ಸಂಪುಟ ವಿಸ್ತರಣೆ ಮುಹೂರ್ತ ಮತ್ತೆ ಮುಂದಕ್ಕೆ, ಎ.16ಕ್ಕೆ ಜೆಪಿ ನಡ್ಡಾ ಬೆಂಗಳೂರಿಗೆ, ಆಮೇಲಷ್ಟೇ ಸಂಪುಟ ನಿರ್ಧಾರ

07-04-22 11:31 am       Bengaluru Correspondent   ಕರ್ನಾಟಕ

​​​​​​​ಬಹುನಿರೀಕ್ಷಿತ ಸಂಪುಟ ವಿಸ್ತರಣೆಯ ಮುಹೂರ್ತ ಮತ್ತೆ ಮುಂದಕ್ಕೆ ಹೋಗಿದೆ. ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗಿದ್ದರಿಂದ ಇದೇ ವಾರದಲ್ಲಿ ಸಂಪುಟ ವಿಸ್ತರಣೆ ಆಗಲಿದೆ ಎನ್ನುವ ವದಂತಿ ಹಬ್ಬಿತ್ತು.

ಬೆಂಗಳೂರು, ಎ.7: ಬಹುನಿರೀಕ್ಷಿತ ಸಂಪುಟ ವಿಸ್ತರಣೆಯ ಮುಹೂರ್ತ ಮತ್ತೆ ಮುಂದಕ್ಕೆ ಹೋಗಿದೆ. ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗಿದ್ದರಿಂದ ಇದೇ ವಾರದಲ್ಲಿ ಸಂಪುಟ ವಿಸ್ತರಣೆ ಆಗಲಿದೆ ಎನ್ನುವ ವದಂತಿ ಹಬ್ಬಿತ್ತು. ಆದರೆ, ದೆಹಲಿಯಲ್ಲಿ ಅಮಿತ್ ಷಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿಗೆ ನಿರೀಕ್ಷಿತ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.

ಎ.16 ಮತ್ತು 17ರಂದು ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಅದರಲ್ಲಿ ಪಾಲ್ಗೊಳ್ಳಲು ಜೆಪಿ ನಡ್ಡಾ ಬರಲಿದ್ದಾರೆ. ಆ ಸಭೆಯ ಬಳಿಕ ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಅನ್ನುವ ಬಗ್ಗೆ ನಿರ್ಧಾರ ಆಗಲಿದೆ. ದೆಹಲಿಗೆ ತೆರಳಿದ್ದ ಸಿಎಂ ಬೊಮ್ಮಾಯಿಗೆ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದರೂ, ಕಾರ್ಯಕಾರಿಣಿ ಸಭೆಯ ಬಳಿಕ ನಡೆಸುವಂತೆ ಸೂಚನೆ ನೀಡಿದ್ದಾರೆ. ಆದರೆ ಚುನಾವಣೆ ವರ್ಷದಲ್ಲಿ ಹೊಸಬರಿಗೆ ಅವಕಾಶ ಕೊಟ್ಟು ಸಂಪುಟ ಪುನಾರಚನೆಗೆ ಒಲವು ಹೊಂದಿರುವ ಬೊಮ್ಮಾಯಿ, ಸಚಿವ ಸ್ಥಾನದಿಂದ ಯಾರನ್ನು ಕೈಬಿಡಬೇಕು ಅನ್ನುವ ಬಗ್ಗೆ ಪಟ್ಟಿ ಮಾಡಿಕೊಂಡು ಹೋಗಿದ್ದರು.

Politics is Not Physics, It's Chemistry': Before Crucial UP, Punjab Polls, Amit  Shah Talks About Coalition Govt

The rise of JP Nadda

ಪಟ್ಟಿ ಹಿಡಿದು ಹೋದ ಬೊಮ್ಮಾಯಿಗೆ ಆ ನಿರ್ಧಾರವನ್ನು ತಾವೇ ಮಾಡುವಂತೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಬೊಮ್ಮಾಯಿ ಅವರು ಒಂದು ಕಡೆಯಲ್ಲಿ ಅಡಕತ್ತರಿಗೆ ಸಿಲುಕಿದ್ದಾರೆ. ಸಂಪುಟಕ್ಕೆ ಸೇರಲು ಮತ್ತು ತಮ್ಮ ಸ್ಥಾನ ಹೋಗದಂತೆ ಎರಡೂ ಕಡೆಯಿಂದ ದೆಹಲಿ ಮಟ್ಟದಲ್ಲಿ ಲಾಬಿ ನಡೆಯುತ್ತಿದ್ದು ಇದರ ನಡುವೆ ಯಾರನ್ನು ಸಂಪುಟದಿಂದ ತೆಗೆದು ಹಾಕಬೇಕು, ಯಾರಿಗೆ ಅವಕಾಶ ನೀಡಬೇಕು ಎನ್ನುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಹೀಗಾಗಿ ಸದ್ಯಕ್ಕೆ ಆ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಾರದೆ ಬೊಮ್ಮಾಯಿ ಬೆಂಗಳೂರಿಗೆ ಹಿಂತಿರುಗಿದ್ದಾರೆ ಎನ್ನುವ ಮಾಹಿತಿಗಳಿವೆ.

May 23 is state coalition govt's last working day: MLA Renukacharya - News  Karnataka

Ramesh Jarkiholi reinduction talks on the cards- The New Indian Express

ಇದರಿಂದಾಗಿ ಸಂಪುಟ ಸೇರಬೇಕೆಂದು ತುದಿಗಾಲಲ್ಲಿ ನಿಂತಿದ್ದ ಶಾಸಕರಿಗೆ ಒಂದಷ್ಟು ನಿರಾಸೆಯಾಗಿದೆ. ಇದರ ನಡುವೆಯೂ ರೇಣುಕಾಚಾರ್ಯ, ಶ್ರೀಮಂತ ಪಾಟೀಲ್, ರಮೇಶ್ ಜಾರಕಿಹೊಳಿ ಮತ್ತಿತರರು ದೆಹಲಿಗೆ ತೆರಳಿದ್ದು, ಸಂಪುಟ ಸೇರಿಸಿಕೊಳ್ಳಲು ಗ್ರೀನ್ ಸಿಗ್ನಲ್ ಪಡೆಯಲು ದೆಹಲಿ ನಾಯಕರ ಎಡತಾಕಿದ್ದಾರೆ. ಸದ್ಯಕ್ಕೆ ನಿರೀಕ್ಷೆ ಮುಂದಕ್ಕೆ ಹೋಗಿದ್ದು ಬಿಜೆಪಿ ಕಾರ್ಯಕಾರಿಣಿ ಬಳಿಕ ಏನಾಗುತ್ತೆ ಅನ್ನುವುದಷ್ಟೇ ಕುತೂಹಲ.

BJP national president JP Nadeeka has instructed CM Basavaraja Bommai to perform surgery after the executive session of the state BJP on April 16 and 17. He has also advised the CM to provide a list of possible restructuring or expansion. It is understood that the High Command leaders will take a final decision on the list given by the CM. Against this backdrop, the process of rebuilding or expanding the volume is likely to take place from April 20 to 25.