ಮಸೀದಿ ಆಜಾನ್ ; 55 ಡೆಸಿಬಲ್ ಒಳಗಿರುವಂತೆ ಆದೇಶ, ಧ್ವನಿವರ್ಧಕಕ್ಕೆ ಪೊಲೀಸ್ ಅನುಮತಿ ಕಡ್ಡಾಯ, ಬೆಂಗಳೂರಿನಲ್ಲಿ 40 ಪ್ರಕರಣ ದಾಖಲು !

05-04-22 08:04 pm       Bengaluru Correspondent   ಕರ್ನಾಟಕ

ಮಸೀದಿಯಲ್ಲಿ ಧ್ವನಿವರ್ಧಕಗಳ ಶಬ್ದಮಾಲಿನ್ಯ ಕಡಿಮೆಗೊಳಿಸಬೇಕು, ಈ ಬಗ್ಗೆ ಹೈಕೋರ್ಟ್ ನೀಡಿರುವ ಆದೇಶ ಪಾಲನೆ ಮಾಡಬೇಕು ಎಂಬುದಾಗಿ ಹಿಂದು ಸಂಘಟನೆಗಳು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿವೆ.

ಬೆಂಗಳೂರು, ಎ.5: ಮಸೀದಿಯಲ್ಲಿ ಧ್ವನಿವರ್ಧಕಗಳ ಶಬ್ದಮಾಲಿನ್ಯ ಕಡಿಮೆಗೊಳಿಸಬೇಕು, ಈ ಬಗ್ಗೆ ಹೈಕೋರ್ಟ್ ನೀಡಿರುವ ಆದೇಶ ಪಾಲನೆ ಮಾಡಬೇಕು ಎಂಬುದಾಗಿ ಹಿಂದು ಸಂಘಟನೆಗಳು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿವೆ. ಈಗಾಗ್ಲೇ ಈ ಬಗ್ಗೆ ಬೆಂಗಳೂರಿನಲ್ಲಿ ಹಿಂದು ಸಂಘಟನೆಗಳ ನಾಯಕರು ಅಭಿಯಾನ ಕೈಗೆತ್ತಿಕೊಂಡಿದ್ದು ಮಸೀದಿ ಆಜಾನ್ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಇದೇ ವೇಳೆ, ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಆರು ತಿಂಗಳ ಹಿಂದೆಯೇ ಕೋರ್ಟ್ ಆದೇಶದ ಬಗ್ಗೆ ಬೆಂಗಳೂರು ನಗರ ವ್ಯಾಪ್ತಿಯ ಮಂದಿರ, ಮಸೀದಿಗಳಿಗೆ ನೋಟೀಸ್ ನೀಡಿದ್ದೇವೆ. ಅಲ್ಲದೆ, ಕಾರ್ಖಾನೆ, ಪಬ್ ಮಾಲೀಕರಿಗೂ ನೋಟೀಸ್ ನೀಡಿದ್ದೇವೆ. ಇಂತಿಷ್ಟೇ ಡೆಸಿಬಲ್ ಇರುವಷ್ಟು ಧ್ವನಿವರ್ಧಕ ಬಳಸುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದ್ದಾರೆ.

20% of Karnataka high court judges' posts vacant | Bengaluru News - Times  of India

ಅಲ್ಲದೆ, ಬೆಂಗಳೂರಿನಲ್ಲಿ ಧಾರ್ಮಿಕ ಮುಖಂಡರ ಜೊತೆಗೂ ಸಭೆ ನಡೆಸಲಾಗಿದೆ. ಹೈಕೋರ್ಟ್ ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡಿದ್ದೇವೆ. ಹೆಚ್ಚಿನ ಕಡೆ ಧಾರ್ಮಿಕ ಮುಖಂಡರು ಕೋರ್ಟ್ ಆದೇಶಕ್ಕೆ ತಲೆಬಾಗಿದ್ದಾರೆ. ಹೈಕೋರ್ಟ್ ಆದೇಶ ಏನಿದೆ, ಅದನ್ನು ಯಥಾವತ್ ಪಾಲನೆ ಮಾಡಬೇಕು. ಕಾನೂನು ಉಲ್ಲಂಘಿಸಿದರೆ ಶಿಕ್ಷೆ ವಿಧಿಸಲಾಗುವುದು. ಈಗಾಗಲೇ ನಗರ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಕೇಸ್ ಗಳನ್ನ ದಾಖಲಿಸಲಾಗಿದೆ. ಹಲವೆಡೆ ಮೈಕ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

