ ಪಟ್ಟಿಯಲ್ಲಿ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಸಿಸಿ ಪಾಟೀಲ್, ಪ್ರಭು ಚೌಹಾಣ್, ಶಶಿಕಲಾ ಜೊಲ್ಲೆ, ಶಂಕರ್ ಮುನೇನಕೊಪ್ಪ, ಎಂಟಿಬಿ ನಾಗರಾಜ್ ಸೇರಿ ಹಲವರ ಹೆಸರಿದೆ ಎನ್ನಲಾಗಿದೆ. ಲಿಂಗಾಯತ, ಒಕ್ಕಲಿ, ಕುರುಬ, ದಲಿತ ಹೀಗೆ ಕೋಟಾಗಳಡಿ ಹೊಸಬರು ಸ್ಥಾನ ಪಡೆಯಲಿದ್ದಾರೆ. ದಲಿತ ಕೋಟಾದಡಿ ಅರವಿಂದ ಲಿಂಬಾವಳಿ, ಒಕ್ಕಲಿಗ ಬಲದಲ್ಲಿ ಯೋಗೀಶ್ವರ್ ಮತ್ತೆ ಸಚಿವರಾದರೂ ಅಚ್ಚರಿಯಿಲ್ಲ. 

M P Renukacharya seeks representation for Davangere in cabinet | Deccan  Herald

Congress party workers try to barge into house of former minister Ramesh  Jarkiholi- The New Indian Express

ಇದೇ ವೇಳೆ, ಸಚಿವ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದು ದೆಹಲಿ ನಾಯಕರ ಮೂಲಕ ಲಾಬಿ ನಡೆಸುತ್ತಿದ್ದಾರೆ. ರೇಣುಕಾಚಾರ್ಯ, ಯೋಗೀಶ್ವರ್, ವಿಜಯೇಂದ್ರ, ಅರವಿಂದ ಬೆಲ್ಲದ, ರಾಜಕುಮಾರ್ ಪಾಟೀಲ್ ಸೇಡಂ, ಬಸವನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಹೀಗೆ ಹಲವರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಯಾರಿಗೆ ಲಕ್ ಸಿಗಲಿದೆ, ಸಚಿವ ಸ್ಥಾನ ಲಭಿಸಲಿದೆ ಎನ್ನುವುದು ಸದ್ಯದ ಕುತೂಹಲ. ಅಲ್ಲದೆ, ಸಚಿವ ಸಂಪುಟಕ್ಕೆ ಮಾತ್ರ ಸರ್ಜರಿಯೋ, ರಾಜ್ಯ ಬಿಜೆಪಿಗೂ ಸರ್ಜರಿ ಆಗುತ್ತಾ ಅನ್ನುವ ಕುತೂಹಲವೂ ಇದೆ. ಮುಂದಿನ ಚುನಾವಣೆಯಲ್ಲಿ 150 ಸೀಟು ಗೆಲ್ಲುವುದಕ್ಕೆ ಏನೇನು ಮಾಡಬೇಕೋ ಅದನ್ನು ರಿಪೋರ್ಟ್ ನೀಡುವಂತೆ ಅಮಿತ್ ಷಾ ಸೂಚನೆ ನೀಡಿದ್ದರಿಂದ ಬೊಮ್ಮಾಯಿ ದೆಹಲಿ ಪಯಣ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Yediyurappa countdown on as CM? He says party will take decision today

ಇನ್ನೊಂದೆಡೆ, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಅಪವಾದ ಹೋಗಲಾಡಿಸಿ ಲಿಂಗಾಯತ ಮತ ಬ್ಯಾಂಕನ್ನು ಗಟ್ಟಿಗೊಳಿಸುವುದಕ್ಕಾಗಿ ಪಕ್ಷ ಕಸರತ್ತು ನಡೆಸಿದೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಸ್ಥಾನ ನೀಡಬೇಕೆಂಬ ಒತ್ತಡದ ನಡುವೆಯೇ ಅದರ ಬದಲಿಗೆ ಲಿಂಗಾಯತ ಕೋಟಾದಡಿ ಅರವಿಂದ ಬೆಲ್ಲದ, ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಮುನ್ನೆಲೆಗೆ ತರುವ ಬಗ್ಗೆಯೂ ಚಿಂತನೆ ಇದೆ. ಆದರೆ ಚುನಾವಣೆ ವರ್ಷದಲ್ಲಿ ಯಡಿಯೂರಪ್ಪ ಕುಟುಂಬದ ಜೊತೆಗೆ ವೈರತ್ವ ಕಟ್ಟಿಕೊಳ್ಳುವ ಬದಲು ವಿಜಯೇಂದ್ರಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡುವ ಸಾಧ್ಯತೆಯೂ ಇದೆ.

Amit Shah to visit Jammu and Kashmir on October 23 amid spurt in targeted  killings | India News – India TV

ಇತ್ತೀಚೆಗೆ ಗೃಹ ಸಚಿವ ಅಮಿತ್ ಷಾ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಸಂಪೂರ್ಣ ಉಸ್ತುವಾರಿಯನ್ನು ವಿಜಯೇಂದ್ರ ನೋಡಿಕೊಂಡಿದ್ದರು. ಆಮೂಲಕ ವೀರಶೈವ- ಲಿಂಗಾಯತ ಸಮುದಾಯದಲ್ಲಿ ವಿಜಯೇಂದ್ರ ಮಹತ್ವದ ಸ್ಥಾನದಲ್ಲಿದ್ದಾರೆ ಎಂಬುದನ್ನು ಪರೋಕ್ಷವಾಗಿ ಅಮಿತ್ ಷಾಗೆ ರವಾನಿಸಲಾಗಿತ್ತು. ಹೀಗಿದ್ದರೂ, ವಿಜಯೇಂದ್ರ ಮುಂಚೂಣಿಗೆ ಬರದಂತೆ ನೋಡಿಕೊಳ್ಳಲು ವಿರೋಧಿ ಬಣ ಕೆಲಸ ಮಾಡುತ್ತಿದ್ದು ಆ ಕಾರಣದಿಂದ ಸಚಿವ ಸ್ಥಾನ ಸಿಗದಂತೆ ಮಾಡಲು ಕಸರತ್ತು ಕೂಡ ನಡೆದಿದೆ. ಆದರೆ ಇದಕ್ಕೆಲ್ಲ ವರಿಷ್ಠರು ಯಾವ ರೀತಿ ನಿರ್ಧಾರ ಕೈಗೊಳ್ಳುತ್ತಾರೋ, ಅದರ ಮೇಲೆ ಎಲ್ಲವೂ ನಿಂತಿದೆ. ರಾಜ್ಯದ ಮಟ್ಟಿಗೆ ಸಂಪೂರ್ಣ ಮಾಹಿತಿ ಇಟ್ಟುಕೊಂಡಿರುವ ಅಮಿತ್ ಷಾ ಸೂಚನೆಯೇ ರಾಜ್ಯ ಬಿಜೆಪಿ ಪಾಲಿಗೆ ಅಂತಿಮ ಆಗಲಿದೆ.

The Union leaders have come forward to hold the Cabinet of Ministers in keeping with the vision of the Assembly elections next year.