India News | Plan To Broadcast Hindu Prayers During Azaan in Karnataka | 📰  LatestLY

ಮಸೀದಿ ಧ್ವನಿವರ್ಧಕ- ಅನುಮತಿ ಕಡ್ಡಾಯ

ಇದೇ ವೇಳೆ, ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಅಳವಡಿಸುವುದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆಗೆ ಪೊಲೀಸ್ ಅನುಮತಿಯನ್ನೂ ಕಡ್ಡಾಯ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು ಬೆಂಗಳೂರು ನಗರದ ಮಸೀದಿ ವ್ಯಾಪ್ತಿಯಲ್ಲಿ 55 ಡೆಸಿಬಲ್ ಮೀರದಂತೆ ಸ್ಪೀಕರ್ ಅಳವಡಿಸಲು ಸೂಚನೆ ನೀಡಲಾಗಿದೆ. ದಿನಕ್ಕೆ 5 ಬಾರಿ ಆಜಾನ್ ಕೂಗುವುದಕ್ಕೆ ಪ್ರತ್ಯೇಕ ಅನುಮತಿ ಪಡೆಯಬೇಕು. ರಾಜ್ಯಾದ್ಯಂತ ಮಸೀದಿಗಳಲ್ಲಿ ಶಬ್ದ ನಿಯಂತ್ರಣ ಮಾಪಕ ಅಳವಡಿಸಬೇಕು. ನಿಯಮ ಬಾಹಿರವಾಗಿ ಶಬ್ಧ ಹೊರಬಂದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ಪೊಲೀಸ್ ಠಾಣೆಗಳಿಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

15 Famous Temples in Bangalore For Divine Blessings 2022

83 ದೇವಸ್ಥಾನ, 125 ಮಸೀದಿಗಳಿಗೆ ನೋಟಿಸ್

ಇದೇ ವೇಳೆ, ಶಬ್ದ ಮಾಲಿನ್ಯ ವಿಚಾರದಲ್ಲಿ ನಿಯಮ‌ ಪಾಲಿಸದ ಮಂದಿರ, ಮಸೀದಿ, ಚರ್ಚ್ ಗಳಿಗೆ ರಾಜ್ಯ ಸರಕಾರ ನೋಟೀಸ್ ನೀಡಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 125 ಮಸೀದಿ, 83 ದೇವಸ್ಥಾನ, 22 ಚರ್ಚ್ ಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಒಟ್ಟಾರೆ 301 ಧಾರ್ಮಿಕ ಸ್ಥಳಗಳಿಗೆ ಈ ಬಗ್ಗೆ ನೋಟಿಸ್ ಜಾರಿ ಮಾಡಿದ್ದು, 55 ಡೆಸಿಬಲ್ ಗಿಂತ ಹೆಚ್ಚು ಧ್ವನಿವರ್ಧಕ ಯಾವುದೇ ಧಾರ್ಮಿಕ ಆಚರಣೆಗೂ ಬಳಸದಂತೆ ಹೈಕೋರ್ಟ್ ಆದೇಶವನ್ನು ಯಥಾವತ್ ಪಾಲನೆ ಮಾಡಲು ಸರಕಾರ ಸೂಚನೆ ನೀಡಿದೆ.

The situation is turning more serious in Karnataka with Hindu organisations planning to broadcast Hindu prayers at the time of azaan in mosques.